ಭಾರತದ ಕಾಶ್ಮೀರ & ಮಣಿಪುರಕ್ಕೆ ಭೇಟಿ ನೀಡದಿರಿ: ತನ್ನ ನಾಗರಿಕರಿಗೆ ಅಮೆರಿಕಾ ಸೂಚನೆ

By Anusha Kb  |  First Published Jul 26, 2024, 4:02 PM IST

ಭಾರತದ ಗಲಭೆ ಪೀಡಿತ ಮಣಿಪುರ ಹಾಗೂ ಜಮ್ಮುಕಾಶ್ಮೀರಕ್ಕೆ ಭೇಟಿ ನೀಡದಂತೆ ಅಮೆರಿಕಾ ತನ್ನ ನಾಗರಿಕರಿಗೆ ಟ್ರಾವೆಲ್ ಅಡ್ವೈಸರಿ(ಪ್ರವಾಸಿ ಸಲಹಾವಳಿ) ಬಿಡುಗಡೆ ಮಾಡಿದೆ. ಭಾರತ ಪಾಕಿಸ್ತಾನ ಗಡಿ ಭಾಗ ಹಾಗೂ  ನಕ್ಸಲ್‌ ಪ್ರಭಾವ ಇರುವ ಕೇಂದ್ರ ಹಾಗೂ ಪೂರ್ವ ಭಾರತಕ್ಕೂ ಭೇಟಿ ನೀಡದಂತೆ ಅದು ತನ್ನ ನಾಗರಿಕರಿಗೆ ಸಲಹೆ ನೀಡಿದೆ.


ನವದೆಹಲಿ: ಭಾರತದ ಗಲಭೆ ಪೀಡಿತ ಮಣಿಪುರ ಹಾಗೂ ಜಮ್ಮುಕಾಶ್ಮೀರಕ್ಕೆ ಭೇಟಿ ನೀಡದಂತೆ ಅಮೆರಿಕಾ ತನ್ನ ನಾಗರಿಕರಿಗೆ ಟ್ರಾವೆಲ್ ಅಡ್ವೈಸರಿ(ಪ್ರವಾಸಿ ಸಲಹಾವಳಿ) ಬಿಡುಗಡೆ ಮಾಡಿದೆ. ಭಾರತ ಪಾಕಿಸ್ತಾನ ಗಡಿ ಭಾಗ ಹಾಗೂ  ನಕ್ಸಲ್‌ ಪ್ರಭಾವ ಇರುವ ಕೇಂದ್ರ ಹಾಗೂ ಪೂರ್ವ ಭಾರತಕ್ಕೂ ಭೇಟಿ ನೀಡದಂತೆ ಅದು ತನ್ನ ನಾಗರಿಕರಿಗೆ ಸಲಹೆ ನೀಡಿದೆ. ಭಾರತದ ಸ್ಥಳಗಳನ್ನು ಹೆಚ್ಚಿನ ಜಾಗರೂಕರಾಗಿರಬೇಕಾದ ಸ್ಥಳಗಳಲ್ಲಿ 2ನೇ ಹಂತದಲ್ಲಿ ಇರಿಸಲಾಗಿದ್ದು, ದೇಶದ ಇನ್ನೂ ಕೆಲ ಭಾಗಗಳನ್ನು 4ನೇ ಸ್ಥಾನದಲ್ಲಿ ಇರಿಸಿದೆ.

ಅಪರಾಧ ಹಾಗೂ ಭಯೋತ್ಪಾದನೆಯಿಂದಾಗಿ ಭಾರತದಲ್ಲಿ ತನ್ನ ನಾಗರಿಕರಿಗೆ ಎಚ್ಚರಿಕೆಯನ್ನು ಹೆಚ್ಚಿಸಲಾಗಿದೆ. ಅಲ್ಲಿನ ಕೆಲ ಪ್ರದೇಶಗಳು ಅಪಾಯವನ್ನು ಹೆಚ್ಚಿಸಿವೆ ಎಂದು ಅಮೆರಿಕಾದ ರಾಜ್ಯ ವಿಭಾಗವೂ ತನ್ನ ನಾಗರಿಕರಿಗೆ ಕಳುಹಿಸಿದ ಪ್ರವಾಸಿ ಸಲಹಾವಳಿಯಲ್ಲಿ ಉಲ್ಲೇಖಿಸಲಾಗಿದೆ. 

Tap to resize

Latest Videos

undefined

'ಪಾಕ್‌ ಅಪಾಯಕಾರಿ ದೇಶ' ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದ ಬ್ರಿಟನ್

ಹೆಚ್ಚಿದ ಭಯೋತ್ಪಾದನೆ ಹಾಗೂ ನಾಗರಿಕ ಅಸಹನೆಯ ಕಾರಣಕ್ಕೆ ಪೂರ್ವ ಲಡಾಖ್ ಪ್ರದೇಶ ಹಾಗೂ ಲೇಹ್ ಹೊರತುಪಡಿಸಿ, ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡದಿರಿ. ಶಸ್ತ್ರಾಸ್ತ್ರ ಸಂಘರ್ಷ ನಡೆಯುವ ಸಾಧ್ಯತೆ ಇರುವುದರಿಂದ ಭಾರತ ಪಾಕಿಸ್ತಾನ ಗಡಿಯ 10 ಕಿಲೋ ಮೀಟರ್ ಒಳಗೆ ಹಾಗೂ ಹಿಂಸಾಚಾರದ ಕಾರಣಕ್ಕೆ ಮಧ್ಯ ಭಾರತ ಹಾಗೂ ಪೂರ್ವ ಭಾರತದ ಮಣಿಪುರಕ್ಕೆ ಭೇಟಿ ನೀಡದಂತೆ ಸೂಚಿಸಿದೆ. ಭಯೋತ್ಪಾದನೆ ಹಾಗೂ ಹಿಂಸಾಚಾರ ಹೆಚ್ಚಿರುವುದರಿಂದ  ಈಶಾನ್ಯ ರಾಜ್ಯಗಳಿಗೆ ಪ್ರವಾಸ ತೆರಳುವವರು ಮರುಪರಿಶೀಲನೆ ನಡೆಸಿ ಸಾಗುವತೆ ಅದು ಸಲಹೆ ನೀಡಿದೆ. 

ಭಾರತದಲ್ಲಿ ಅತ್ಯಾಚಾರವು ವೇಗವಾಗಿ ಬೆಳೆಯುತ್ತಿರುವ ಅಪರಾಧಗಳಲ್ಲಿ ಒಂದಾಗಿದೆ. ಲೈಂಗಿಕ ದೌರ್ಜನ್ಯದಂತಹ ಹಿಂಸಾತ್ಮಕ ಅಪರಾಧಗಳು ಪ್ರವಾಸಿ ತಾಣಗಳಲ್ಲಿ ಮತ್ತು ಇತರ ಸ್ಥಳಗಳಲ್ಲಿ ಹೆಚ್ಚು ಸಂಭವಿಸಿವೆ ಎಂದು ಭಾರತೀಯ ಅಧಿಕಾರಿಗಳು ವರದಿ ಮಾಡಿದ್ದಾರೆ ಎಂದು ಈ ಸಲಹೆಯು ಹೇಳಿದೆ. ಭಯೋತ್ಪಾದಕರು ಇಲ್ಲಿ ಯಾವುದೇ ಎಚ್ಚರಿಕೆ ನೀಡದೇ ದಾಳಿ ಮಾಡಬಹುದು.  ಪ್ರವಾಸಿ ಸ್ಥಳಗಳು, ಸಾರಿಗೆ ಕೇಂದ್ರಗಳು, ಮಾರುಕಟ್ಟೆಗಳು, ಶಾಪಿಂಗ್ ಮಾಲ್‌ಗಳು ಮತ್ತು ಸರ್ಕಾರಿ ಸೌಲಭ್ಯಗಳನ್ನು  ಅವರು ಗುರಿಯಾಗಿಸಿಕೊಂಡಿದ್ದಾರೆ ಎಂದು ತನ್ನ ನಾಗರಿಕರಿಗೆ ಅಮೆರಿಕಾ ಮಾಹಿತಿ ನೀಡಿದೆ. 

ಭಾರತೀಯ ನಾಗರಿಕರಿಗೆ ಯುಕೆ ಭರ್ಜರಿ ಆಫರ್‌, ವೀಸಾ ಬೇಕಾದ್ರೆ ಮತದಾನ ಮಾಡಿ

ಅಲ್ಲದೇ ಭಾರತದಲ್ಲಿರುವ ಅಮೆರಿಕಾ ಪ್ರಜೆಗಳಿಗೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ  ಸಹಾಯ ಮಾಡುವುದಕ್ಕೆ ಅಮೆರಿಕಾವೂ ಸೀಮಿತವಾದ ಅವಕಾಶವನ್ನು ಹೊಂದಿದೆ. ಪೂರ್ವ ಮಹಾರಾಷ್ಟ್ರದಿಂದ ಉತ್ತರ ತೆಲಂಗಾಣದ ಮೂಲಕ ಪಶ್ಚಿಮ ಬಂಗಾಳದವರೆಗೂ ಇದೆ.  ಹಾಗೆಯೇ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಕಾರಣಕ್ಕೆ ಈ ಪ್ರದೇಶಕ್ಕೆ ಹೋಗಲು ಅಮೆರಿಕಾ ಸರ್ಕಾರದ ಉದ್ಯೋಗಿಗಳು ಅಗತ್ಯವಾಗಿ ವಿಶೇಷ ಅನುಮತಿಯನ್ನು ಪಡೆಯಬೇಕು ಎಂದು ಸೂಚಿಸಲಾಗಿದೆ. 

ಭಾರತ ಹಾಗೂ ಪಾಕಿಸ್ತಾನ ನಡುವೆ ಗಡಿ ನಿಯಂತ್ರಣ ರೇಖೆಯುದ್ಧಕ್ಕೂ ಇದು ಸಾಮಾನ್ಯವಾಗಿದೆ. ಭಾರತ ಪಾಕಿಸ್ತಾನ ಎರಡು ದೇಶಗಳು ಶಕ್ತಿಶಾಲಿಯಾದ ಸೇನೆಯನ್ನು ಗಡಿಯ ಎರಡು ಕಡೆಗೂ ನಿಯೋಜಿಸಿವೆ. ಭಾರತ ಅಥವಾ ಪಾಕಿಸ್ತಾನದ ನಾಗರಿಕರಲ್ಲದವರಿಗೆ ಮಾತ್ರ ಅಧಿಕೃತವಾಗಿ ಗಡಿ ದಾಟಲು ಪಂಜಾಬ್‌ನಲ್ಲಿ ಅವಕಾಶವಿದೆ. ಇದು ಭಾರತದ ಅಟ್ಟಾರಿ ಮತ್ತು ಪಾಕಿಸ್ತಾನದ ವಾಘಾ ಗಡಿ ನಡುವೆ ಇದೆ. ಗಡಿ ದಾಟುವ ಪ್ರದೇಶವೂ ಸಾಮಾನ್ಯವಾಗಿ ತೆರೆದಿರುತ್ತದೆ, ಆದರೆ ನೀವು ಪ್ರಯಾಣಿಸುವ ಮೊದಲು ಅದರ ಪ್ರಸ್ತುತ ಸ್ಥಿತಿಯನ್ನು ಪರಿಶೀಲಿಸಿ ಎಂದು ಸೂಚಿಸಲಾಗಿದೆ. 

click me!