
ಸರಿಸುಮಾರು 50 ವರ್ಷಗಳಷ್ಟು ಹಿಂದಿನ ಕೊಲೆ ಪ್ರಕರಣವೊಂದನ್ನು ಇಂಡಿಯಾನಾದ ಪೊಲೀಸರು ಬೇಧಿಸಿದ್ದಾರೆ. ಆ ಬಗ್ಗೆ ಒಂದು ಡಿಟೇಲ್ ಸ್ಟೋರಿ ಇಲ್ಲಿದೆ. ಸುಮಾರು 50 ವರ್ಷಗಳ ಹಿಂದೆ ಎಳೆಯ ವಯಸ್ಸಿನ ತಾಯಿಯೊಬ್ಬಳು ತನ್ನ ನವಜಾತ ಶಿಶುವಿನೊಂದಿಗೆ ಪ್ರಯಾಣಿಸುತ್ತಿದ್ದಾಗ ಬಲತ್ಕಾರಕ್ಕೊಳಗಾಗಿದ್ದಲ್ಲದೇ ಆಕೆಯನ್ನು ರಸ್ತೆ ಮಧ್ಯೆಯೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಘಟನೆ ನಡೆದು ಸರಿಸುಮಾರು 50 ವರ್ಷಗಳ ನಂತರ ಆಕೆಯನ್ನು ಹೀಗೆ ದಾರುಣವಾಗಿ ಕೊಂದ ಆರೋಪಿ ಯಾರು ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಇಪ್ಪತ್ತಾರು ವರ್ಷದ ಫಿಲ್ಲಿಸ್ ಬೈಲರ್ (Phyllis Bailer)ಮತ್ತುಆಕೆಯ ಮೂರು ವರ್ಷದ ಮಗಳು 1972 ರ ಜುಲೈ 7ರಂದು ಇಂಡಿಯಾನಾಪೊಲಿಸ್‌ನಿಂದ ಈಶಾನ್ಯಕ್ಕೆ ಸುಮಾರು 100 ಮೈಲಿ ದೂರದಲ್ಲಿರುವ ಬ್ಲಫ್ಟನ್‌ಗೆ ತನ್ನ ಹೆತ್ತವರನ್ನು ಭೇಟಿ ಮಾಡಲು ಹೋಗುತ್ತಿದ್ದರು. ಆದರೆ ಅವರು ತಮ್ಮ ತವರನ್ನು ತಲುಪಲೇ ಇಲ್ಲ. ಮತ್ತು ಮರುದಿನ ಬೆಳಗ್ಗೆ 10.30 ರ ಸುಮಾರಿಗೆ ಫಿಲ್ಲಿಸ್ ಬೈಲರ್ ಅವರ ಕಾರು ಖಾಲಿಯಾಗಿ ರಸ್ತೆಬದಿ ನಿಂತಿರುವುದನ್ನು ಪೊಲೀಸರು ಗಮನಿಸಿದ್ದರು.
ಇದನ್ನೂ ಓದಿ: ಕಸದಲ್ಲಿ ಸಿಕ್ಕಿದ್ದ ಶಿಶು ಹಿಂದೆ ಅಪ್ರಾಪ್ತೆ ಪ್ರೇಮ ಪುರಾಣ: ಆಟೋ ಚಾಲಕ ಜೈಲಿಗೆ
ಇಂಡಿಯಾನಾದ ಅಲೆನ್ ಕೌಂಟಿಯಲ್ಲಿ ವಾಹನ ಚಾಲನೆ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಬೈಲರ್ ಶವ ಕಾಣಲು ಸಿಕ್ಕರೆ ಆಕೆಯ ಮೂರು ವರ್ಷದ ಮಗಳು ಸರಿಸುಮಾರು ಒಂದು ಗಂಟೆಯ ನಂತರ ರಸ್ತೆಯ ಪಕ್ಕದಲ್ಲಿರುವ ಹಳ್ಳದಲ್ಲಿ ಸಿಕ್ಕಿತ್ತು. ಆದರೆ ಮಹಿಳೆಯ ಸಾವು ಹೇಗೆ ಸಂಭವಿಸಿತ್ತು ಎಂದು ತನಿಖೆಗಿಳಿದ ಪೊಲೀಸರಿಗೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಗುಂಡು ಹಾರಿಸಿ ಕೊಲ್ಲಲಾಗಿದೆ ಎಂಬುದು ಧೃಡವಾಯ್ತು. ಮಗುವಿಗೆ ಯಾವುದೇ ಹಾನಿಯಾಗಿರಲಿಲ್ಲ. ಆದರೆ ಕೊಲೆಗಾರನ ಸಣ್ಣ ಸುಳಿವು ಕೂಡ ಪೊಲೀಸರಿಗಿರಲಿಲ್ಲ, ಹೀಗಾಗಿ ಈ ಕೊಲೆ ಪ್ರಕರಣವನ್ನು ಬೇಧಿಸಲು ಸರಿಸುಮಾರು ಪೊಲೀಸರಿಗೆ 5 ದಶಕಗಳೇ ಬೇಕಾಯ್ತು.
ಆದರೆ ಈ ವಾರ, ಇಂಡಿಯಾನಾ ರಾಜ್ಯ ಪೊಲೀಸರು 1972 ರಲ್ಲಿ ಮಿಚಿಗನ್‌ನ ಗ್ರಾಸ್ ಪಾಯಿಂಟ್‌ನಲ್ಲಿ ನಡೆದ ತಾಯಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗ 25 ವರ್ಷದವನಾಗಿದ್ದ ಆರೋಪಿ ಫ್ರೆಡ್ ಅಲೆನ್ ಲೀನೆಮನ್ ಕಾರಣ ಎಂದು ಘೋಷಿಸಿದರು. ಈ ಆರೋಪಿ ಲೀನೆಮನ್ ಇಂಡಿಯಾನಾದ ಆಂಡರ್ಸನ್‌ನಲ್ಲಿ ಜನಿಸಿದ್ದ ಕೊಲೆಯಾದ ಬೈಲರ್‌ಗೂ ಈತನಿಗೂ ಯಾವುದೇ ಪೂರ್ವ ದ್ವೇಷಗಳು ಇರಲಿಲ್ಲ, ಯಾವುದೇ ಪರಿಚಯವೂ ಇರಲಿಲ್ಲ, ಆದರೆ ಆತ ಆಗಲೇ ಗಮನಾರ್ಹವಾದ ಅಪರಾಧ ಹಿನ್ನೆಲೆಯನ್ನು ಹೊಂದಿದ್ದ. ಆದರೆ ಆ ಕೊಲೆ ಆರೋಪಿಯೂ ಕೂಡ 1985 ರಲ್ಲಿ ಡೆಟ್ರಾಯಿಟ್‌ನಲ್ಲಿ ಕೊಲೆ ಆಗಿದ್ದ, ಒಂದು ವೇಳೆ ಅವನು ಜೀವಂತವಾಗಿದ್ದರೆ, ಅಲೆನ್ ಕೌಂಟಿ ಪ್ರಾಸಿಕ್ಯೂಟರ್ ಕಚೇರಿ ಆತನ ಮೇಲೆ ಕೊಲೆ ಆರೋಪ ಹೊರಿಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಹುಡುಗಿ ತೋರಿಸಿ ಆಕೆ ಅಮ್ಮನ ಜೊತೆಗೆ ಮದ್ವೆ! ಮುಸುಕು ತೆಗೆದಾಗ ಮದುಮಗ ಶಾಕ್!
ಬೈಲರ್ ನಿಧನರಾದಾಗ, ಪೊಲೀಸರು ಡಿಎನ್ಎ ಪರೀಕ್ಷೆಯನ್ನು ನಡೆಸಲು ಸಾಧ್ಯವಾಗಲಿಲ್ಲ, ಏಕೆಂದರೆ 1990 ರ ದಶಕದಲ್ಲಿ ಈ ಡಿಎನ್‌ಎ ಪರೀಕ್ಷೆಯ ಕಾನೂನು ಜಾರಿಗೆ ಬಂದಿತ್ತು. ಹಾಗೂ ಈ ಪರೀಕ್ಷೆಯ ಮಹತ್ವದ ಬಗ್ಗೆ ಸಮುದಾಯದಲ್ಲಿ ಪ್ರಾಮುಖ್ಯತೆ ಸಿಕ್ಕಿತ್ತು. ಆದರೆ ಬೈಲರ್ ಕೊಲೆಯ ನಂತರದ ವರ್ಷಗಳಲ್ಲಿ, ಪೊಲೀಸರು ಆಕೆಯ ಬಟ್ಟೆಯಿಂದ ವಶಪಡಿಸಿಕೊಂಡ ಕೆಲ ಸಾಕ್ಷ್ಯಗಳಿಂದ ಡಿಎನ್ಎ ಪ್ರೊಫೈಲ್ ಅನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾದರು ಹಾಗೂ ಪ್ರಮುಖ ಶಂಕಿತನನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.
ಡಿಎನ್ಎ ಪರೀಕ್ಷೆಯು ಅಭಿವೃದ್ಧಿ ಹೊಂದುತ್ತಿದ್ದಂತೆ ಅಧಿಕಾರಿಗಳು ಪ್ರಕರಣದ ಕೆಲಸವನ್ನು ಮುಂದುವರೆಸಿದರು ಮತ್ತು ಕಳೆದ ವರ್ಷ, ಪ್ರಕರಣವನ್ನು ಪರಿಹರಿಸಲು ಸಹಾಯ ಮಾಡಲು ಅಧಿಕಾರಿಗಳು ಐಡೆಂಟಿಫೈಯರ್ ಇಂಟರ್ನ್ಯಾಷನಲ್ ಜೊತೆ ಸಹಕರಿಸಿದರು. ಹೀಗಾಗಿ ಈ ವರ್ಷದ ಆರಂಭದಲ್ಲಿ ಈ ಪ್ರಕರಣದಲ್ಲಿ ಲೀನೆಮನ್ ಕೊಲೆಗಾರ ಎಂದು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಈ ಪ್ರಕರಣವು ಇಂಡಿಯಾನಾ ರಾಜ್ಯ ಪೊಲೀಸ್ ಕೋಲ್ಡ್ ಕೇಸ್ ಘಟಕ, ಅಲೆನ್ ಕೌಂಟಿ ಪೊಲೀಸ್ ಇಲಾಖೆ ಮತ್ತು ಇಂಡಿಯಾನಾ ರಾಜ್ಯ ಪೊಲೀಸ್ ಪ್ರಯೋಗಾಲಯವು ಕೊಲೆ ಸಂತ್ರಸ್ತರು ಹಾಗೂ ಅವರಕುಟುಂಬಗಳಿಗೆ ಹೊಂದಿರುವ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದು ಅಲ್ಲಿನ ರಾಜ್ಯ ಪೊಲೀಸರು ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸಾಮಾನ್ಯವವಾಗಿ ಯಾರಾದರೂ ಪ್ರೀತಿಪಾತ್ರರು ಸಾವನ್ನಪ್ಪಿದಾಗ ಅವರು ಹೇಗೆ ಸಾವಿಗೀಡಾದರು ಎಂಬುದರ ಅರಿವಿಲ್ಲದಿದ್ದರೆ, ಅವರ ಕುಟುಂಬದವರಿಗೆ ತಮ್ಮ ಉಸಿರಿರುವವರೆಗೆ ಇದೊಂದು ದೊಡ್ಡ ಪ್ರಶ್ನೆಯಾಗಿ ಕಾಡುತ್ತಿರುತ್ತದೆ. ಆದರೆ ಪೊಲೀಸರ ಈ ಕಾರ್ಯಗಳು ತಮ್ಮ ಪ್ರೀತಿಪಾತ್ರರ ಸಾವಿನ ಬಗ್ಗೆ ದುಃಖಿತ ಕುಟುಂಬಗಳು ದಶಕಗಳಿಂದ ಹೊಂದಿರುವ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ