Russia Ukraine war ರಷ್ಯಾ ದಾಳಿಗೆ ನಲುಗಿರುವ ಉಕ್ರೇನ್‌ನಲ್ಲಿ ಎಲಾನ್ ಮಸ್ಕ್‌ನ ಸ್ಟಾರ್ ಲಿಂಕ್ ಇಂಟರ್ನೆಟ್ ಸೇವೆಗೆ ಚಾಲನೆ!

By Suvarna News  |  First Published Feb 27, 2022, 10:00 PM IST
  • ರಷ್ಯಾ ದಾಳಿಯಿಂದ ಉಕ್ರೇನ್‌ನಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ ಭೀತಿ
  • ಆತಂಕ ನಿವಾರಿಸಲು ಎಲಾನ್ ಮಸ್ಕ್‌ನ ಸ್ಟಾರ್ ಲಿಂಕ್ ಸೇವೆಗೆ ಚಾಲನೆ
  • ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್ ಸೇವೆಗೆ ಚಾಲನೆ ನೀಡಿದ ಮಸ್ಕ್

ಉಕ್ರೇನ್(ಫೆ.27): ರಷ್ಯಾ ಸತತ ದಾಳಿಯಿಂದ ಉಕ್ರೇನ್ ತತ್ತರಿಸಿ ಹೋಗಿದೆ. ಎಲ್ಲಾ ದಿಕ್ಕುಗಳಿಂದ ರಷ್ಯಾ ತನ್ನ ದಾಳಿ ಮುಂದುವರಿಸಿದೆ. ಇದರಿಂದ ಹಲವು ನಗಗಳಲ್ಲಿ ವಿದ್ಯುತ್ ಕಡಿತಗೊಂಡಿದೆ. ಇಂಟರ್ನೆಟ್ ಸೇವೆ ಸ್ಥಗಿತಗೊಂಡಿದೆ.ಸಂಕಷ್ಟದಲ್ಲಿರುವ ಉಕ್ರೇನ್‌ಗೆ ಉದ್ಯಮಿ ಎಲಾನ್ ಮಸ್ಕ್ ನೆರವಿಗೆ ಬಂದಿದ್ದಾರೆ. ಎಲಾನ್ ಮಸ್ಕ್ ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್ ಸೇವೆಗೆ ಉಕ್ರೇನ್‌ನಲ್ಲಿ ಚಾಲನೆ ನೀಡಲಾಗಿದೆ.

ಉಕ್ರೇನ‌್‌ನಲ್ಲಿ ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಸಂಸ್ಥೆ ಉಪಗ್ರ ಆಧಾರಿತ ಸ್ಟಾರ್‌ಲಿಂಕ್ ಇಂಟರ್ನೆಟ್ ಸೇವೆಗೆ ಚಾಲನೆ ನೀಡಿದೆ. ಈ ಮಾಹಿತಿಯನ್ನು ಎಲಾನ್ ಮಸ್ಕ್ ಟ್ವಿಟರ್ ಮೂಲಕ ಖಚಿತಪಡಿಸಿದ್ದಾರೆ. ಉಕ್ರೇನ್‌ನ ಡಿಜಿಟಲ್ ಟ್ರಾನ್ಸ್‌ಫರ್ಮೇಶನ್ ಸಚಿವ ಮೈಖಲೋ ಫೆಡ್ರೋವ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಮಸ್ಕ್, ಉಕ್ರೇನ್‌ನಲ್ಲಿ ಸ್ಟಾರ್‌ಲಿಂಗ್ ಸೇವೆ ಚಾಲನೆಯಲ್ಲಿದೆ. ಮತ್ತಷ್ಟು ಕೇಂದ್ರಗಳಲ್ಲಿ ಶೀಘ್ರದಲ್ಲೇ ಸೇವೆ ಲಭ್ಯವಾಗಲಿದೆ ಎಂದಿದ್ದಾರೆ.

Latest Videos

undefined

ಅಮೆರಿಕ ಮೂಗು ತೂರಿಸೋದು ಬಿಟ್ರೆ ಎಲ್ಲಾ ಸರಿಯಾಗುತ್ತೆ ಎಂದ North Korea

ರಷ್ಯಾ ದಾಳಿ ಮಾಡಿದ ಬೆನ್ನಲ್ಲೇ ಉಕ್ರೇನ್ ಅಧಿಕಾರಿಗಳು ಎಲಾನ್ ಮಸ್ಕ್ ಸಂಪರ್ಕಿಸಿರುವ ಮಾಹಿತಿಯೂ ಬಹಿರಂಗಗೊಂಡಿದೆ. ಉಕ್ರೇನ್ ಇಂಟರ್ನೆಟ್ ಸೇವೆ ಮೇಲೆ ರಷ್ಯಾ ದಾಳಿ ಮಾಡುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಹಲವು ಕಡೆ ಇಂಟರ್ನಟ್ ಸೇವೆ ಕಡಿತಗೊಂಡಿದೆ. ಹೀಗಾಗಿ ಸ್ಪೇಸ್ ಎಕ್ಸ್ ಸಂಸ್ಥೆಯ ಸ್ಟಾರ್ ಲಿಂಕ್ ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್ ಸೇವೆ ಉಕ್ರೇನ್‌ಗೆ ಒದಗಿಸಲು ಮನವಿ ಮಾಡಿದ್ದರು ಎಂದು ಮಸ್ಕ್ ಹೇಳಿದ್ದಾರೆ.

ಉಕ್ರೇನ್ ಮೇಲೆ ರಷ್ಯಾ ಎಲ್ಲಾ ದಿಕ್ಕುಗಳಿಂದ ರಷ್ಯಾ ದಾಳಿ ಮಾಡುತ್ತಿದೆ. ಬಾಂಬ್ ದಾಳಿ, ಏರ್‌ಸ್ಟೈಕ್ ಸೇರಿದಂತೆ ಒಂದರ ಮೇಲೊಂದರಂತೆ ರಷ್ಯಾ ಸೇನೆ ದಾಳಿ ಮಾಡುತ್ತಲೇ ಇದೆ. ಇದರಿಂದ ಉಕ್ರೇನ್‌ನ ಹಲವು ಭಾಗಗಳಲ್ಲಿ ವಿದ್ಯುತ್ ಕಡಿತಗೊಂಡಿದೆ. ಉಕ್ರೇನ್ ಇಂಟರ್ನೆಟ್ ಸೇವೆ ಮೇಲೆ ದಾಳಿ ಇಡೀ ದೇಶವನ್ನು ಇತರರ ಸಂಪರ್ಕದಿಂದ ಕಡಿತಗೊಳಿಸಲು ರಷ್ಯಾ ಪ್ಲಾನ್ ಹಾಕಿಕೊಂಡಿದೆ. ಈಗಾಗಲೇ ವಿದ್ಯುತ್ ಕಡಿತದಿಂದ ಹಲವೆಡೆ ಇಂಟರ್ನೆಟ್ ಸೇವೆ ಲಭ್ಯವಿಲ್ಲ. 

Russia Ukraine Crisis: ಬೆಲಾರಸ್ ಗಡಿಯಲ್ಲಿ ಮಾತುಕತೆಗೆ ಉಕ್ರೇನ್ ಒಪ್ಪಿಗೆ!

ಉಕ್ರೇನ್ ಗುಪ್ತರ ಇಲಾಖೆ ಸರ್ಕಾರ ನೀಡಿದ ವರದಿಯಲ್ಲಿ ರಷ್ಯಾ ದಾಳಿ ಕುರಿತು ಹಲವು ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದೆ. ಇದರಲ್ಲಿ ಉಕ್ರೇನ್ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸುವುದು ಸೇರಿದೆ. ಉಕ್ರೇನ್‌ನಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿದರೆ ಇತರ ಎಲ್ಲಾ ದೇಶಗಳಿಂದ ಉಕ್ರೇನ್ ಒಂಟಿಯಾಗಲಿದೆ. ಇಷ್ಟೇ ಅಲ್ಲ ಉಕ್ರೇನ್‌ನಲ್ಲಿ ರಷ್ಯಾ ನಡೆಸುತ್ತಿರುವ ದಾಳಿಗಳ ಮಾಹಿತಿಗಳು ಯಾರಿಗೂ ತಿಳಿಯಲು ಸಾಧ್ಯವಿಲ್ಲ. ಉಕ್ರೇನ್‌ಗೆ ಯಾವ ದೇಶ ನೆರವು ನೀಡಲ ಸಾಧ್ಯವಿಲ್ಲ ಅನ್ನೋದು ಸತ್ಯ. ಇದೇ ಕಾರಣಕ್ಕೆ ರಷ್ಯಾ ಇಂಟರ್ನೆಟ್ ಸೇವೆ ಕಡಿತಗೊಳಿಸಲು ಮಾಸ್ಟರ್ ಪ್ಲಾನ್ ಹಾಕಿಕೊಂಡಿದೆ ಎಂದು ಗುಪ್ತಚರ ಸಂಸ್ಥೆ ವರದಿ ನೀಡಿತ್ತು. 

 2022ರಿಂದ ಸ್ಪೇಸ್‌ ಎಕ್ಸ್‌ನಿಂದ ಭಾರತದಲ್ಲಿ ಬ್ರಾಡ್‌ಬ್ಯಾಂಡ್‌ ಸೇವೆ
ಜಗತ್ತಿನ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ ಮಾಲೀಕತ್ವದ ಸ್ಪೇಸ್‌ ಎಕ್ಸ್‌ ಅಧೀನ ಸಂಸ್ಥೆ ಸ್ಟಾರ್‌ಲಿಂಕ್‌ ಭಾರತದಲ್ಲಿ 2022ರ ಡಿಸೆಂಬರ್‌ನಿಂದ ಉಪಗ್ರಹ ಆಧರಿತ ಬ್ರಾಡ್‌ಬ್ಯಾಂಡ್‌ ಸೇವೆ ಆರಂಭಿಸಲಿದೆ ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ 2 ಲಕ್ಷ ಸಕ್ರಿಯ ಟರ್ಮಿನಲ್‌ಗಳಿಗೆ ಭಾರತ ಸರ್ಕಾರದಿಂದ ಅನುಮತಿ ಕೋರಿದೆ.

‘ಸ್ಪೇಸ್‌ ಎಕ್ಸ್‌ ಮಾಲೀಕತ್ವದ ಅಧೀನ ಸಂಸ್ಥೆ ಸ್ಟಾರ್‌ಲಿಂಕ್‌ ಸ್ಯಾಟಲೈಟ್‌ ಕಮ್ಯುನಿಕೇಷನ್‌ ಪ್ರೈ.ಲಿ (ಎಸ್‌ಎಸ್‌ಸಿಪಿಎಲ್‌) ಭಾರತದಲ್ಲಿ ನ.1ರಿಂದ ತನ್ನ ಕಚೇರಿಯನ್ನು ಆರಂಭಿಸಿದೆ. ನಾವು ಇನ್ಮುಂದೆ ಪರವಾನಗಿ ಪಡೆಯಲು, ಬ್ಯಾಂಕ್‌ ಖಾತೆ ತೆರೆಯಲು ಅರ್ಜಿ ಸಲ್ಲಿಸಬಹುದು’ ಕಂಪನಿಯ ಭಾರತದ ನಿರ್ದೇಶಕ ಸಂಜಯ್‌ ಭಾರ್ಗವ ತಿಳಿಸಿದ್ದಾರೆ.

ಭಾರತದಿಂದ ಈಗಾಗಲೇ ಸುಮಾರು 5000 ಬ್ರಾಡ್‌ಬ್ಯಾಂಡ್‌ ಆರ್ಡರ್‌ ಇರುವುದಾಗಿ ಕಂಪನಿ ಹೇಳಿಕೊಂಡಿದೆ. ಕಂಪನಿಯು ಸೆಕೆಂಡಿಗೆ 50ರಿಂದ 150 ಮೆಗಾ ಬೈಟ್‌ ವೇಗದಲ್ಲಿ ಡೇಟಾ ಸೌಲಭ್ಯ ಒದಗಿಸಲು ಪ್ರತಿ ಗ್ರಾಹಕರಿಂದ 7,350 ರು. ಡೆಪಾಸಿಟ್‌ ಶುಲ್ಕ ಪಡೆಯಲಿದೆ. ಈ ಮೂಲಕ ಈಗಾಗಲೇ ಭಾರತದಲ್ಲಿ ಅಸ್ತಿತ್ವದಲ್ಲಿರುವ ರಿಲಯನ್ಸ್‌, ಜಿಯೋ, ಭಾರತಿ ಏರ್‌ಟೆಲ್‌, ವಡಾಫೋನ್‌ ಬ್ರಾಡ್‌ಬ್ಯಾಂಡ್‌ ಸೇವೆಗಳಿಗೆ ಪೈಪೋಟಿ ನೀಡಲಿದೆ.
 

click me!