ಯುದ್ಧಪೀಡಿತ ಗಾಜಾದಲ್ಲಿ ಮೃತ ತುಂಬು ಗರ್ಭಿಣಿಗೆ ತಕ್ಷಣವೇ ಸಿಸೇರಿಯನ್ : ಮಗು ಬದುಕಿಸಿದ ವೈದ್ಯರು

By Anusha Kb  |  First Published Jul 26, 2024, 2:23 PM IST

ಇಸ್ರೇಲ್ ವಾಯುದಾಳಿಯಿಂದ ಗಾಯಗೊಂಡು ಸಾವನ್ನಪ್ಪಿದ ತುಂಬು ಗರ್ಭಿಣಿಗೆ ವೈದ್ಯರು ತಕ್ಷಣವೇ ಸೀ ಸೆಕ್ಷನ್ ಮಾಡುವ ಮೂಲಕ ಹೊಟ್ಟೆಯಲ್ಲಿದ್ದ ಮಗುವಿನ ಜೀವ ಉಳಿಸಿದ್ದಾರೆ. ಇದು ಯುದ್ಧಪೀಡಿತ ಗಾಜಾದ ಭೀಕರ ಚಿತ್ರಣವನ್ನು ಜಗತ್ತಿಗೆ ತೆರೆದಿಟ್ಟಿದೆ. 


ಇಸ್ರೇಲ್ ಹಮಾಸ್ ನಡುವಣ ವರ್ಷ ಕಳೆದರೂ ಮುಗಿಯದ ಯುದ್ಧದಿಂದಾಗಿ ಗಾಜಾದಲ್ಲಿರುವ ನಿವಾಸಿಗಳ ಬದುಕು ನರಕವಾಗಿದೆ. ಬಹುತೇಕ ಗಾಜಾ ನಿವಾಸಿಗಳು ನಿರಾಶ್ರಿತರಾಗಿದ್ದರೆ, ಸಾವಿರಾರು ಜನ ಜೀವ ಕಳೆದುಕೊಂಡಿದ್ದಾರೆ. ಕ್ಷಿಪಣಿ ದಾಳಿ ಮದ್ದುಗುಂಡುಗಳ ಯಾವಾಗ ತಲೆ ಮೇಲೆ ಬಂದು ಬೀಳುತ್ತದೋ ಎಂಬ ಭಯದಲ್ಲೇ ಪುಟ್ಟ ಮಕ್ಕಳು, ಮಹಿಳೆಯರು, ವೃದ್ಧರು ಜೀವನ ಕಳೆಯುವಂತಾಗಿದೆ. ಹೀಗಿರುವಾಗ ಇಸ್ರೇಲ್ ವಾಯುದಾಳಿಯಿಂದ ಗಾಯಗೊಂಡು ಸಾವನ್ನಪ್ಪಿದ ತುಂಬು ಗರ್ಭಿಣಿಗೆ ವೈದ್ಯರು ತಕ್ಷಣವೇ ಸೀ ಸೆಕ್ಷನ್ ಮಾಡುವ ಮೂಲಕ ಹೊಟ್ಟೆಯಲ್ಲಿದ್ದ ಮಗುವಿನ ಜೀವ ಉಳಿಸಿದ್ದಾರೆ. ಇದು ಯುದ್ಧಪೀಡಿತ ಗಾಜಾದ ಭೀಕರ ಚಿತ್ರಣವನ್ನು ಜಗತ್ತಿಗೆ ತೆರೆದಿಟ್ಟಿದೆ. 

ಕಳೆದ ಶನಿವಾರ ಈ ಘಟನೆ ನಡೆದಿದೆ. ಇಸ್ರೇಲ್ ವಾಯುದಾಳಿಯಿಂದ ಗಾಯಗಳಾಗಿ ತುಂಬು ಗರ್ಭಿಣಿ ಸಾವನ್ನಪ್ಪಿದ್ದ ಕೆಲವೇ ಕ್ಷಣಗಳಲ್ಲಿ ವೈದ್ಯರ ಸಮಯೋಚಿತ ಕೆಲಸ ಮಗುವಿನ ಜೀವ ಉಳಿಸಿದೆ. ತಾಯಿ ಉಸಿರು ಚೆಲ್ಲುತ್ತಿದ್ದಂತೆ ಆಕೆಯ ಹೊಟ್ಟೆ ಕತ್ತರಿಸಿದ ವೈದ್ಯರು ಒಳಗಿದ್ದ ಜಗತ್ತು ಕಾಣದ ಕಂದನನ್ನು ಬದುಕಿಸಿದ್ದಾರೆ. ನುಸಿರಾತ್‌ನ ನಿರಾಶ್ರಿತ ಶಿಬಿರದಲ್ಲಿದ್ದ ಆಕೆಯ ಮನೆ ಮೇಲೆ ತಡರಾತ್ರಿ ವಾಯುದಾಳಿ ಆದ ನಂತರ ಗಾಯಗೊಂಡ ಒಂಭತ್ತು ತಿಂಗಳ ಗರ್ಭಿಣಿ  ಓಲಾ ಅದ್ನಾನ್ ಹರ್ಬ್ ಅಲ್ ಕುರ್ದ್  ನಿರಾಶ್ರಿತರ ಶಿಬಿರದಿಂದ ಸೆಂಟ್ರಲ್ ಗಾಜಾದ ಅಲ್ ಅವ್ದಾ ಆಸ್ಪತ್ರೆ ತಲುಪುವವರೆಗೆ ತಮ್ಮೂಸಿರನ್ನು ಕಾಪಾಡಿಕೊಳ್ಳಲು ಯಶಸ್ವಿಯಾಗಿದ್ದರು. ಅದಾಗಿ ಕೆಲವೇ ಕ್ಷಣಗಳಲ್ಲಿ ಆಕೆ ಸಾವನ್ನಪ್ಪಿದ್ದಾರೆ. 
ಎಂದು ವೈದ್ಯರು ತಿಳಿಸಿದ್ದಾರೆ.

Tap to resize

Latest Videos

undefined

ಯುದ್ಧ ಪೀಡಿತ ಗಾಜಾದ ನಿರಾಶ್ರಿತ ಕೇಂದ್ರ ಮೇಲೆ ಇಸ್ರೇಲ್ ದಾಳಿ: 42 ಬಲಿ

ಆಕೆ ಸಾವಿಗೀಡಾದ ಕೆಲ ಕ್ಷಣಗಳಲ್ಲಿ ಮಗುವಿನ ಜೀವ ಉಳಿಸುವುದರ ಹೊರತಾಗಿ ಬೇರೇನೂ ಯೋಚನೆ ಮಾಡದ ವೈದ್ಯರು ಕೂಡಲೇ ಕಾರ್ಯಪ್ರವೃತ್ತರಾಗಿ ಮಗುವನ್ನು ಹೊರತೆಗೆದಿದ್ದಾರೆ ಎಂದು ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥ ರೇದ್ ಅಲ್-ಸೌದಿ ಹೇಳಿದ್ದಾರೆ. ಆಸ್ಪತ್ರೆಗೆ ತಲುಪಿದ ಕೂಡಲೇ ಆಕೆಯನ್ನು ಆಪರೇಷನ್‌ ಕೊಠಡಿಗೆ ಕರೆದೊಯ್ಯಲಾಯ್ತು. ಆದರೆ ಆಕೆ ಬಹುತೇಕ ಸಾವನ್ನಪ್ಪಿದ್ದಳು ಎಂದು ಸರ್ಜನ್ ಅಕ್ರಮ್ ಹುಸೈನ್ ಹೇಳಿದ್ದಾರೆ. ಆದರೆ ತಾಯಿಯನ್ನು ಉಳಿಸಿಕೊಳ್ಳಲಾಗಿಲ್ಲ, ಮೃತ ತಾಯಿ ತನ್ನ 20ರ ಹರೆಯದಲ್ಲಿದ್ದಳು. ಆಕೆಯ ಹೃದಯಬಡಿತ ಬಹುತೇಕ ಕ್ಷೀಣಗೊಳ್ಳುವುದನ್ನು ಗಮನಿಸಿದ ವೈದ್ಯರು ತುರ್ತು ಸಿಸೇರಿಯನ್‌ ಮಾಡಿ ಭ್ರೂಣವನ್ನು ಹೊರೆತೆಗೆಯಲಾಗಿತ್ತು ಎಂದು   ರೇದ್ ಅಲ್-ಸೌದಿ ಹೇಳಿದ್ದಾರೆ. 

ಗಾಜಾ ನಗರದ ಉತ್ತರದಲ್ಲಿ ನಡೆದ ಬಾಂಬ್ ದಾಳಿಯಲ್ಲಿ  ಒಂದೇ ಕುಟುಂಬದ ಆರು ಜನ ಸಾವನ್ನಪ್ಪಿದ್ದರು ಇದಾದ 24 ಗಂಟೆಯಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ಈ ಗರ್ಭಿಣಿ ಮಹಿಳೆ ಸೇರಿದಂತೆ 30 ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಹೇಳಿದ್ದಾರೆ. ಹಾಗೆಯೇ ನುಸಿರಾತ್‌ ನಿರಾಶ್ರಿತ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 7 ಜನ ಸಾವನ್ನಪ್ಪಿದ್ದಾರೆ. ಅಲ್ಲದೇ ಟೆರೇಸ್ ಮೇಲೆ ಆಟ ಆಡುತ್ತಿದ್ದ ನಾಲ್ವರು ಮಕ್ಕಳು ಗಾಯಗೊಂಡಿದ್ದಾರೆ ಅದರಲ್ಲೊಬ್ಬನ ದೇಹ ಅಂಗ ಊನವಾಗಿದೆ ಎಂದು ವೈದ್ಯರು ಹೇಳಿದ್ದಾರೆ. 

All Eyes On Rafah: ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್ ಆಗ್ತಿರೋ ಪೋಸ್ಟ್‌ನ ಅರ್ಥವೇನು?

ಮೃತ ಗರ್ಭಿಣಿಯ ಗಂಡನೂ ಕೂಡ ಈ ಅವಘಡದಲ್ಲಿ ಗಾಯಗೊಂಡಿದ್ದಾನೆ ಇತ್ತ ಅಮ್ಮನ ಸಾವಿನ ನಂತರ ಜನಿಸಿದ ಮಗುವಿಗೆ ಮಲೆಕ್ ಯಾಸೀನ್ ಎಂದು ಹೆಸರಿಡಲಾಗಿದ್ದು, ತುಂಬಾ ಸಂಕೀರ್ಣ ಸ್ಥಿತಿಯಲ್ಲಿ ಜನಿಸಿದ ಈ ಮಗು ನಂತರವೂ ವೈದ್ಯಕೀಯ ಸಮಸ್ಯೆ ಎದುರಿಸಿದ್ದು, ವೈದ್ಯಕೀಯ ಆರೈಕೆಯ ಬಳಿಕ ಆ ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.

ಗಾಜಾದಲ್ಲಿ ಇಸ್ರೇಲ್ ಹಮಾಸ್ ನಡುವಣ ಯುದ್ಧವೂ ಗರ್ಭಿಣಿ, ಮಹಿಳೆಯರು, ಪುಟ್ಟ ಮಕ್ಕಳ ಜೀವಕ್ಕೆ ಮತ್ತಷ್ಟು ಅಪಾಯ ಉಂಟು ಮಾಡುತ್ತಿದೆ. ತುರ್ತು ಪರಿಸ್ಥಿತಿಯಲ್ಲಿ ಸುರಕ್ಷಿತ ಸ್ಥಳದ ಜೊತೆ ಆಸ್ಪತ್ರೆಯನ್ನು ತಲುಪುವುದೇ ದುಸ್ತರವಾಗಿದೆ. ಯುದ್ಧ ಆರಂಭವಾಗುವುದಕ್ಕೂ ಮೊದಲು ಇಲ್ಲಿ 3,500 ಹಾಸಿಗೆಯ ಆಸ್ಪತ್ರೆಗಳಿದ್ದರೆ, ಈಗ ಎರಡು ದಶಲಕ್ಷಕ್ಕೂ ಹೆಚ್ಚು ಜನರಿರುವ ಈ ಪ್ರದೇಶದಲ್ಲಿ ಕೇವಲ 1500 ಹಾಸಿಗೆಗಳಿರುವ ಆಸ್ಪತ್ರೆ ಇದೆ.  ನುಸಿರಾತ್‌ನ ಅಲ್ ಅವ್ದಾ ಆಸ್ಪತ್ರೆ ಮಾತ್ರ ಸಿಸೇರಿಯನ್, ಹೆರಿಗೆ ಸೇರಿದಂತೆ ಸ್ತ್ರೀರೋಗ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತದೆ. ಅಲ್ಲದೇ ಅವಧಿಗೆ ಮೊದಲೇ ಜನ್ಮ ನೀಡುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. 

click me!