ಜೂಜು ಅಡ್ಡೆಯ ಮೇಲೆ ದಾಳಿ/ ಕತ್ತೆಯನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ ಪೊಲೀಸರು/ ಕತ್ತೆಯ ಬಂಧನದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್
ಇಸ್ಲಾಮಾಬಾದ್ (ಜೂ. 09 ) ಇದೊಂದು ವಿಚಿತ್ರ ಪ್ರಕರಣ, ಇಂಥವೂ ಪಾಕಿಸ್ತಾನದಲ್ಲಿ ಮಾತ್ರ ನಡೆಯಲು ಸಾಧ್ಯ. ಜೂಜಿನಲ್ಲಿ ಭಾಗಿಯಾಗಿದೆ ಎಂಬ ಕಾರಣಕ್ಕೆ ಪಾಕಿಸ್ತಾನದಲ್ಲಿ ಕತ್ತೆಯೊಂದನ್ನು ಬಂಧಿಸಲಾಗಿದೆ. ಪತ್ರಕರ್ತೆ ನಾಲಿಯಾ ಇನಾಯಿತ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಉಳಿದ ಆರೋಪಿಗಳ ಜತೆ ಕತ್ತೆಯನ್ನು ಬಂಧಿಸಲಾಗಿದೆ ಎಂದು ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಜೂಜು ಕೋರರ ಮೇಲೆ ದಾಳಿ ಮಾಡಿದ ಪೊಲೀಸರು ಒಂದು ಲಕ್ಷ ರೂ. ಗಳನ್ನು ವಶಕ್ಕೆ ಪಡೆದಿದ್ದಾರೆ.
undefined
ಕತ್ತೆಗಳ ಹೊಟ್ಟೆ ತುಂಬಿಸುತ್ತಿರುವ ವಾಟಾಳ್ ನಾಗರಾಜ್
ಎಫ್ ಐಆರ್ ನಲ್ಲಿಯೂ ಕತ್ತೆಯ ಹೆಸರನ್ನು ಸೇರಿಸಲಾಗಿದೆ. ಆದರೆ ಪೊಲೀಸರು ಎಫ್ ಐಆರ್ ರಿಲೀಸ್ ಮಾಡಿಲ್ಲ! ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿಗೆ ಭಿನ್ನ ಭಿನ್ನ ಪ್ರತಿಕ್ರಿಯೆ ಬಂದಿದ್ದು ಕತ್ತೆಯನ್ನು ಯಾವ ಆಧಾರಲ್ಲಿ ಆರೋಪಿ ಮಾಡಲಾಗಿದೆ ಎಂದು ಅನೇಕರು ಕಾರಣ ಕೇಳಿದ್ದಾರೆ.
ಕತ್ತೆಯೇನು ಈ ಜೂಜುಅಡ್ಡೆಯ ಕಿಂಗ್ ಪಿನ್ನಾ? ಏನು ಮಾಡಬೇಕು ಎನ್ನುವುದು ಗೊತ್ತಿಲ್ಲದವರು ಇಂಥ ಕೆಲಸ ಮಾಡುತ್ತಾರೆ ಎಂದು ಕುಹಕವಾಡಿದ್ದಾರೆ.
Donkey arrested for participating in a gambling racing in Rahim Yar Khan. Eight humans also rounded up, Rs 120,000 recovered. https://t.co/RIULiecduw pic.twitter.com/1FipntTR60
— Naila Inayat नायला इनायत (@nailainayat)