ಇಸ್ರೇಲ್ ಪ್ರಧಾನಿ ನೆತನ್ಯಾಹು ರಕ್ಷಣಾ ಸಚಿವ ಗ್ಯಾಲಂಟ್‌ರನ್ನು ವಜಾಗೊಳಿಸಿದ್ದಾರೆ.
ಇಸ್ರೇಲ್ ರಕ್ಷಣಾ ಸಚಿವ ಗ್ಯಾಲಂಟ್ ಹಠಾತ್ ವಜಾ
ಟೆಲ್ ಅವಿವ್: ಅತ್ಯಂತ ಅಚ್ಚರಿ ನಡೆಯೊಂದರಲ್ಲಿ ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್‌ರನ್ನು ಪ್ರಧಾನಿ ಬೆಂಜ ಮಿನ್ ನೆತನ್ಯಾಹು ವಜಾ ಮಾಡಿದ್ದಾರೆ. ಗಾಜಾ ಯುದ್ಧ ನಡೆದಾಗಿನಿಂದ ಇಬ್ಬರ ನಡುವೆ ತಿಕ್ಕಾಟ ನಡೆದಿತ್ತು.
ಖಲಿಸ್ತಾನಿ ಬೆಂಬಲಿಗನಾಗಿದ್ದ ಕೆನಡಾ ಪೊಲೀಸ್ ಅಧಿಕಾರಿ ಅಮಾನತು
undefined
ಒಟ್ಟಾವಾ: ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದು ದೇವಸ್ಥಾನದ ಹೊರಗಡದ ಪ್ರತಿಭಟನೆಯಲ್ಲಿ ಖಾಲಿಸ್ತಾನಿ ಪರವಾಗಿ ಭಾಗವಹಿಸಿದ ಕೆನಡಾದ ಪೊಲೀಸ್ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಲಾಗಿದೆ. ದೇವಸ್ಥಾನದ ಅಧಿಕಾರಿಗಳು ಹಾಗೂ ಭಾರತದ ರಾಯಭಾರಿಗಳು ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಖಲಿಸ್ತಾನಿ ಧ್ವಜ ಹಿಡಿದವರ ಗುಂಪು ಅಲ್ಲಿದ್ದ ಹಿಂದೂಗಳ ಮೇಲೆ ದಾಳಿ ನಡೆಸಿದ ವಿಡಿಯೋಗಳು ಹರಿದಾಡುತ್ತಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೆನಡಾ ಅಧಿಕಾರಿಗಳು, 'ಪೀಲ್ ನ ಪೊಲೀಸ್ ಸಿಬ್ಬಂದಿಯೊಬ್ಬರು ಕರ್ತವ್ಯದಲ್ಲಿ ಇರದ ವೇಳೆ ಪ್ರತಿಭಟನೆಯಲ್ಲಿ ಭಾಗವಹಿಸಿರುವ ವಿಡಿಯೋ ನಮ್ಮ ಗಮನಕ್ಕೂ ಬಂದಿದೆ. ಅವರನ್ನು ಸಾಮಾಜಿಕ ಭದ್ರತೆ ಹಾಗೂ ಪೊಲೀಸ್ ಕಾಯ್ದೆಯ ಪ್ರಕಾರ ಅಮಾನತುಗೊಳಿಸಲಾಗಿದೆ' ಎಂದಿದ್ದಾರೆ.
ಹಿಂದೂಗಳ ಪ್ರತಿಭಟನೆ
ಬ್ರಾಂಪ್ಟನ್: ಭಾನುವಾರ ಇಲ್ಲಿನ ಹಿಂದೂ ಸಭಾ ದೇವಸ್ಥಾನದ ಮೇಲೆ ನಡೆದ ದಾಳಿಯನ್ನು ಖಂಡಿಸಿ ಹಿಂದೂಗಳು ಮಂಗಳವಾರ ದೇವಾಲಯದ ಎದುರು ಪ್ರತಿಭಟನೆ ನಡೆಸಿದ್ದಾರೆ. ಇದರ ನಡುವೆ, ಈ ಪ್ರತಿಭಟನೆಯನ್ನು ಕಾನೂನು ಬಾಹಿರ ಎಂದು ಕರೆದಿರುವ ಕೆನಡಾ ಪೊಲೀಸರು, ಇಂಥ ಪ್ರತಿಭಟನೆಗಳನ್ನು ಸಹಿಸುವುದಿಲ್ಲ. ಪ್ರತಿಭಟನೆ ವೇಳೆ ನರೆದಿದ್ದ 5 ಸಾವಿರಕ್ಕೂ ಅಧಿಕ ಭಾರತ ಮೂಲದ ಕೆನಡಿಯನ್ನರ ಕೈಯಲ್ಲಿ ಆಯುಧಗಳು ಪತ್ತೆಯಾಗಿವೆ ಎಂದಿದ್ದಾರೆ.
ತಾರತಮ್ಯ ನಿಲುವು: ವಿಕಿಪೀಡಿಯಾಗೆ ಕೇಂದ್ರ ತೀವ್ರ ತರಾಟೆ
ನವದೆಹಲಿ: ಉಚಿತ ಆನ್‌ಲೈನ್ ವಿಶ್ವಕೋಶ ಎಂದು ಗುರುತಿಸಿಕೊಂಡಿರುವ 'ಏಕಿಪೀಡಿಯಾ' ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಪ್ರಶ್ನೆ ಮಾಡಿರುವ ಕೇಂದ್ರ ಸರ್ಕಾರ, 'ನಿಮ್ಮನ್ನು ಮಾಹಿತಿ ಹಂಚಿಕೊಳ್ಳಲು ಇರುವ ವೇದಿಕೆ ಎಂಬುದರ ಬದಲಾಗಿ ಮುದ್ರಕ ಎಂದೇಕೆ ಪರಿಗಣಿಸಬಾರದು ಎಂಬುದಕ್ಕೆ ಉತ್ತರಿಸಿ' ಎಂದು ಸೂಚಿಸಿದೆ. ಈ ಕುರಿತು 'ವಿಕಿಪೀಡಿಯಾ'ಕ್ಕೆ ಪತ್ರ ಬರೆದಿರುವ ಕೇಂದ್ರ ವಾರ್ತಾ ಸಚಿವಾಲಯ, 'ವಿಕಿಪೀಡಿಯಾ ತಾರತಮ್ಯ ನಿಲುವು ಮತ್ತು ತಪ್ಪು ಮಾಹಿತಿಗಳನ್ನು ಪ್ರಸಾರ ಮಾಡುತ್ತಿದೆ ಎಂದು ಸಾಕಷ್ಟು ದೂರು ಬರುತ್ತಿದೆ. ಈ ಬಗ್ಗೆ ನೀವು ಉತ್ತರಿಸಬೇಕು' ಎಂದು ನೋಟಿಸ್ ಜಾರಿ ಮಾಡಿದೆ.