ACಯಿಂದ ಕೊರೋನಾ ಹರಡದಂತೆ ತಡೆಯಲು ಇದೆ ಮಾರ್ಗ, ಇಲ್ಲಿದೆ ಸಂಶೋಧಕರ ಟಿಪ್ಸ್!

By Suvarna News  |  First Published Apr 15, 2020, 6:51 PM IST
ಕೊರೋನಾ ವೈರಸ್ ಹರಡದಂತೆ ತಡೆಯಲು ಸರ್ಕಾರ ಹಲವು  ಕ್ರಮಗಳನ್ನು ಕೈಗೊಂಡಿದೆ. ಇದರ ಜೊತೆಗೆ ಪ್ರತಿಯೊಬ್ಬರು, ಪ್ರತಿ ಸಂಸ್ಥೆಗಳು ಕೂಡ ವೈರಸ್ ಹರದದಂತೆ ತಡೆಯಲು ಹೆಜ್ಜೆ ಇಡಬೇಕಿದೆ. ಇದರಲ್ಲಿ ಪ್ರಮುಖವಾಗಿ AC(ಏರ್ ಕಂಡೀಷನರ್)ವಾತಾವರಣದಲ್ಲಿ ವೈರಸ್ ಜೀವಿತಾವದಿ ಹೆಚ್ಚು ಕಾಲ ಇರುತ್ತದೆ ಅನ್ನೋದು ಈಗಾಗಲೇ ದೃಢಪಟ್ಟಿದೆ. ಇದೀಗ  AC ಹಾಕಿದ್ದರೂ ವೈರಸ್ ತಡೆಯಲು ಕೆಲ ಮಾರ್ಗಗಳನ್ನು ಸಂಶೋಧಕರು ಹೇಳಿದ್ದಾರೆ. ಈ ಕುರಿತ ಟಿಪ್ಸ್ ಇಲ್ಲಿದೆ.

ಕ್ಯಾಲಿಫೋರ್ನಿಯಾ(ಏ.15): ತಂಪು ವಾತಾವರಣದಲ್ಲಿ ಕೊರೋನಾ ವೈರಾಣುವಿನ ಜೀವಿತಾವಧಿ ಹೆಚ್ಚಿರುತ್ತಿದೆ. ಇದೇ ಸೂರ್ಯನ ಬಿಸಿಲಿಗೆ ವೈರಾಣು ಹರಡುವಿಕೆ ಸ್ವಲ್ಪಮಟ್ಟಿಗೆ ಕಡಿಮೆ. ಹಾಗಂತ ಬಿಸಿಲಿಗೆ ನಿಂತರೆ ಕೊರೋನಾ ಬರುವುದಿಲ್ಲ ಎಂದರ್ಥವಲ್ಲ. ಅಧ್ಯಯನಗಳ ಪ್ರಕಾರಣ ಕೊರೋನಾ ವೈರಸ್ ಹರಡುವಿಕೆಯಲ್ಲಿ  AC(ಏರ್ ಕಂಡೀಷನರ್ ಪಾತ್ರವೂ ಇದೆ ಅನ್ನೋದು ಬಹಿರಂಗವಾಗಿದೆ. ಇದೀಗ ಇದೇ  ACಯಿಂದ ಕೊರೋನಾ ಹರಡದಂತೆ ತಡೆಯಲು ಏನು ಮಾಡಬೇಕು ಅನ್ನೋದನ್ನು ಕ್ಯಾಲಿಫೋರ್ನಿಯಾದ ಮೈಕ್ರೋಬಯೋಲಜಿ ಯನಿವರ್ಸಿಟಿ ಆಫ್ ಆರ್ಗಾನ್ ಸಂಶೋಧನೆ ನಡೆಸಿ ಕೆಲ ಸೂಚನೆಗಳನ್ನು ನೀಡಿದೆ.

ಮೊದಲ ಬಾರಿಗೆ COVD-19 ಸಾವಿನ ಸಂಖ್ಯೆಗಿಂತ ಗುಣಮುಖರ ಸಂಖ್ಯೆ ಹೆಚ್ಚು!...

ಕ್ಯಾಲಿಫೋರ್ನಿಯಾದ ಮೈಕ್ರೋಬಯೋಲಜಿ ವಿಶ್ವವಿದ್ಯಾಲಯ ಪ್ರಕಾರ ವಿಶ್ವದ ಬಹುತೇಕರು ತಮ್ಮ ದಿನದ ಶೇಕಡಾ 90 ರಷ್ಟು ಭಾಗವನ್ನು ಮಾನವ ನಿರ್ಮಿತ ವಾತಾವರಣದಲ್ಲಿ ಕಳೆಯುತ್ತಾರೆ. ಆಂದರೆ ನೈಸರ್ಗಿಕವಾದ ವಾತಾವರಣದ ಬದುಕು ಸಿಗುವುದೇ ಇಲ್ಲ. ಕಚೇರಿಯಲ್ಲಿ ಏಸಿ ಗಾಳಿ, ಟ್ರಾಫಿಕ್ ಹಾಗೂ ರಸ್ತೆಗಳಲ್ಲಿ ಕಾರ್ಬನ್ ಮಿಶ್ರಿತ ಗಾಳಿ ಸೇವಿಸುತ್ತಾನೆ. ಹೀಗಾಗಿ ಇಂತವರ ರೋಗ ನಿರೋಧಕ ಶಕ್ತಿ ನಿರ್ಮಲ ವಾತಾವರಣದಲ್ಲಿ ಬದುಕುತ್ತಿರುವವರಿಗಿಂತ ಕಡಿಮೆ ಇರುತ್ತದೆ. ಹೀಗಾಗಿ ಕೊರೋನಾ ಬಹುಬೇನೆ ತಗಲುವು ಸಂಭವ ಜಾಸ್ತಿ.

ಕತ್ತಲೆ ಅಥವಾ  ಮಾನವ ನಿರ್ಮಿತಿ ಲೈಟ್ ಬೆಳಕಿನ ವಾತಾವರಣದಲ್ಲಿ ಕೊರೋನಾ ವೈರಸ್ ಜೀವಿತಾವಧಿ ಸರಾಸರಿ 31 ನಿಮಿಷ. ಇನ್ನು ಸೂರ್ಯನ ಬಿಸಿಲಿನಲ್ಲಿ ಕೊರೋನಾ ವೈರಸ್ ಜೀವಿತಾದವಿ 2 ರಿಂದ 3 ನಿಮಿಷ. ಹೀಗಾಗಿ ಹವಾನಿಯಂತ್ರಿಕ ಕಟ್ಟಡ, ಕಚೇರಿ ಅಥವಾ ಮನೆಗಳಲ್ಲಿ ಕಿಟಕಿ ಬಾಗಿಲುಗಳನ್ನು ತೆರೆದಿಟ್ಟರೆ ವೈರಸ್ ಹರಡುವಿಕೆಯನ್ನು ಕೊಂಚ ಮಟ್ಟಿಗೆ ತಡೆಗಟ್ಟಬಹುದು. ಗಾಳಿ ಹಾಗೂ ಬೆಳಕು ಸರಿಯಾದ ಪ್ರಮಾಣದಲ್ಲಿ ಕೋಣೆಯೊಳಗೆ ಪ್ರವೇಶಿಸಬೇಕು ಎಂದು ಸಂಶೋಧಕರು ಹೇಳಿದ್ದಾರೆ.

ಏಸಿ ಇರುವ ಕಟ್ಟಡಗಳು, ಕೋಣೆಗಳಿಗೆ ಹೊರಗಿನ ಗಾಳಿ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಹೀಗಿದ್ದಲಿ ವೈರಸ್ ಜೀವಿತಾವದಿ ಹಾಗೂ ಹರಡುವಿಕೆ ಹಚ್ಚಾಗುತ್ತದೆ. ಇದಕ್ಕಾಗಿ ಹೆಚ್ಚು ಬೆಳಕು ಹಾಗೂ ನೈಸರ್ಗಿಕ ಗಾಳಿಯಾಡಲು ಅವಕಾಶ ನೀಡಬೇಕು ಎಂದು ಅಧ್ಯಯನದ ವರಿದ ಹೇಳುತ್ತಿದೆ. 
 
click me!