ಭಾರತದ ವಿರುದ್ಧ ಮತ್ತೆ ಟ್ರಂಪ್‌ ತೆರಿಗೆ ಕಿರಿಕ್! ಏನಿದು ಫೋರ್ಸ್ಡ್‌ ಲೇಬರ್‌?:

Kannadaprabha News   | Kannada Prabha
Published : Jun 04, 2026, 07:00 AM IST
Donald trump target india again over high import tariffs rav

ಸಾರಾಂಶ

'ಶೋಷಿತ ಕಾರ್ಮಿಕ'ರಿಂದ ತಯಾರಾದ ಉತ್ಪನ್ನಗಳ ಆಮದಿನ ಮೇಲೆ ಅಮೆರಿಕವು ಭಾರತ ಸೇರಿದಂತೆ 60 ರಾಷ್ಟ್ರಗಳ ಮೇಲೆ ಹೊಸ ತೆರಿಗೆ ವಿಧಿಸಲು ಮುಂದಾಗಿದೆ. ಈ ಪ್ರಸ್ತಾಪದ ಅಡಿಯಲ್ಲಿ ಭಾರತದ ಮೇಲೆ ಶೇ.12.5ರಷ್ಟು ತೆರಿಗೆ ಬೀಳಲಿದ್ದು, ಭಾರತ ಸರ್ಕಾರವು ಈ ಆರೋಪವನ್ನು ಆಧಾರರಹಿತ ಎಂದು ತಳ್ಳಿಹಾಕಿದೆ.

  •  ಶೋಷಿತ ಕಾರ್ಮಿಕರ ಹೆಸರಲ್ಲಿ ಅಮೆರಿಕ ಹೊಸ ತೆರಿಗೆ
  •  ಭಾರತ ಸೇರಿ 60 ದೇಶಗಳ ಮೇಲೆ ಶೇ.12.5 ಟ್ಯಾಕ್ಸ್‌ಗೆ ಸಿದ್ಧತೆ
  •  ಪಾಕ್‌, ಇಯು, ಕೆನಡಾ ಸೇರಿ 6 ದೇಶಗಳಿಗೆ ಶೇ.10 ತೆರಿಗೆ

ವಾಷಿಂಗ್ಟನ್‌ (ಜೂ.4): ಈ ಹಿಂದೆ ತಾವು ವಿಶ್ವದ ವಿವಿಧ ದೇಶಗಳ ಮೇಲೆ ಹೇರಿದ್ದ ತೆರಿಗೆಯನ್ನು ಸುಪ್ರೀಂ ಕೋರ್ಟ್‌ ರದ್ದು ಮಾಡಿದ ಬೆನ್ನಲ್ಲೇ ಅಮೆರಿಕದ ಡೊನಾಲ್ಡ್‌ ಟ್ರಂಪ್‌ ಸರ್ಕಾರ, ಇದೀಗ ಭಾರತವೂ ಸೇರಿ 60 ರಾಷ್ಟ್ರಗಳ ಮೇಲೆ ಅಡ್ಡದಾರಿ ಮೂಲಕ ಹೊಸದಾಗಿ ತೆರಿಗೆ ಹೇರಲು ಹೊರಟಿದೆ.

‘ಶೋಷಿತ ಕಾರ್ಮಿಕ’ರಿಂದ (ಫೋರ್ಸ್ಡ್ ಲೇಬರ್) ತಯಾರಾದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗುತ್ತಿವೆ ಎಂಬ ಆರೋಪ ಹೊರಿಸಿ 60 ರಾಷ್ಟ್ರಗಳ ಮೇಲೆ ಶೇ.10ರಿಂದ ಶೇ.12.5ರಷ್ಟು ತೆರಿಗೆ ವಿಧಿಸಲು ಚಿಂತನೆ ನಡೆಸುತ್ತಿದೆ. ಆದರೆ ತಕ್ಷಣ ಇದು ಜಾರಿಯಾಗಲ್ಲ. ಸಾರ್ವಜನಿಕರ ಅಭಿಪ್ರಾಯ ಕೋರಲಾಗಿದೆ. ಬಳಿಕ ಮುಂದಿನ ಕ್ರಮ ಜರುಗಿಸಲಾಗುತ್ತದೆ.

ಅಮೆರಿಕದ ವ್ಯಾಪಾರ ಪ್ರತಿನಿಧಿ (ಯುಎಸ್‌ಟಿಆರ್‌) ಬುಧವಾರ ಈ ಕುರಿತು ವರದಿ ಬಿಡುಗಡೆ ಮಾಡಿದ್ದು, ಅದರಲ್ಲಿ ಭಾರತ, ಚೀನಾ, ಜಪಾನ್‌, ದಕ್ಷಿಣ ಕೊರಿಯಾ, ಬ್ರೆಜಿಲ್‌, ಸ್ವಿಜರ್ಲೆಂಡ್‌, ಬ್ರಿಟನ್‌ ಮತ್ತಿತರ ದೇಶಗಳ ಮೇಲೆ ಶೇ.12.5ರಷ್ಟು ತೆರಿಗೆ ವಿಧಿಸುವ ಪ್ರಸ್ತಾಪ ಮಾಡಲಾಗಿದೆ. ಇನ್ನು ಈ ರೀತಿಯ ನಿರ್ಬಂಧವನ್ನು ಭಾಗಶಃ ಅನುಷ್ಠಾನಗೊಳಿಸಿರುವ ಕೆನಡಾ, ಮೆಕ್ಸಿಕೋ, ಈಕ್ವಡೋರ್‌, ಇಯು, ಪಾಕಿಸ್ತಾನ, ಇಂಡೋನೇಷ್ಯಾದಂಥ ದೇಶಗಳ ಮೇಲೆ ಶೇ.10ರಷ್ಟು ತೆರಿಗೆ ವಿಧಿಸಲು ಪ್ರಸ್ತಾಪಿಸಲಾಗಿದೆ.

ಹೇಗೆ ಜಾರಿ?:

ಅಮೆರಿಕ ತನ್ನ ವ್ಯಾಪಾರ ಪಾಲುದಾರ ದೇಶಗಳ ಮೇಲೆ 1974ರ ವ್ಯಾಪಾರ ಕಾಯ್ದೆಯ ಸೆಕ್ಷನ್‌ 301(ಬಿ), (1) ಅಡಿ ತನಿಖೆ ನಡೆಸಿದ್ದು, ಬಲವಂತದ (ಶೋಷಣೆ) ದುಡಿಮೆ ಮೂಲಕ ತಯಾರಿಸಿದ ವಸ್ತುಗಳ ಆಮದು ತಡೆಯುವಲ್ಲಿ 60 ದೇಶಗಳು ವಿಫಲವಾಗಿವೆ ಎನ್ನಲಾಗಿದೆ.

ಏನಿದು ಫೋರ್ಸ್ಡ್‌ ಲೇಬರ್‌?:

ಯಾವುದೇ ಕಾರ್ಮಿಕನ ಮೇಲೆ ಬಲವಂತ ಮಾಡಿ ಅಥವಾ ಶೋಷಣೆ ಮಾಡಿ ಮಾಡಿಸಿಕೊಂಡ ಕೆಲಸಕ್ಕೆ ಬಲವಂತದ ಕೆಲಸ (ಫೋರ್ಸ್ಡ್‌ ಲೇಬರ್) ಎಂದು ಕರೆಯಲಾಗುತ್ತದೆ. ಇದೊಂದು ರೀತಿಯಲ್ಲಿ ಆಧುನಿಕ ಕಾಲದ ಜೀತಪದ್ಧತಿ. ಈ ರೀತಿಯ ಫೋರ್ಸ್ಡ್‌ ಲೇಬರ್‌ ಮೂಲಕ ಮಾನವಹಕ್ಕುಗಳ ಉಲ್ಲಂಘನೆಗೆ ಸಮ.

ಯಾವ್ಯಾವ ದೇಶಗಳ ಮೇಲೆ ತೆರಿಗೆ?

ಚೀನಾ, ಭಾರತ, ಬಾಂಗ್ಲಾದೇಶ, ವಿಯೆಟ್ನಾಂ, ತೈವಾನ್‌, ಇರಾಕ್‌, ಇಸ್ರೇಲ್‌, ಜಪಾನ್‌, ಕತಾರ್‌, ರಷ್ಯಾ, ಸೌದಿ ಅರೇಬಿಯಾ, ಸಿಂಗಾಪುರ, ಯುಎಇ, ಬ್ರಿಟನ್‌, ಕೆನಡಾ, ಈಕ್ವೆಡಾರ್‌, ಇಯು, ಇಂಡೋನೇಷ್ಯಾ, ಮೆಕ್ಸಿಕೋ, ಪಾಕಿಸ್ತಾನ ಮತ್ತಿತರ ದೇಶಗಳ ಮೇಲೆ ಶೇ.11ರಿಂದ 12.5ರಷ್ಟು ಹೆಚ್ಚುವರಿ ತೆರಿಗೆ ಬೀಳುವ ನಿರೀಕ್ಷೆ ಇದೆ.

ಅಮೆರಿಕದ ಆರೋಪ ನಿರಾಕರಿಸಿದ ಭಾರತ

‘ಶೋಷಿತ ಕಾರ್ಮಿಕರ’ ಕುರಿತ ಅಮೆರಿಕ ಆರೋಪವನ್ನು ಭಾರತ ಸ್ಪಷ್ಟವಾಗಿ ತಳ್ಳಿಹಾಕಿದೆ. ‘ಇದು ಆಧಾರರಹಿತ ಆರೋಪ. ಈ ರೀತಿಯ ಆರೋಪಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ’ ಎಂದು ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ. ಇದೇ ವೇಳೆ ಈ ವಿಚಾರವನ್ನು ಸದ್ಯ ಎರಡೂ ದೇಶಗಳ ನಡುವೆ ನಡೆಯುತ್ತಿರುವ ದ್ವಿಪಕ್ಷೀಯ ವ್ಯಾಪಾರ ಮಾತುಕತೆ ವೇಳೆ ಚರ್ಚಿಸಲಾಗುವುದು ಎಂದೂ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಸ್ರೇಲ್‌ ದಾಳಿಯಲ್ಲಿ ಸಾವು ಕಂಡ 4 ತಿಂಗಳ ಬಳಿಕ ಇರಾನ್‌ ಮಾಜಿ ಸುಪ್ರೀಂ ಅಯತೊಲ್ಲಾ ಖಮೇನಿ ಅಂತ್ಯಸಂಸ್ಕಾರಕ್ಕೆ ಸಿದ್ದತೆ
ತಿರುಗಿಬಿದ್ದ ಜೆನ್‌ಝಿ ವಿದ್ಯಾರ್ಥಿಗಳು, ನೇಪಾಳ ಪ್ರಧಾನಿ ಬಲೆನ್ ಶಾ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ