
ಏಪ್ರಿಲ್ 2024ರ ಅಮೆರಿಕ ಡಿಪಾರ್ಟ್‌ಮೆಂಟ್ ಆಫ್ ಹೋಮ್‌ಲ್ಯಾಂಡ್ ಸೆಕ್ಯುರಿಟಿ ವರದಿ ಹೇಳುವಂತೆ, ಅಮೆರಿಕದಲ್ಲಿ ಸುಮಾರು 2.2 ಲಕ್ಷ ಅಕ್ರಮ ಭಾರತೀಯ ವಲಸಿಗರು ವಾಸ ಮಾಡುತ್ತಿದ್ದಾರೆ. ಜನವರಿ 2025 ರಿಂದ ಸುಮಾರು 332ಕ್ಕೂ ಹೆಚ್ಚು ಭಾರತೀಯರನ್ನು ಗಡೀಪಾರು ಮಾಡಲಾಗಿದೆ. ಈ ಟೈಮ್‌ನಲ್ಲಿ ಕೆಲ ಭಾರತೀಯ ಕುಟುಂಬಗಳು ತಮ್ಮ ಮಕ್ಕಳನ್ನು ಮೆಕ್ಸಿಕೋ-ಯುಎಸ್ ಅಥವಾ ಕೆನಡಾ-ಯುಎಸ್ ಗಡಿಯಲ್ಲಿ ಬಿಟ್ಟುಬಿಡುತ್ತಿದ್ದಾರೆ. ಇದಕ್ಕೂ ಕಾರಣ ಇದೆ.
ಮಕ್ಕಳಿಗೆ ಮತ್ತು ತಮಗೆ ಅಮೆರಿಕ ನಾಗರಿಕತ್ವ ಸಿಗಲಿ ಎಂಬ ಆಸೆಯೊಂದಿಗೆ ಈ ರೀತಿ ಮಾಡುತ್ತಿದ್ದಾರೆ. 2022- 2025ರಲ್ಲಿ ಕನಿಷ್ಠ 1,656 ಭಾರತೀಯ ಮಕ್ಕಳನ್ನು ಯುಎಸ್ ಗಡಿ ದಾಟಿಸಲು ಪ್ರಯತ್ನಿಸಿದ್ದಾರೆ. 2024ನೇ ಹಣಕಾಸು ವರ್ಷದಲ್ಲಿ 517 ಮಕ್ಕಳನ್ನು ಭಾರತೀಯ ಮಕ್ಕಳು ಗುರುತಿಸಲಾಗಿದೆ, ಆದರೆ 2023ರಲ್ಲಿ ಗರಿಷ್ಠ 730 ಮಕ್ಕಳನ್ನು ಅಮೆರಿಕಕ್ಕೆ ಸಾಗಿಸಲು ಈ ಯತ್ನ ಮಾಡಿದ್ದರು. ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಬಂದ ಟೈಮ್‌ನಲ್ಲಿ ಪ್ರಯಾಣ ಮಾಡಲು ಕೆಲ ನಿರ್ಬಂಧಗಳಿತ್ತು. 2020ರಲ್ಲಿ 219, 2021ರಲ್ಲಿ 237 ಮಕ್ಕಳು ಹೀಗೆ ಗಡಿಪಾರು ಮಾಡಿ ಸದಸ್ವತ್ವ ಪಡೆಯಲು ಟ್ರೈ ಮಾಡಿದ್ದು ಗೊತ್ತಾಗಿತ್ತು. ಅಕ್ಟೋಬರ್ 2024 ರಿಂದ ಫೆಬ್ರವರಿ 2025 ರವರೆಗೆ, 77 ಒಂಟಿ ಭಾರತೀಯ ಮಕ್ಕಳು ಗಡಿಯಲ್ಲಿ ಇರೋದು ಗೊತ್ತಾಗಿತ್ತು. ಅವರಲ್ಲಿ 53 ಮಕ್ಕಳು ಮೆಕ್ಸಿಕೋ ಗಡಿಯಲ್ಲಿ, 22 ಮಕ್ಕಳು ಕೆನಡಾ ಗಡಿಯಲ್ಲಿ ಸಿಕ್ಕಿಬಿದ್ದಿದ್ದರು ಎನ್ನಲಾಗಿದೆ.
ಕ್ಷೇಮ ಸಮೀಕ್ಷೆಗಳು ಮತ್ತು ಐಸಿಇ ಕಾರ್ಯಾಚರಣೆ
ಅಮೆರಿಕ ಡಿಪಾರ್ಟ್‌ಮೆಂಟ್ ಆಫ್ ಹೋಮ್‌ಲ್ಯಾಂಡ್ ಸೆಕ್ಯುರಿಟಿಯು ಒಂಟಿಯಾಗಿ ಬಂದ ಮಕ್ಕಳ ಮೇಲೆ "ಕ್ಷೇಮ ಸಮೀಕ್ಷೆ" ಮಾಡುತ್ತಿದೆ. ಇದನ್ನು ಕೆಲ ಟೀಕಾಕಾರರು "ಬ್ಯಾಕ್‌ಡೋರ್ ಕುಟುಂಬ ವಿಭಜನೆ" ಎಂದು ಕರೆದಿದ್ದಾರೆ. ದಿ ಗಾರ್ಡಿಯನ್ ವರದಿ ಹೇಳುವಂತೆ, ಇಮಿಗ್ರೇಷನ್ ಆಂಡ್ ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್ (ಐಸಿಇ) ಒಂಟಿ ವಲಸಿಗ ಮಕ್ಕಳು ಮತ್ತು ಅವರ ಯುಎಸ್-ಆಧಾರಿತ ಪ್ರಾಯೋಜಕರನ್ನು ಗುರಿಯಾಗಿಸಿ, ವಲಸೆ ಜಾರಿ, ಕೆಲ ಕ್ರಿಮಿನಲ್ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಒಂಟಿ ಮಕ್ಕಳಿಗೆ ಕಾನೂನು ಸೇವೆಗಳು ಗಣನೀಯವಾಗಿ ಕಡಿಮೆ ಇವೆ.
ಕ್ಷೇಮ ಸಮೀಕ್ಷೆಯಲ್ಲಿ ಏನು ಮಾಡಲಾಗುತ್ತಿದೆ?
ಏಪ್ರಿಲ್ 2025ರಲ್ಲಿ, ಐಸಿಇ ಅಧಿಕಾರಿಗಳು ವಾಷಿಂಗ್‌ಟನ್‌ನಲ್ಲಿ 16 ವರ್ಷದ ಬಾಲಕಿಯೊಬ್ಬಳ ಮೇಲೆ "ಕ್ಷೇಮ ಸಮೀಕ್ಷೆ" ಮಾಡಿದ್ದರು. ಭಯಗೊಂಡಿದ್ದ ಈ ಬಾಲಕಿ ತನ್ನ ವಲಸೆ ಪ್ರಕರಣ ನೋಡಿಕೊಳ್ತಿದ್ದ ಮಂಜನಿತಾ ಹೌಸ್‌ನ ಇಮಿಗ್ರಂಟ್ ಲೀಗಲ್ ಏಡ್‌ನ ನಿರ್ದೇಶಕ ಸ್ಯಾಮ್ಯುಯೆಲ್ ಸ್ಮಿತ್ ಕಾಂಟ್ಯಾಕ್ಟ್ ಮಾಡಿದ್ದಳು. "ಅವಳ ಮೆಸೇಜ್ ಮತ್ತು ಫೋನ್ ಕರೆ ನೋಡಿದಾಗ ಅವಳು ಭಯಪಟ್ಟಿದ್ದು ಗೊತ್ತಾಗಿತ್ತು. ನಿಜಕ್ಕೂ ಏನಾಗ್ತಿದೆ ಅನ್ನೋದು ಗೊತ್ತಾಗಿರಲಿಲ್ಲ” ಎಂದು ಸ್ಮಿತ್ ಹೇಳಿದರು. ಅಧಿಕಾರಿಗಳಿಗೆ ತಕ್ಷಣದ ಗಡೀಪಾರು ಆದೇಶಗಳನ್ನು ಜಾರಿಗೊಳಿಸುವ, ಅಪರಾಧ ಮಾಡಿದ ಒಂಟಿ ಮಕ್ಕಳ ವಿರುದ್ಧ ಕ್ರಿಮಿನಲ್ ಕ್ರಮ ತೆಗೆದುಕೊಳ್ಳುವಂತೆ ಹೇಳಲಾಗಿದೆ.
ಒಂಟಿ ಮಕ್ಕಳನ್ನು ಗಡಿಯಲ್ಲಿ ಬಿಟ್ಟುಬಿಡುವುದು ಏಕೆ?
ವಲಸೆ ವಿಶ್ಲೇಷಕರ ಪ್ರಕಾರ, ಇದು ಭಾರತೀಯ ಕುಟುಂಬಗಳ ಯೋಜಿತ ತಂತ್ರವಾಗಿದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ. 6 ರಿಂದ 17 ವರ್ಷದೊಳಗಿನ ಮಕ್ಕಳನ್ನು ಕೆಲವೊಮ್ಮೆ ಗಡಿಯಲ್ಲಿ ಬಿಟ್ಟುಬಿಡಲಾಗುತ್ತದೆ, ಕೆಲವೊಮ್ಮೆ ಕೇವಲ ಪಾಲಕರ ಸಂಪರ್ಕ ಮಾಹಿತಿಯ ಒಂದು ಚೀಟಿಯೊಂದಿಗೆ. ಮಕ್ಕಳನ್ನು ಒಂಟಿಯಾಗಿ ಅಥವಾ ಅಪರಿಚಿತ ಗುಂಪುಗಳೊಂದಿಗೆ ಕಳುಹಿಸಲಾಗುತ್ತದೆ, ಯುಎಸ್ ಚೆಕ್‌ಪಾಯಿಂಟ್‌ಗಳ ಬಳಿ ಬಿಟ್ಟುಬಿಡಲಾಗುತ್ತದೆ. ಈ ಕೃತ್ಯವು ಅಪಾಯಕಾರಿಯಾದರೂ, ಇದು ಸಾಮಾನ್ಯವಾಗಿದೆ ಎಂದು ಡೇಟಾ ಹೇಳುವುದು. 2024ನೇ ಹಣಕಾಸು ವರ್ಷದಲ್ಲಿ 500ಕ್ಕೂ ಹೆಚ್ಚು ಭಾರತೀಯ ಒಂಟಿ ಮಕ್ಕಳನ್ನು ಅಮೆರಿಕದಲ್ಲಿ ಗುರುತಿಸಲಾಗಿದೆ. ಆದರೆ, ಟ್ರಂಪ್ ಆಡಳಿತವು ಈ "ಒಂಟಿ ಮಕ್ಕಳ" ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಈ ತಂತ್ರ ಹೇಗೆ ಕಾರ್ಯನಿರ್ವಹಿಸುತ್ತದೆ?
ಹೆಚ್ಚಿನ ಸಂದರ್ಭಗಳಲ್ಲಿ, ಪಾಲಕರು ಈಗಾಗಲೇ ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದು, ನಂತರ ತಮ್ಮ ಮಕ್ಕಳನ್ನು ಅಮೆರಿಕಕ್ಕೆ ಬರುವ ಹಾಗೆ ಮಾಡುತ್ತಾರೆ. ಮಕ್ಕಳು ಅಮೆರಿಕ ಕಸ್ಟಡಿಗೆ ಒಳಪಟ್ಟ ನಂತರ, ಪಾಲಕರು ಕುಟುಂಬ ಪುನರ್ಮಿಲನದ ಆಧಾರದ ಮೇಲೆ ಆಶ್ರಯಕ್ಕೆ ಅರ್ಜಿ ಸಲ್ಲಿಸುತ್ತಾರೆ. ಅಕ್ರಮವಾಗಿ ಅಮೆರಿಕಕ್ಕೆ ಪ್ರವೇಶಿಸಿದ ಪಾಲಕರು ತಮ್ಮ ವಾಸದ ಸ್ಥಳವನ್ನು ಕಾನೂನುಬದ್ಧಗೊಳಿಸಲು ಮಕ್ಕಳನ್ನು ಬಳಸಿಕೊಳ್ಳುತ್ತಾರೆ. ಮಕ್ಕಳು ಗ್ರೀನ್ ಕಾರ್ಡ್ ಪಡೆದರೆ, ಅಮೆರಿಕದಲ್ಲಿರೋ ಸಂಬಂಧಿಕರು ದತ್ತು ಪ್ರಕ್ರಿಯೆ ಶುರು ಮಾಡ್ತಾರೆ. ವಲಸೆ ತಜ್ಞರು ಮತ್ತು ವಕೀಲರ ಪ್ರಕಾರ, ಒಂಟಿ ಮಕ್ಕಳನ್ನು ಟ್ರ್ಯಾಕ್ ಮಾಡಲು ಐಸಿಇ ನಡೆಸುತ್ತಿರುವ ಈ ತನಿಖಾ ಕಾರ್ಯಾಚರಣೆಗಳು ಇನ್ನೂ ಆರಂಭಿಕ ಹಂತದಲ್ಲಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ