ಮಹಿಳೆಯ ಶ್ವಾಸಕೋಶದಲ್ಲಿತ್ತು ಎಲುಬಿನ ತುಂಡು/ 14 ವರ್ಷಗಳ ನಂತರ ಸರ್ಜರಿ/ ಚೀನಾದ ಪ್ರಕರಣದ ಬಗ್ಗೆ ಬಹುದೊಡ್ಡ ಚರ್ಚೆ/ ಮಹಿಳೆ ಆರೋಗ್ಯವಾಗಿದ್ದಾಳೆ
ಬೀಜಿಂಗ್(ಏ. 15) ಈ ಆಪರೇಶನ್ ಕತೆ ಕೇಳಲೇಬೇಕು. ಚೀನಾದ ವೈದ್ಯರು ಈ ಆಪರೇಶನ್ ಮಾಡುವಾಗ ಬೆಚ್ಚಿ ಬಿದ್ದಿದ್ದರು. ಮಹಿಳೆಯ ಶ್ವಾಸಕೋಶದಲ್ಲಿ ಸಿಲುಕೊಂಡಿದ್ದ ಕೋಳಿಯ ಎಲುಬಿನ ತುಂಡನ್ನು ಬರೋಬ್ಬರಿ 14 ವರ್ಷದ ನಂತರ ಹೊರತೆಗೆದಿದ್ದಾರೆ.
22 ವರ್ಷದ ಮಹಿಳೆ ಕೆಮ್ಮು ಮತ್ತು ಶ್ವಾಸಕೋಶದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಮಹಿಳೆ ಎಂಟು ವರ್ಷದವಳಿದ್ದಾಗ ಆಕಸ್ಮಿಕವಾಗಿ ಎಲುಬಿನ ತುಂಡನ್ನು ಸೇವಿಸಿದ್ದಳು . ಆದರೆ ಈ ವಿಚಾರ ಗೊತ್ತಿರಲಿಲ್ಲ. ಮಹಿಳೆ ಕೆಮ್ಮಿನ ಕಾರಣಕ್ಕೆ ಅನೇಕ ಮೆಡಿಕಲ್ ಪರೀಕ್ಷೆಗೆ ಒಳಗಾಗಿದ್ದರು. ವೈದ್ಯರಿಗೂ ಸಮಸ್ಯೆ ಮೂಲ ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ.
ವೈದ್ಯರು ಇದಕ್ಕೆ ವಿವಿಧ ವಧ ನೀಡಿದ್ದರಿಂದ ಮಾತ್ರೆ ಸೇವಿಸಿ ಮಹಿಳೆಯ ಪರಿಸ್ಥಿತಿ ಬಿಗಡಾಯಿಸಿತ್ತು. ನಂತರ ಮಹಿಳೆ ಚೀನಾದ ಗಾನ್ಝವ್ ಆಸ್ಪತ್ರೆಗೆ ದಾಖಲಾಗಿ ಸ್ಕಾನ್ ಮಾಡಿಸಿದಾಗ ಬಲ ಶ್ವಾಸಕೋಶದಲ್ಲಿ ವಸ್ತುವೊಂದು ಪತ್ತೆಯಾಗಿದೆ. ಇದಾದ ಮೇಲೆ ಅರ್ಧಗಂಟೆಗಳ ಸರ್ಜರಿ ಮಾಡಲಾಗಿದೆ. ಇದು ಕೋಳಿ ಅಥವಾ ಬಾತುಕೋಳಿಯ ಎಲುಬಿನ ತುಂಡು ಎಂದು ಹೇಳಲಾಗಿದೆ.
ಕೆಲ ದಿನಗಳ ಹಿಂದೆ ಇದೇ ಆಸ್ಪತ್ರೆ ವೈದ್ಯರು 26 ವರ್ಷದ ಪುರುಷನ ಹೊಟ್ಟೆಯಿಂದ ಚಾಕುವೊಂದನ್ನು ಹೊರಗೆ ತೆಗೆದಿದ್ದರು. ಆಕಸ್ಮಿಕವಾಗಿ ಗೊತ್ತಿಲ್ಲದೇ ಸೇವನೆ ಮಾಡಿದ್ದ ಎಲುಬಿನ ತುಂಡು ಮಹಿಳೆಯ ದೇಹದಲ್ಲಿ 14 ವರ್ಷಗಳ ಕಾಲ ಇತ್ತು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ