
ಆಳ ಸಮುದ್ರ ಸದಾ ಹೊಸ ಕೌತುಕ ಹಾಗೂ ಆಗಾಧವಾದ ಜೀವ ವೈವಿಧ್ಯವನ್ನು ಹೊಂದಿರುವ ಅದ್ಭುತ ಲೋಕ. ಈ ಲೋಕವನ್ನು ಗೋ ಪ್ರೋ ಕ್ಯಾಮರಾವೊಂದು ಸೆರೆ ಹಿಡಿದಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಡೈವರ್ ಒಬ್ಬರು ತಮ್ಮ ಗೋ ಪ್ರೋ ಕ್ಯಾಮರಾವನ್ನು ಆಳ ಸಮುದ್ರದಲ್ಲಿಟ್ಟು ಹಲವು ಅದ್ಭುತ ದೃಶ್ಯಗಳನ್ನು ಸೆರೆ ಹಿಡಿದಿದ್ದು, ಇದೀಗ ವೈರಲ್ ಆಗುತ್ತಿದೆ.
ನೀರೊಳಗಿನ ಪ್ರಪಂಚ ನಿಜಕ್ಕೂ ವಿಶಿಷ್ಟ ಮತ್ತು ಆಕರ್ಷಕವಾಗಿದ್ದು, ಸಮುದ್ರದ ಮೇಲ್ಮೈ ಕೆಳಗೆ ಏನಿದೆ ಎಂಬುದರ ಬಗ್ಗೆ ಸದಾ ಕುತೂಹಲವನ್ನು ಹೊಂದಿದೆ. ಅನೇಕ ಡೈವರ್‌ಗಳು ಈ ರಹಸ್ಯ ಜಗತ್ತನ್ನು ನೇರವಾಗಿ ಅನುಭವಿಸಿದ್ದಾರೆ. ಹಾಗೆಯೇ ಇದೊಂದು ಸುಂದರ ಹಾಗೂ ವಾಸ್ತವಕ್ಕೆ ನಿಲುಕುದ ಲೋಕ ಎಂದು ವಿವರಿಸುತ್ತಾರೆ. ಅದೇ ರೀತಿ ಇಲ್ಲೊಬ್ಬರು ಸಮುದ್ರದಾಳದ ಅದ್ಭುತ ಲೋಕವನ್ನು ಸೆರೆ ಹಿಡಿದಿದ್ದು, ಅದೀಗ ವೈರಲ್ ಆಗಿದೆ. ನೀರೊಳಗಿನಿಂದ ಕಾಣುವ ಸೂರ್ಯೋದಯವೂ ಸೇರಿದಂತೆ ಹಲವು ಅಪರೂಪದ ಜಲಚರಗಳ ಅದ್ಭುತ ಲೋಕ ಗೋ ಪ್ರೋ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಗರದಾಳದ ಅದ್ಭುತ ಲೋಕವನ್ನು ಈ ವೀಡಿಯೋ ಜನರಿಗೆ ತೋರಿಸುತ್ತಿದೆ.
GoPro ಕ್ಯಾಮರಾ ಕದ್ದು ಮೇಲೆ ಹಾರಿದ ಹಕ್ಕಿ... ವಿಹಂಗಮ ದೃಶ್ಯ ಸೆರೆ
divedivelive ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. 'ನಾವು ನಮ್ಮ ಲೈವ್‌ಸ್ಟ್ರೀಮ್‌ಗಳನ್ನು ಮಾಡುವ ವೇಳೆ ನಮ್ಮ GoPro ಅನ್ನು ಸಮುದ್ರದ ತಳದಲ್ಲಿ ಯಾರೂ ಗಮನಿಸದಂತೆ ಬಿಟ್ಟೆವು, ಈಗ ನಿಮಗೆಲ್ಲರಿಗೂ ಏನು ಕಾಣಿಸುತ್ತಿದೆ' ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವೀಡಿಯೋವನ್ನು ವಿವಿಧ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪೋಸ್ಟ್ ಮಾಡಲಾಗಿದೆ.
ನೀರೋಳಗಿನ ಅದ್ಬುತ ಸೂರ್ಯಾಸ್ತ
ವೀಡಿಯೊದಲ್ಲಿ, ಒಬ್ಬ ಡೈವರ್ ಗೋ ಪ್ರೋ( GoPro) ಕ್ಯಾಮರಾವನ್ನು ಬಹಳ ಎಚ್ಚರಿಕೆಯಿಂದ ಒಂದು ಕೋನದಲ್ಲಿ ಇರಿಸಿ ಹೊರಟು ಹೋಗುವುದನ್ನು ಕಾಣಬಹುದು ಅಲ್ಲದೇ ಅವರು ವೀಡಿಯೋದ ಮೇಲೆ . "ನಮ್ಮ GoPro ಗೆ ವಿದಾಯ ಹೇಳುವುದರಿಂದ ಅದು, ನಾವು ಮನುಷ್ಯರು ಇಲ್ಲದ ಸೂರ್ಯಾಸ್ತವನ್ನು ಸೆರೆ ಹಿಡಿಯಬಹುದು ಸಂಜೆ. 30 ಅಡಿ ಆಳದ ನೀರಿನ ಅಡಿಯಲ್ಲಿ. ಮೌಯಿ, ಹವಾಯಿ. ಎಂದು ಅವರು ಬರೆದಿದ್ದಾರೆ.
ಅಂದರೆ ಇದು ಹವಾಯಿಯ ಸಮುದ್ರದಾಳದಲ್ಲಿ ತೆಗೆದ ವೀಡಿಯೋ ಆಗಿದೆ.
ಹಲವು ಅದ್ಭುತ ದೃಶ್ಯಗಳ ಸೆರೆ ಹಿಡಿದ ಗೋ ಪ್ರೋ
ಈ ಸಮುದ್ರದಾಳದಲ್ಲಿ ಇಟ್ಟ ಗೋ ಪ್ರೊ ಹಲವು ಅದ್ಭುತ ದೃಶ್ಯಗಳನ್ನು ಸೆರೆ ಹಿಡಿದಿದೆ. ವೀಡಿಯೋದಲ್ಲಿ ಹಾದು ಹೋದ ಜಲಚರಗಳ ಬಗ್ಗೆಯೂ ಸಬ್ ಟೈಟಲ್‌ಗಳ ಮೂಲಕ ಅವರು ವಿವರಿಸಿದ್ದಾರೆ. ಈ ದೃಶ್ಯವು ಶಾರ್ಕ್‌ಗಳು, ತಿಮಿಂಗಿಲಗಳು ಮತ್ತು ಸಮುದ್ರ ಆಮೆಗಳು ಸೇರಿದಂತೆ ಸಮುದ್ರ ಜೀವಿಗಳನ್ನು ತೋರಿಸಿದೆ.
ಆಳ ಸಮುದ್ರದಲ್ಲಿ ಮೀನುಗಾರರ ಬಲೆಗೆ ಸಿಕ್ಕ ವಿಚಿತ್ರ ಜೀವಿ, ಇದು ಏಲಿಯನ್ ಇರಬಹುದೇ?
ಹೀಗೆ ಅವರು ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಾವಳಿಗಳನ್ನು ವಿವರಿಸಿದ್ದಾರೆ.
ವೀಡಿಯೋದಲ್ಲಿ ವಿವಿಧ ಜಲಚರಗಳು, ಸಮುದ್ರ ಸಸ್ಯಗಳು ಮತ್ತು ಆಳವಾದ ಸಾಗರದ ಉಸಿರುಕಟ್ಟುವ ಸೌಂದರ್ಯ, ವಿಶೇಷವಾಗಿ ನೀರೊಳಗಿನ ಸೂರ್ಯಾಸ್ತವು ವೀಕ್ಷಕರನ್ನು ಆಕರ್ಷಿಸಿದ್ದು, ವೀಡಿಯೊ ವೈರಲ್ ಆಗುವಂತೆ ಮಾಡಿದೆ. ಈ ವೀಡಿಯೋ ನೋಡಿದ ಬಳಕೆದಾರರು ಹಲವು ಕಾಮೆಂಟ್ ಮಾಡಿದ್ದಾರೆ. ಇದು ಸಂಪೂರ್ಣವಾಗಿ ಉಸಿರುಕಟ್ಟುವ ಮತ್ತು ಸುಂದರ ದೃಶ್ಯ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು 'ಪ್ರಕೃತಿ ಮನುಷ್ಯನಿಲ್ಲದಿದ್ದರೆ ಸ್ವರ್ಗ" ಎಂದು ಹೇಳಿದ್ದಾರೆ. ಮೂರನೇಯವರು ಇದು"ನಾನು ನೋಡಿದ ಅತ್ಯುತ್ತಮ ಅಕ್ವೇರಿಯಂ ಎಂದು ಹೇಳಿದ್ದಾರೆ.
ಆ ಅದ್ಬುತ ವೀಡಿಯೋ ಇಲ್ಲಿದೆ ನೋಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ