'ಒನ್‌ ಸೈಡೆಡ್‌ ಡಿಸಾಸ್ಟರ್‌..' ಭಾರತದ ಜೊತೆಗಿನ ಸಂಬಂಧ ವಿಪತ್ತು ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌!

Published : Sep 01, 2025, 08:03 PM IST
Narendra Modi with Donald Trump

ಸಾರಾಂಶ

ಡೊನಾಲ್ಡ್ ಟ್ರಂಪ್ ಭಾರತದೊಂದಿಗಿನ ವ್ಯಾಪಾರ ಸಂಬಂಧವನ್ನು 'ಏಕಪಕ್ಷೀಯ ವಿಪತ್ತು' ಎಂದು ಕರೆದಿದ್ದಾರೆ. ಭಾರತವು ಅಮೆರಿಕಕ್ಕೆ ಹೆಚ್ಚಿನ ಸರಕುಗಳನ್ನು ರಫ್ತು ಮಾಡುತ್ತದೆ ಆದರೆ ಅಮೆರಿಕದಿಂದ ಕಡಿಮೆ ಆಮದು ಮಾಡಿಕೊಳ್ಳುತ್ತದೆ ಮತ್ತು ಹೆಚ್ಚಿನ ಸುಂಕ ವಿಧಿಸುತ್ತದೆ ಎಂದು ಟ್ರಂಪ್ ಆರೋಪಿಸಿದ್ದಾರೆ.

ನವದೆಹಲಿ (ಸೆ.1): ಕೊನೆಗೂ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತದ ವಿರುದ್ಧ ನೇರಾನೇರ ಯುದ್ಧಕ್ಕೆ ಇಳಿದಿದ್ದಾರೆ. ಶಾಂಗೈ ಸಹಕಾರ ಸಂಘದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಆತ್ಮೀಯ ಮಾತುಕತೆಯ ಬೆನ್ನಲ್ಲಿಯೇ ಭಾರತದ ಜೊತೆಗಿನ ಸಂಬಂಧವನ್ನು ಏಕಪಕ್ಷೀಯ ವಿಪತ್ತು ಎಂದು ಅಮೆರಿಕ ಅಧ್ಯಕ್ಷ ಕರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಚೀನಾ ಮತ್ತು ರಷ್ಯಾ ಅಧ್ಯಕ್ಷರಾದ ಕ್ಸಿ ಜಿನ್‌ಪಿಂಗ್ ಮತ್ತು ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದೊಂದಿಗಿನ ಸಂಬಂಧವನ್ನು 'ಏಕಪಕ್ಷೀಯ ವಿಪತ್ತು' ಎಂದು ಕರೆದು ಅಚ್ಚರಿ ಮೂಡಿಸಿದ್ದಾರೆ.

ಅಮೆರಿಕ ಭಾರತದಲ್ಲಿ ಸೀಮಿತ ವ್ಯವಹಾರ ನಡೆಸಿದೆ, ಆದರೆ ಅಮೆರಿಕಕ್ಕೆ ಭಾರತ ಹೆಚ್ಚಿನ ಸರಕುಗಳನ್ನು ರವಾನಿಸಿದೆ ಎಂದು ಟ್ರಂಪ್ ವಾದಿಸಿದ್ದಾರೆ. ನವದೆಹಲಿಯ ಹೆಚ್ಚಿನ ಸುಂಕಗಳಿಂದಾಗಿ ಅಮೆರಿಕದ ಕಂಪನಿಗಳಿಗೆ ದೇಶದೊಳಗೆ ಮಾರಾಟ ಮಾಡಲು ಕಷ್ಟವಾಗುತ್ತಿದೆ ಎಂದು ಅವರು ದೂಷಿಸಿದರು ಮತ್ತು ಭಾರತವು ರಷ್ಯಾದಿಂದ ತೈಲ ಮತ್ತು ಮಿಲಿಟರಿ ಉತ್ಪನ್ನಗಳನ್ನು ನಿರಂತರವಾಗಿ ಖರೀದಿಸುತ್ತಿರುವುದರ ಬಗ್ಗೆ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ಭಾರತದೊಂದಿಗೆ ನಾವು ಬಹಳ ಕಡಿಮೆ ವ್ಯವಹಾರ ಮಾಡುತ್ತೇವೆ, ಆದರೆ ಅವರು ನಮ್ಮೊಂದಿಗೆ ಅಪಾರ ಪ್ರಮಾಣದ ವ್ಯವಹಾರ ಮಾಡುತ್ತಾರೆ ಎಂಬುದು ಕೆಲವೇ ಜನರಿಗೆ ಅರ್ಥವಾಗುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಅವರು ನಮಗೆ ಬೃಹತ್ ಪ್ರಮಾಣದ ಸರಕುಗಳನ್ನು ಮಾರಾಟ ಮಾಡುತ್ತಾರೆ. ಆ ಮೂಲಕ ಅವರ ಅತಿದೊಡ್ಡ "ಕ್ಲೈಂಟ್" ನಾವಾಗಿದ್ದೇವೆ, ಆದರೆ ನಾವು ಅವರಲ್ಲಿ ಬಹಳ ಕಡಿಮೆ ಮಾರಾಟ ಮಾಡುತ್ತೇವೆ. ಇಲ್ಲಿಯವರೆಗೆ ಸಂಪೂರ್ಣವಾಗಿ ಏಕಪಕ್ಷೀಯ ಸಂಬಂಧ ಇದು. ಇದು ಹಲವು ದಶಕಗಳಿಂದ ನಡೆದುಕೊಂಡು ಬಂದಿದೆ" ಎಂದು ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ಬರೆದಿದ್ದಾರೆ.

"ಇಲ್ಲಿಯವರೆಗೆ ಭಾರತವು ಯಾವುದೇ ದೇಶಕ್ಕಿಂತ ಹೆಚ್ಚಿನ ಸುಂಕಗಳನ್ನು ವಿಧಿಸಿರುವುದರಿಂದ ನಮ್ಮ ವ್ಯವಹಾರಗಳು ಭಾರತಕ್ಕೆ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಇದು ಸಂಪೂರ್ಣವಾಗಿ ಏಕಪಕ್ಷೀಯ ವಿಪತ್ತು! ಅಲ್ಲದೆ, ಭಾರತವು ತನ್ನ ಹೆಚ್ಚಿನ ತೈಲ ಮತ್ತು ಮಿಲಿಟರಿ ಉತ್ಪನ್ನಗಳನ್ನು ರಷ್ಯಾದಿಂದ ಖರೀದಿಸುತ್ತದೆ, ಅಮೆರಿಕದಿಂದ ಬಹಳ ಕಡಿಮೆ ಖರೀದಿ ಮಾಡುತ್ತಾರೆ. ಅವರು ಈಗ ತಮ್ಮ ಸುಂಕಗಳನ್ನು ಶೂನ್ಯಕ್ಕೆ ಇಳಿಸಲು ಮುಂದಾಗಿದ್ದಾರೆ, ಆದರೆ ತಡವಾಗುತ್ತಿದೆ. ಅವರು ವರ್ಷಗಳ ಹಿಂದೆಯೇ ಹಾಗೆ ಮಾಡಬೇಕಿತ್ತು. ಜನರು ಯೋಚಿಸಲು ಕೆಲವು ಸರಳ ಸಂಗತಿಗಳು!!!' ಎಂದು ಬರೆದುಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಈ ಸರ್ಕಾರದಲ್ಲಿ 63% ಕಮಿಷನ್‌: ಅಶೋಕ್‌
ಸಾಮಾಜಿಕ ಜಾಲತಾಣ ಖಾತೆ ಪಬ್ಲಿಕ್‌ ಇದ್ರಷ್ಟೇ ವೀಸಾ : ಟ್ರಂಪ್‌