ಇರಾನ್‌ಗೆ ನಯಾಪೈಸೆ ಕೂಡಾ ಕೊಡಲ್ಲ: ಡೊನಾಲ್ಡ್‌ ಟ್ರಂಪ್‌

Published : Jun 20, 2026, 07:55 AM IST
mojtaba-trump

ಸಾರಾಂಶ

ಶಾಂತಿ ಒಪ್ಪಂದದ ಅಡಿಯಲ್ಲಿ ಇರಾನ್‌ಗೆ 28 ಲಕ್ಷ ಕೋಟಿ ರು. ಪರಿಹಾರ ನೀಡುವ ಪ್ರಶ್ನೆಯೇ ಇಲ್ಲ, 10 ಸೆಂಟ್ಸ್ ಕೂಡ ಸಿಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇದೇ ವೇಳೆ, ಇಸ್ರೇಲ್ ದಾಳಿ ಹಿನ್ನೆಲೆಯಲ್ಲಿ ಅಮೆರಿಕ-ಇರಾನ್ ನಡುವಿನ ಸ್ವಿಸ್ ಸಂಧಾನ ಸಭೆ ಮುಂದೂಡಲ್ಪಟ್ಟಿದೆ.

ವಾಷಿಂಗ್ಟನ್‌ (ಜೂ.20): ಶಾಂತಿ ಒಪ್ಪಂದದ ಪ್ರಕಾರ ಅಮೆರಿಕ ಇರಾನ್‌ಗೆ ಸುಮಾರು 28 ಲಕ್ಷ ಕೋಟಿ ರು. ಪರಿಹಾರ ನಿಧಿ ಕೊಡಬೇಕು ಎಂದು ಇರಾನ್‌ ಪ್ರತಿಪಾದಿಸುತ್ತಿರುವ ನಡುವೆಯೇ, ‘ಇರಾನ್‌ಗೆ ಅಮೆರಿಕದಿಂದ 10 ಸೆಂಟ್ಸ್‌ (ನಯಾಪೈಸೆ) ಕೂಡ ಸಿಗುವುದಿಲ್ಲ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶುಕ್ರವಾರ ಘೋಷಿಸಿದ್ದಾರೆ.

ಟ್ರುತ್ ಸೋಷಿಯಲ್‌ನಲ್ಲಿ ಸರಣಿ ಪೋಸ್ಟ್‌ ಮಾಡಿರುವ ಟ್ರಂಪ್, ‘ಯುದ್ಧವು ಇರಾನ್‌ ಅನ್ನು ಕುಂದಿಸಿದೆ. ಇರಾನ್‌ಗೆ ಈಗ ವಾಯುಪಡೆ, ನೌಕಾಪಡೆ, ವಿರೋಧಿ ವಿಮಾನ ಸಲಕರಣೆ, ರಾಡಾರ್ ಅಥವಾ ಬೇರೆ ಯಾವುದೇ ವ್ಯವಸ್ಥೆ ಇಲ್ಲ. ಡೆಮಾಕ್ರಟ್‌ಗಳು ಇರಾನ್ ಈಗ 4 ತಿಂಗಳ ಹಿಂದಿಗಿಂತ ಉತ್ತಮ ಸ್ಥಿತಿಯಲ್ಲಿದೆ ಎಂದು ಹೇಳುತ್ತಿದ್ದಾರೆ. ಇದನ್ನು ಯಾರು ನಂಬುತ್ತಾರೆ? ಜನರು ಎಷ್ಟು ಮೂರ್ಖರಾಗಬಹುದು???’ ಎಂದು ಪ್ರಶ್ನಿಸಿದ್ದಾರೆ.

‘ನಾವು 60 ದಿನಗಳನ್ನು (ಮುಂದಿನ ಮಾತುಕತೆ ಅವಧಿ) ಮುಗಿಸುತ್ತೇವೆ. ಅವರಿಗೆ ಹಣ ಸಿಗುವುದಿಲ್ಲ, 10 ಸೆಂಟ್ಸ್‌ ಕೂಡ ಸಿಗುವುದಿಲ್ಲ! ಇರಾನ್‌ನ ಕಥೆ ಮುಗಿದಿದೆ’ ಎಂದು ಹೇಳಿದ್ದಾರೆ.

ಹೋರ್ಮುಜ್‌ ಮುಚ್ಚಿಲ್ಲ, ಸಂಚಾರ ಯಥಾಸ್ಥಿತಿ: ಇರಾನ್‌ ಸ್ಪಷ್ಟನೆ

ಟೆಹ್ರಾನ್ (ಜೂ.20): ಹೋರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿದೆ ಎಂಬ ವರದಿಗಳನ್ನು ಇರಾನ್ ಶುಕ್ರವಾರ ನಿರಾಕರಿಸಿದೆ, ಜೂನ್ 18 ರಂದು ಅಮೆರಿಕದೊಂದಿಗೆ ಸಹಿ ಹಾಕಿದ ಕದನ ವಿರಾಮ ಒಪ್ಪಂದದ ಅಡಿಯಲ್ಲಿ ಪ್ರಮುಖ ಜಲಮಾರ್ಗದ ಮೂಲಕ ವಾಣಿಜ್ಯ ಹಡಗುಗಳ ಸಂಚಾರ ಮುಂದುವರೆದಿದೆ ಎಂದು ಹೇಳಿದೆ.ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೈ ಮಾತನಾಡಿ, ‘ಲೆಬನಾನ್‌ ಮೇಲಿನ ಇಸ್ರೇಲ್‌ ದಾಳಿ ಖಂಡಿಸಿ ಇರಾನ್ ಸೇನೆ ಹೋರ್ಮುಜ್‌ ಬಂದ್ ಮಾಡಿದೆ ಎಂಬ ವರದಿಗಳು ಆಧಾರರಹಿತ’ ಎಂದರು.

ನೋಂದಣಿಗೆ ಸೂಚನೆ?: ಆದರೆ, ಜಲಸಂಧಿಯ ಮೇಲ್ವಿಚಾರಣೆಯ ಹೊಣೆ ಹೊತ್ತಿರುವ ಹೊಸ ಇರಾನಿನ ಪರ್ಷಿಯನ್ ಗಲ್ಫ್ ಸ್ಟ್ರೇಟ್‌ ಪ್ರಾಧಿಕಾರವು ಇಲ್ಲಿಂದ ಸಾಗುವ ಹಡಗುಗಳು ನೋಂದಾಯಿಸಿಕೊಳ್ಳಬೇಕು ಎಂದು ಸೂಚನೆ ನೀಡಿದೆ ಎಂದು ವರದಿಯಾಗಿದೆ. ಹೀಗಾಗಿ ಪ್ರಸ್ತುತ ಹಡಗು ಸಂಚಾರ ಮುಕ್ತವಾಗಿದ್ದರೂ ಮುಂದಿನ ದಿನಗಳಲ್ಲಿ ಟೆಹ್ರಾನ್ ಶುಲ್ಕ ವಿಧಿಸುವಿಕೆ ಪ್ರಾರಂಭಿಸುವ ಉದ್ದೇಶವನ್ನು ಸೂಚಿಸುತ್ತದೆ ಎನ್ನಲಾಗಿದೆ.

ಇರಾನ್-ಅಮೆರಿಕ ಸ್ವಿಸ್ ಸಂಧಾನ ಸಭೆ ಮುಂದಕ್ಕೆ

ಜೂರಿಚ್ (ಜೂ.20): ಇರಾನ್‌-ಅಮೆರಿಕ ನಡುವಿನ ಶಾಂತಿ ಒಪ್ಪಂದದ ಬೆನ್ನಲ್ಲೇ ಇರಾನ್‌ನ ಪರಮಾಣು ಯೋಜನೆ ಕುರಿತು ಶಾಶ್ವತ ಪರಿಹಾರ ರೂಪಿಸುವ ಉದ್ದೇಶದಿಂದ ಶುಕ್ರವಾರ ಸ್ವಿಜರ್ಲೆಂಡ್‌ನ ಜೂರಿಚ್‌ ನಡೆಯಬೇಕಿದ್ದ ಅಮೆರಿಕ-ಇರಾನ್‌ ಸಂಧಾನ ಸಭೆ ರದ್ದಾಗಿದೆ, ಪರಮಾಣು ಯೋಜನೆ ಬಗ್ಗೆ ಶಾಶ್ವತ ಪರಿಹಾರ ರೂಪಿಸಲು 60 ದಿನಗಳ ಅವಧಿಯನ್ನು ಉಭಯ ದೇಶಗಳು ಒಪ್ಪಂದದಲ್ಲಿ ನಿಗದಿಪಡಿಸಿವೆ. ಈ ನಿಮಿತ್ತ ಶುಕ್ರವಾರ ಜೂರಿಚ್‌ಗೆ ಇರಾನ್‌ ನಿಯೋಗ ಹಾಗೂ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ನಿಯೋಗಗಳು ಬರಬೇಕಿತ್ತು.

ಆದರೆ ತಮ್ಮ ಬೆಂಬಲಿತ ಹಿಜ್ಬುಲ್ಲಾಗಳ ಮೇಲೆ ಇಸ್ರೇಲ್‌ ದಾಳಿಯನ್ನು ಪ್ರಶ್ನಿಸಿ ಇರಾನ್‌ ನಿಯೋಗ ಸ್ವಿಸ್ ಭೇಟಿ ಮುಂದೂಡಿತು ಎಂದು ಇರಾನಿ ಮಾಧ್ಯಮವೊಂದು ವರದಿ ಮಾಡಿದೆ. ಇದರ ಬೆನ್ನಲ್ಲೇ ಸ್ವಿಸ್‌ಗೆ ಹೊರಡಲು ಅಣಿಯಾಗುತ್ತಿದ್ದ ವ್ಯಾನ್ಸ್ ಕೂಡ ತಮ್ಮ ಭೇಟಿ ಮುಂದೂಡಿದರು ಎಂದು ಅಮೆರಿಕ ಮಾಧ್ಯಮಗಳು ಹೇಳಿವೆ. ಹೀಗಾಗಿ ಸಭೆಯ ಮುಂದಿನ ದಿನಾಂಕದ ಬಗ್ಗೆ ಸದ್ಯ ಅನಿಶ್ಚಿತತೆ ಉಂಟಾಗಿದೆ.

ಅಣು ಘಟಕ ತಪಾಸಣೆ: ಈ ನಡುವೆ, ತನ್ನ ಅಣು ಘಟಕಗಳ ತಪಾಸಣೆಗೆ ಇರಾನ್‌ ಐಎಇಎ (ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆ) ತಜ್ಞರಿಗೆ ಅನುಮತಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಪ್ತರೊಬ್ಬರು ಹೇಳಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚೀನಾದಲ್ಲೂ ಇದೆ ಘೋರ ಜಾತಿ ಪದ್ಧತಿ, ಎಕ್ಸ್‌ನಲ್ಲಿ ಡ್ರ್ಯಾಗನ್‌ ರಾಷ್ಟ್ರದ ಹುಳುಕು ಬಿಟ್ಟಿಟ್ಟ ಭಾರತದ ನೆಟ್ಟಿಗರು!
World's Most Expensive Trophies: ಕೈಗೆ ಮೆತ್ತಿಕೊಳ್ಳುವಷ್ಟು ಚಿನ್ನ, ಇದು ವಿಶ್ವದ ಅತ್ಯಂತ ದುಬಾರಿ ಟ್ರೋಫಿಗಳು.