ಯುದ್ಧ ಭೀತಿಯಲ್ಲಿರುವ ಪಾಕಿಸ್ತಾನಕ್ಕೆ ಬಿಗ್ ಶಾಕ್, 4.2 ತೀವ್ರತೆಯ ಭೂಕಂಪ

Published : May 05, 2025, 08:13 PM IST
ಯುದ್ಧ ಭೀತಿಯಲ್ಲಿರುವ ಪಾಕಿಸ್ತಾನಕ್ಕೆ ಬಿಗ್ ಶಾಕ್, 4.2 ತೀವ್ರತೆಯ ಭೂಕಂಪ

ಸಾರಾಂಶ

ಭಾರತ ಪೆಹಲ್ಗಾಂ ಉಗ್ರ ದಾಳಿಗೆ ಪ್ರತೀಕಾರ ತೀರಿಸಲು ಸಜ್ಜಾಗಿದೆ. ಭಾರತ ಟಾರ್ಗೆಟ್ ಉಗ್ರರು. ಆದರೆ ಪಾಕಿಸ್ತಾನ ಈಗಾಗಲೇ ತನ್ನ ಮೇಲೆ ಭಾರತ ದಾಳಿ ಮಾಡಲಿದೆ ಎಂದು  ಯುದ್ಧ ತಾಲೀಮು ನಡೆಸುತ್ತಿದೆ. ಇದರ ನಡುವೆ ಪಾಕಿಸ್ತಾನಕ್ಕೆ ಭಾರಿ ಹಿನ್ನಡೆಯಾಗಿದೆ. ಪಾಕಿಸ್ತಾನದಲ್ಲಿ 4.2 ತೀವ್ರತೆಯ ಭೂಕಂಪನವಾಗಿದೆ.

ಇಸ್ಲಾಮಾಬಾದ್(ಮೇ.05) ಪಾಕಿಸ್ತಾನದಲ್ಲಿ 4.2 ತೀವ್ರತೆಯ ಭೂಕಂಪನವಾಗಿದೆ. ಇಂದು ಸಂಜೆ ನಾಲ್ಕು ಗಂಟೆಗೆ ವೇಳೆಗೆ ಪಾಕಿಸ್ತಾನದ ಹಲೆವೆಡೆ ಭೂಮಿ ಕಂಪನಿಸಿದ ಅನುಭವವಾಗಿದೆ. ಹೀಗಾಗಿ ಹಲವರು ಮನೆ, ಕಟ್ಟಡಗಳಿಂದ ಹೊರಗೆ ಓಡಿ ಬಂದಿದ್ದಾರೆ. ಲಘು ಭೂಕಂಪನ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 4.2ರಷ್ಟು ತೀವ್ರತೆಯ ಭೂಕಂಪನ ದಾಖಲಾಗಿದೆ. ಉತ್ತರ ಪಾಕಿಸ್ತಾನ ಭಾಗದಲ್ಲಿ ಭೂಕಂಪನ ಕೇಂದ್ರ ಬಿಂದು ದಾಖಲಾಗಿದೆ.ಸುಮಾರು 10 ಕಿಲೋಮೀಟರ್ ಆಳದಲ್ಲಿ ಭೂಮಿ ಕಂಪಿಸಿದೆ ಎಂದು ರಿಕ್ಟರ್ ಮಾಪಕದಲ್ಲಿ ದಾಖಾಗಿದೆ. ಸದ್ಯದ ಮಾಹಿತಿ ಪ್ರಕಾರ ಯಾವುದೇ ಸಾವು ನೋವು ಸಂಭವಿಸಿಲ್ಲ. 

ಹಲೆವೆಡೆ ಭೂಮಿ ಕಂಪನಿಸಿದೆ. ಕಟ್ಟಡಗಳು ಲುಘವಾಗಿ ಕಂಪಿಸಿದೆ. ಹಲುವು ಕಟ್ಟಡಗಳು ಬಿರುಕು ಬಿಟ್ಟಿದೆ. ಭೂಕಂಪನದ ಅನುಭವವಾಗುತ್ತಿದ್ದಂತೆ ಹಲವರು ಬಯಲು ಪ್ರದೇಶಕ್ಕೆ ಓಡಿದ್ದಾರೆ. ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಕಳೆದ ತಿಂಗಳು ಪಾಕಿಸ್ತಾನದಲ್ಲಿ ಭೂಕಂಪನ ಸಂಭವಿಸಿತ್ತು. ಎಪ್ರಿಲ್ 12ರಂದು ಪಾಕಿಸ್ತಾನದಲ್ಲಿ 5.8ರ ತೀವ್ರತೆಯ ಭೂಕಂಪನ ಸಂಭವಿಸಿತ್ತು. ಇನ್ನು ಎಪ್ರಿಲ್ 30 ರಂದು 4.4ರ ತೀವ್ರತೆಯ ಭೂಕಂಪನ ದಾಖಲಾಗಿತ್ತು. ಈ ವೇಳೆಯೂ ಯಾವುದೇ ಸಾವು ನೋವು ಸಂಭವಿಸಿಲ್ಲ.

ಚೀನಾ ಸೂಚನೆಯಂತೆ ಪಾಕಿಸ್ತಾನ ನಡೆಸಿತಾ ಪೆಹಲ್ಗಾಂ ಉಗ್ರ ದಾಳಿ? ಕನೆಕ್ಟ್ ಆಗುತ್ತಿದೆ ಡಾಟ್ಸ್

2005ರಲ್ಲಿ ಪಾಕಿಸ್ತಾನ ಕಂಡಿತ್ತು ಅತೀ ದೊಡ್ಡ ಭೂಕಂಪ
ಸ್ವತಂತ್ರ ಪಾಕಿಸ್ತಾನದಲ್ಲಿ ಸಂಭವಿಸಿದ ಅತೀ ದೊಡ್ಡ ಭೂಕಂಪ 2005ರಲ್ಲಿ ದಾಖಲಾಗಿತ್ತು. ಈ ಭೂಕಂಪ ಅಪಾರ  ಸಾವು ನೋವಿಗೆ ಕಾರಣವಾಗಿತ್ತು. ಬರೋಬ್ಬರಿ 74,000 ಮಂದಿ ಪ್ರಾಣ ಕಳೆದುಕೊಂಡಿದ್ದರು. ಅಂದು ಪಾಕಿಸ್ತಾನ ಅಕ್ಷರಶ ನಲುಗಿ ಹೋಗಿತ್ತು. ಬಳಿಕ ಪ್ರತಿ ವರ್ಷ ಲಘು ಭೂಕಂಪನಗಳು ವರದಿಯಾಗಿದೆ. 2023ರಲ್ಲಿ 6.5ರ ತೀವ್ರತೆಯ ಭೂಕಂಪ ದಾಖಲಾಗಿತ್ತು. 2024ರಲ್ಲಿ ಅಂದರೆ ಕಳೆದ ವರ್ಷ ಪಾಕಿಸ್ತಾನದಲ್ಲಿ ಒಟ್ಟು 167 ಬಾರಿ ಭೂಮಿ ಕಂಪಿಸಿದೆ. ಆದರೆ ತೀವ್ರತೆ ಕಡಿಮೆಯಾಗಿದ್ದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!