ಡೊನಾಲ್ಡ್ ಜೆ. ಟ್ರಂಪ್ ಅವರು ಬುಧವಾರ ಅಧಿಕೃತವಾಗಿ ಅಮೆರಿಕದ 47ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರು ಗೆಲುವಿಗೆ ಅಗತ್ಯವಿರುವ 270 ಕ್ಕಿಂತ ಹೆಚ್ಚು ಎಲೆಕ್ಟೋರಲ್ ಮತಗಳನ್ನು ಗಳಿಸಿದ್ದಾರೆ.
ನ್ಯೂಯಾರ್ಕ್ (ನ.6): ಡೊನಾಲ್ಡ್ ಟ್ರಂಪ್ 2024ರ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ವಿಜೇತರಾಗಿ ಹೊರಹೊಮ್ಮಿದ್ದಾರೆ ಮತ್ತು ಎರಡನೇ ಬಾರಿಗೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅಸೋಸಿಯೇಟೆಡ್ ಪ್ರೆಸ್ ವರದಿಯ ಪ್ರಕಾರ ಟ್ರಂಪ್ 277 ಎಲೆಕ್ಟೋರಲ್ ಮತಗಳನ್ನು ಗೆದ್ದರು. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು 270 ಎಲೆಕ್ಟೋರಲ್ ಮತಗಳನ್ನು ಗಳಿಸಬೇಕಿದೆ. ಎದುರಾಳಿಯಾಗಿದ್ದ ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನು ದೊಡ್ಡ ಅಂತರದಲ್ಲಿ ಸೋಲಿಸಿದ್ದಾರೆ. ಕಮಲಾ ಹ್ಯಾರಿಸ್ 224 ಎಲೆಕ್ಟೋರಲ್ ಮತಗಳನ್ನು ಗೆದ್ದಿದ್ದಾರೆ.
ಹ್ಯಾರಿಸ್ ಮತ್ತು ಟ್ರಂಪ್ ನಡುವೆ ನಿಕಟ ಸ್ಪರ್ಧೆಯನ್ನು ನಿರೀಕ್ಷಿಸಲಾಗಿದ್ದರೂ, ಇಂದು ಬೆಳಿಗ್ಗೆ ಎಲೆಕ್ಟೋರಲ್ ಕಾಲೇಜು ಮತಗಳ ಎಣಿಕೆ ಪ್ರಾರಂಭವಾದ ನಂತರ ವಿಭಿನ್ನ ಚಿತ್ರಣ ಹೊರಹೊಮ್ಮಿತು.
ದೀರ್ಘಕಾಲದವರೆಗೂ ಅಮೆರಿಕದ ಮಾಜಿ ಅಧ್ಯಕ್ಷರಾಗಿದ್ದ ಡೊನಾಲ್ಟ್ ಟ್ರಂಪ್ 267 ಮತಗಳು ಎಂದು ತೋರಿಸುತ್ತಿದ್ದವು. ಹೋರಾಟದ ಏಳು ಕ್ಷೇತ್ರಗಳಲ್ಲಿ ಒಂದಾದ ವಿಸ್ಕಾನ್ಸಿನ್‌ನಲ್ಲಿ ಗೆಲುವಿನೊಂದಿಗೆ ಟ್ರಂಪ್ ಅಧ್ಯಕ್ಷ ಗಾದಿ ಏರಲು ಬೇಕಾದ 270 ಎಲೆಕ್ಟೋರಲ್ ಮತಗಳನ್ನು ಪಡೆದುಕೊಳ್ಳಲು ಯಶಸ್ವಿಯಾದರು. ಸ್ಕಾನ್ಸಿನ್ ಹೊರತುಪಡಿಸಿ, ಉತ್ತರ ಕೆರೊಲಿನಾ, ಜಾರ್ಜಿಯಾ ಮತ್ತು ಪೆನ್ಸಿಲ್ವೇನಿಯಾದಲ್ಲೂ ಗೆಲುವು ಕಂಡಿದ್ದಾರೆ.
undefined
ಕ್ಷೌರಿಕ ಕೆಲಸದಿಂದ ಅಮೆರಿಕ ಅಧ್ಯಕ್ಷ ಗಾದಿವರೆಗೆ; ಟ್ರಂಪ್ ಜೀವನಗಾಥೆ
ಟ್ರಂಪ್ ಎರಡನೇ ಅವಧಿಗೆ ಆಯ್ಕೆಯಾಗುವುದು ಖಚಿತವಾದಾಗ, ಅವರು ರಾಷ್ಟ್ರವ್ಯಾಪಿ ಪಡೆದ ಬೆಂಬಲಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು. ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ವಿಜಯವನ್ನು ಸಂಭ್ರಮಿಸಿದ್ದಲ್ಲದೆ, ಪತ್ನಿ ಮೆಲಾನಿಯಾ ಮತ್ತು ಕಿರಿಯ ಮಗ ಬ್ಯಾರನ್ ಅವರೊಂದಿಗೆ ವೇದಿಕೆಯಲ್ಲಿ "ಹಿಂದೆಂದೂ ನೋಡಿರದ ರಾಜಕೀಯ ಗೆಲುವು" ಎಂದು ವಿವರಿಸಿದರು.
ಅಮೆರಿಕಾ ಅಧ್ಯಕ್ಷ ಚುನಾವಣೆ: ಗೆಲುವಿನ ನಗೆ ಬೀರಿದ ಡೊನಾಲ್ಡ್ ಟ್ರಂಪ್