ಚುನಾವಣೆ ಗೆಲ್ಲಲು ಮೋದಿ ವಿಡಿಯೋಗೆ ಟ್ರಂಪ್ ಮೊರೆ| ನಮಸ್ತೆ ಟ್ರಂಪ್ ಕಾರ್ಯಕ್ರಮದ ವಿಡಿಯೋ ತುಣುಕು ಬಳಕೆ
ವಾಷಿಂಗ್ಟನ್(ಆ.24): ಮುಂಬರುವ ಅಧ್ಯಕ್ಷೀಯ ಚುನಾವಣೆ ಗೆಲ್ಲಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಪ್ರಧಾನಿ ಮೋದಿ ಅವರ ‘ಮೊರೆ’ ಹೋಗಿದ್ದಾರೆ. ಮೋದಿ ಜೊತೆಗಿನ ಟ್ರಂಪ್ ಅವರ ಕೆಲ ವಿಡಿಯೋಗಳನ್ನು ಟ್ರಂಪ್‌ರ ಬಿಡುಗಡೆ ಮಾಡಿದೆ. ಈ ಮೂಲಕ 20 ಲಕ್ಷದಷ್ಟಿರುವ ಭಾರತೀಯರನ್ನು ಸೆಳೆಯುವ ಕೆಲಸ ಮಾಡಿದೆ.
ವಿಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡೆನ್ ಅವರು ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರನ್ನು ತಮ್ಮ ಉಪಾಧ್ಯಕ್ಷ ಸಂಗಾತಿಯಾಗಿ ಆಯ್ಕೆಯಾಗಿ ಭಾರೀ ಪ್ರಮಾಣದಲ್ಲಿ ಭಾರತೀಯರ ಗಮನ ಸೆಳೆದ ಬೆನ್ನಲ್ಲೇ ಟ್ರಂಪ್ ಈ ಹೊಸ ದಾಳ ಉರುಳಿಸಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಗುಜರಾತ್‌ನ ಸರ್ದಾರ್ ಪಟೇಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅವರ ಪತ್ನಿ ಮೆಲಾನಿಯಾ, ಪುತ್ರಿ ಇವಾಂಕಾ ಟ್ರಂಪ್, ಅಮೆರಿಕದ ಹಿರಿಯ ಅಧಿಕಾರಿಗಳು ಸೇರಿದಂತೆ ಇನ್ನಿತರರ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ವೇದಿಕೆ ಹಂಚಿಕೊಂಡಿದ್ದರು. ಜೊತೆಗೆ ಮೋದಿ ಅಮೆರಿಕಕ್ಕೆ ಭೇಟಿ ನೀಡಿ ಭಾಗವಹಿಸಿದ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಟ್ರಂಪ್ ಭಾಗವಹಿಸಿದ್ದರು. ಈ ಕಾರ್ಯಕ್ರಮ ಕುರಿತ ಕೆಲ ವಿಡಿಯೋ ತುಣುಕುಗಳನ್ನು ಟ್ರಂಪ್ ಅವರ ಚುನಾವಣಾ ತಂಡ ಬಿಡುಗಡೆ ಮಾಡಿದೆ.
ಅಮೆರಿಕವು ಭಾರತದ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿದೆ. ಅಲ್ಲದೆ, ಈ ನಮ್ಮ ಪ್ರಚಾರವನ್ನು ಭಾರತೀಯ-ಅಮೆರಿಕ ಸಮುದಾಯವು ಸಂತೋಷದಿಂದ ಆಸ್ವಾದಿಸುತ್ತಿದೆ ಎಂದು ಟ್ರಂಪ್ ಅವರ ಚುನಾವಣಾ ಚುನಾವಣೆಯ ಆರ್ಥಿಕ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಕಿಂಬೆರ್ಲಿ ಗಿಲ್‌ಫೋಯ್‌್ಲ ಹೇಳಿದ್ದಾರೆ.