ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶದ ಲಭ್ಯವಿರುವ ಮಾಹಿತಿಯ ಪ್ರಕಾರ, ಡೊನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ಗೆದ್ದಿದ್ದಾರೆ. 270 ವೋಟ್ ಪಡೆದಿದ್ದಾರೆ.
ವಾಷಿಂಗ್ಟನ್: ಅಮೆರಿಕದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ್ದಾರೆ. ಅಧ್ಯಕ್ಷರಾಗಲು ಟ್ರಂಪ್‌ಗೆ ಕನಿಷ್ಠ 270 ಮತಗಳು ಬೇಕಾಗಿದ್ದವು. ಒಟ್ಟು ಮತಗಳು 538. ಈವರೆಗೆ ಟ್ರಂಪ್ 270ಕ್ಕೂ ಹೆಚ್ಚು ಮತಗಳನ್ನು ಗೆದ್ದಿದ್ದಾರೆ. ಎದುರಾಳಿ ಭಾರತ ಮೂಲದ ಕಮಲಾ ಹ್ಯಾರಿಸ್ 188 ಮತಗಳನ್ನು ಪಡೆದುಕೊಂಡಿದ್ದಾರೆ. ಚುನಾವಣೆಯಲ್ಲಿ ಗೆದ್ದ ನಂತರ ಟ್ರಂಪ್ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ್ದು, ಇದು ನಮ್ಮ ದೇಶ ಇದುವರೆಗೆ ಕಂಡಿರದ ರಾಜಕೀಯ ಗೆಲುವು. ಇದಕ್ಕಿಂತ ದೊಡ್ಡದು ಯಾವುದೂ ಇಲ್ಲ. ಇದು ಐತಿಹಾಸಿಕ ಕ್ಷಣ. ನಾನು ಅಮೆರಿಕದ ಜನರಿಗೆ ನಿಮ್ಮ 47ನೇ ಅಧ್ಯಕ್ಷ ಮತ್ತು 45ನೇ ಅಧ್ಯಕ್ಷರಾಗಿ ಆಯ್ಕೆಯಾಗಲು ನೀಡಿದ ಅಸಾಧಾರಣ ಗೌರವಕ್ಕಾಗಿ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಪ್ರತಿಯೊಬ್ಬ ನಾಗರಿಕರಿಗೂ, ನಾನು ನಿಮಗಾಗಿ, ನಿಮ್ಮ ಕುಟುಂಬಕ್ಕಾಗಿ ಮತ್ತು ನಿಮ್ಮ ಭವಿಷ್ಯಕ್ಕಾಗಿ ಹೋರಾಡುತ್ತೇನೆ. ಪ್ರತಿದಿನ ನನ್ನ ದೇಹದ ಕೊನೆಯ ಉಸಿರು ಇರೋವರೆಗೂ ನಾನು ನಿಮಗಾಗಿ ಕೆಲಸ ಮಾಡುತ್ತೇನೆ. ನಿಮ್ಮೆಲ್ಲರಿಗಾಗಿ ನಾನು ಹೋರಾಡುತ್ತೇನೆ. ನಾವು ಬಲವಾದ, ಸುರಕ್ಷಿತ ಮತ್ತು ಸಮೃದ್ಧ ಅಮೆರಿಕವನ್ನು ನಿರ್ಮಿಸುವವರೆಗೆ ವಿಶ್ರಾಂತಿ ಪಡೆಯುವುದಿಲ್ಲ. ಇದು ನಿಜವಾಗಿಯೂ ಅಮೆರಿಕದ ಸುವರ್ಣಯುಗವಾಗಿರುತ್ತದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದರು.
ಅಧ್ಯಕ್ಷ ಸ್ಥಾನಕ್ಕೆ ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷ ಮತ್ತು ಕಮಲಾ ಹ್ಯಾರಿಸ್ ಅವರ ಡೆಮಾಕ್ರಟಿಕ್ ಪಕ್ಷದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕಮಲಾ ಹ್ಯಾರಿಸ್ ಗೆದ್ದಿದ್ದರೆ, ಅಮೆರಿಕದ 230 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆ ಅಧ್ಯಕ್ಷರಾಗುತ್ತಿದ್ದರು. ಟ್ರಂಪ್ 4 ವರ್ಷಗಳ ನಂತರ ಮತ್ತೆ ಅಮೆರಿಕದ ಅಧ್ಯಕ್ಷರಾಗಲಿದ್ದಾರೆ. ಇದಕ್ಕೂ ಮೊದಲು ಟ್ರಂಪ್ 2017 ರಿಂದ 2021 ರವರೆಗೆ ಶ್ವೇತಭವನದಲ್ಲಿದ್ದರು. ಅವರ ನಂತರ ಜೋ ಬಿಡೆನ್ 46 ನೇ ಅಧ್ಯಕ್ಷರಾದರು.
undefined
ಇದುವರೆಗೆ ಅಮೆರಿಕದ 46 ಅಧ್ಯಕ್ಷರು
1- ಜಾರ್ಜ್ ವಾಷಿಂಗ್ಟನ್ (ಅವಧಿ: ಏಪ್ರಿಲ್ 1789 ರಿಂದ 1797)
2- ಜಾನ್ ಆಡಮ್ಸ್ (ಅವಧಿ: ಮಾರ್ಚ್ 1797 ರಿಂದ ಮಾರ್ಚ್ 1801)
3- ಥಾಮಸ್ ಜೆಫರ್ಸನ್ (ಅವಧಿ: ಮಾರ್ಚ್ 1801 ರಿಂದ ಮಾರ್ಚ್ 1809)
4- ಜೇಮ್ಸ್ ಮ್ಯಾಡಿಸನ್ (ಅವಧಿ: ಮಾರ್ಚ್ 1809 ರಿಂದ ಮಾರ್ಚ್ 1817)
5- ಜೇಮ್ಸ್ ಮುನ್ರೊ (ಅವಧಿ: ಮಾರ್ಚ್ 1817 ರಿಂದ ಮಾರ್ಚ್ 1825)
6- ಜಾನ್ ಕ್ವಿನ್ಸಿ ಆಡಮ್ಸ್ (ಅವಧಿ: ಮಾರ್ಚ್ 1825 ರಿಂದ ಮಾರ್ಚ್ 1829)
7- ಆಂಡ್ರ್ಯೂ ಜಾಕ್ಸನ್ (ಅವಧಿ: ಮಾರ್ಚ್ 1829 ರಿಂದ ಮಾರ್ಚ್ 1837)
8- ಮಾರ್ಟಿನ್ ವ್ಯಾನ್ ಬ್ಯೂರೆನ್ (ಅವಧಿ: ಮಾರ್ಚ್ 1837 ರಿಂದ ಮಾರ್ಚ್ 1841)
9- ವಿಲಿಯಂ ಹೆನ್ರಿ ಹ್ಯಾರಿಸನ್ (ಅವಧಿ: ಮಾರ್ಚ್ 1841 ರಿಂದ ಏಪ್ರಿಲ್ 1841)
10- ಜಾನ್ ಟೇಲರ್ (ಅವಧಿ: ಏಪ್ರಿಲ್ 1841 ರಿಂದ ಮಾರ್ಚ್ 1845)
11- ಜೇಮ್ಸ್ ಕೆ. ಪೋಲ್ಕ್ (ಅವಧಿ: ಮಾರ್ಚ್ 1845 ರಿಂದ ಮಾರ್ಚ್ 1849)
12- ಜೆಕರಿಯಾ ಟೇಲರ್ (ಅವಧಿ: ಮಾರ್ಚ್ 1849 ರಿಂದ ಜುಲೈ 1850)
13- ಮಿಲ್ಲಾರ್ಡ್ ಫಿಲ್ಮೋರ್ (ಅವಧಿ: ಜುಲೈ 1850 ರಿಂದ ಮಾರ್ಚ್ 1853)
14- ಫ್ರಾಂಕ್ಲಿನ್ ಪಿಯರ್ಸ್ (ಅವಧಿ: ಮಾರ್ಚ್ 1853 ರಿಂದ ಮಾರ್ಚ್ 1857)
15- ಜೇಮ್ಸ್ ಬುಕಾನನ್ (ಅವಧಿ: ಮಾರ್ಚ್ 1857 ರಿಂದ ಮಾರ್ಚ್ 1861)
16- ಅಬ್ರಹಾಂ ಲಿಂಕನ್ (ಅವಧಿ: ಮಾರ್ಚ್ 1861 ರಿಂದ ಏಪ್ರಿಲ್ 1865)
17- ಆಂಡ್ರ್ಯೂ ಜಾನ್ಸನ್ (ಅವಧಿ: ಏಪ್ರಿಲ್ 1865 ರಿಂದ ಮಾರ್ಚ್ 1869)
18- ಯುಲಿಸೆಸ್ ಎಸ್. ಗ್ರಾಂಟ್ (ಅವಧಿ: ಮಾರ್ಚ್ 1869 ರಿಂದ ಮಾರ್ಚ್ 1877)
19- ರುದರ್‌ಫೋರ್ಡ್ ಬಿ. ಹೇಯ್ಸ್ (ಅವಧಿ: ಮಾರ್ಚ್ 1877 ರಿಂದ ಮಾರ್ಚ್ 1881)
20- ಜೇಮ್ಸ್ ಎ. ಗಾರ್ಫೀಲ್ಡ್ (ಅವಧಿ: ಮಾರ್ಚ್ 1881 ರಿಂದ ಸೆಪ್ಟೆಂಬರ್ 1881)
21- ಚೆಸ್ಟರ್ ಎ. ಆರ್ಥರ್ (ಅವಧಿ: ಸೆಪ್ಟೆಂಬರ್ 1881 ರಿಂದ ಮಾರ್ಚ್ 1885)
22- ಗ್ರೋವರ್ ಕ್ಲೀವ್ಲ್ಯಾಂಡ್ (ಅವಧಿ: ಮಾರ್ಚ್ 1885 ರಿಂದ ಮಾರ್ಚ್ 1889)
23- ಬೆಂಜಮಿನ್ ಹ್ಯಾರಿಸನ್ (ಅವಧಿ: ಮಾರ್ಚ್ 1889 ರಿಂದ ಮಾರ್ಚ್ 1893)
24- ಗ್ರೋವರ್ ಕ್ಲೀವ್ಲ್ಯಾಂಡ್ (ಅವಧಿ: ಮಾರ್ಚ್ 1893 ರಿಂದ ಮಾರ್ಚ್ 1897)
25- ವಿಲಿಯಂ ಮೆಕಿನ್ಲೆ (ಅವಧಿ: ಮಾರ್ಚ್ 1897 ರಿಂದ ಸೆಪ್ಟೆಂಬರ್ 1901)
26- ಥಿಯೋಡರ್ ರೂಸ್ವೆಲ್ಟ್ (ಅವಧಿ: ಸೆಪ್ಟೆಂಬರ್ 1901 ರಿಂದ ಮಾರ್ಚ್ 1909)
27- ವಿಲಿಯಂ ಹೊವಾರ್ಡ್ ಟಾಫ್ಟ್ (ಅವಧಿ: ಮಾರ್ಚ್ 1909 ರಿಂದ ಮಾರ್ಚ್ 1913)
28- ವುಡ್ರೋ ವಿಲ್ಸನ್ (ಅವಧಿ: ಮಾರ್ಚ್ 1913 ರಿಂದ ಮಾರ್ಚ್ 1921)
29- ವಾರೆನ್ ಜಿ. ಹಾರ್ಡಿಂಗ್ (ಅವಧಿ: ಮಾರ್ಚ್ 1921 ರಿಂದ ಆಗಸ್ಟ್ 1923)
30- ಕ್ಯಾಲ್ವಿನ್ ಕೂಲಿಡ್ಜ್ (ಅವಧಿ: ಆಗಸ್ಟ್ 1923 ರಿಂದ ಮಾರ್ಚ್ 1929)
31- ಹರ್ಬರ್ಟ್ ಹೂವರ್ (ಅವಧಿ: ಮಾರ್ಚ್ 1929 ರಿಂದ ಮಾರ್ಚ್ 1933)
32- ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್ (ಅವಧಿ: ಮಾರ್ಚ್ 1933 ರಿಂದ ಏಪ್ರಿಲ್ 1945)
33- ಹ್ಯಾರಿ ಎಸ್. ಟ್ರೂಮನ್ (ಅವಧಿ: ಏಪ್ರಿಲ್ 1945 ರಿಂದ ಜನವರಿ 1953)
34- ಡ್ವೈಟ್ ಡಿ. ಐಸೆನ್‌ಹೋವರ್ (ಅವಧಿ: ಜನವರಿ 1953 ರಿಂದ ಜನವರಿ 1961)
35- ಜಾನ್ ಎಫ್. ಕೆನಡಿ (ಅವಧಿ: ಜನವರಿ 1961 ರಿಂದ ನವೆಂಬರ್ 1963)
36- ಲಿಂಡನ್ ಬಿ. ಜಾನ್ಸನ್ (ಅವಧಿ: ನವೆಂಬರ್ 1963 ರಿಂದ ಜನವರಿ 1969)
37- ರಿಚರ್ಡ್ ನಿಕ್ಸನ್ (ಅವಧಿ: ಜನವರಿ 1969 ರಿಂದ ಆಗಸ್ಟ್ 1974)
38- ಜೆರಾಲ್ಡ್ ಫೋರ್ಡ್ (ಅವಧಿ: ಆಗಸ್ಟ್ 1974 ರಿಂದ ಜನವರಿ 1977)
39- ಜಿಮ್ಮಿ ಕಾರ್ಟರ್ (ಅವಧಿ: ಜನವರಿ 1977 ರಿಂದ ಜನವರಿ 1981)
40- ರೊನಾಲ್ಡ್ ರೇಗನ್ (ಅವಧಿ: ಜನವರಿ 1981 ರಿಂದ ಜನವರಿ 1989)
41- ಜಾರ್ಜ್ H.W. ಬುಷ್ (ಅವಧಿ: ಜನವರಿ 1989 ರಿಂದ ಜನವರಿ 1993)
42- ಬಿಲ್ ಕ್ಲಿಂಟನ್ (ಅವಧಿ: ಜನವರಿ 1993 ರಿಂದ ಜನವರಿ 2001)
43- ಜಾರ್ಜ್ ಡಬ್ಲ್ಯೂ. ಬುಷ್ (ಅವಧಿ: ಜನವರಿ 2001 ರಿಂದ ಜನವರಿ 2009)
44- ಬರಾಕ್ ಹುಸೇನ್ ಒಬಾಮಾ (ಅವಧಿ: ಜನವರಿ 2009 ರಿಂದ ಜನವರಿ 2017)
45- ಡೊನಾಲ್ಡ್ ಟ್ರಂಪ್ (ಅವಧಿ: ಜನವರಿ 2017 ರಿಂದ ಜನವರಿ 2021)
46- ಜೋ ಬಿಡೆನ್ (ಅವಧಿ: ಜನವರಿ 2021 ಇಲ್ಲಿಯವರೆಗೆ...)
ಇದನ್ನೂ ಓದಿ: ಇಸ್ರೇಲ್ ರಕ್ಷಣಾ ಸಚಿವ ಗ್ಯಾಲಂಟ್ ಹಠಾತ್ ವಜಾ
Heartiest congratulations my friend on your historic election victory. As you build on the successes of your previous term, I look forward to renewing our collaboration to further strengthen the India-US Comprehensive Global and Strategic Partnership. Together,… pic.twitter.com/u5hKPeJ3SY
— Narendra Modi (@narendramodi)