ಅಮೆರಿಕ ಇರಾನ್ ಕದನ ವಿರಾಮ ಗೊಂದಲ, ಬೆನ್ನು ತಟ್ಟಿ ಟ್ವೀಟ್ ಮಾಡಿ ಕೆಟ್ಟಿತಾ ಪಾಕಿಸ್ತಾನ?

Published : Apr 09, 2026, 06:03 PM IST
Pakistan

ಸಾರಾಂಶ

ಅಮೆರಿಕ ಇರಾನ್ ಕದನ ವಿರಾಮ ಗೊಂದಲ, ಬೆನ್ನು ತಟ್ಟಿ ಟ್ವೀಟ್ ಮಾಡಿ ಕೆಟ್ಟಿತಾ ಪಾಕಿಸ್ತಾನ?, ನಾವೇ ಯೆಸ್, ನಾವೇ ಮಧ್ಯಸ್ಥಿಕೆ ವಹಿಸಿ ಕದನ ವಿರಾಮ ಮಾಡಿದ್ದೇವೆ ಎಂದು ಕೊಚ್ಚಿಕೊಂಡ ಪಾಕಿಸ್ತಾನ ಸಂಕಷ್ಟಕ್ಕೆ ಸಿಲುಕಿದೆ.

ಟೆಹ್ರಾನ್ (ಏ.09) ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧ ತೀವ್ರಗೊಳ್ಳುತ್ತಿದ್ದಂತೆ ಕದನ ವಿರಾಮ ಘೋಷಣೆ ಅಚ್ಚರಿ ಜೊತೆಗೆ ನೆಮ್ಮದಿಗೆ ಕಾರಣವಾಗಿತ್ತು. ಇತ್ತ ಪಾಕಿಸ್ತಾನ ಪ್ರಧಾನಿ ಶೆಹಬಾಝ್ ಷರೀಫ್ ಮಧ್ಯಸ್ಥಿಕೆ ವಹಿಸಿ ಕದನ ವಿರಾಮದ ಕುರಿತು ಟ್ವೀಟ್ ಮಾಡಿದ್ದರು. ಭಾರತದಲ್ಲಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಪ್ರಧಾನಿ ಮೋದಿ ಸರ್ಕಾರವನ್ನು ಪ್ರಶ್ನಿಸಿತ್ತು. ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಿ ಯುದ್ಧ ನಿಲ್ಲಿಸುತ್ತಿದೆ, ವಿಶ್ವ ಗುರು ಏನು ಮಾಡುತ್ತಿದೆ ಎಂದು ಪ್ರಶ್ನಿಸಿತ್ತು. ಆದರೆ ಕದನ ವಿರಾಮ ಒಂದೇ ದಿನಕ್ಕೆ ಉಲ್ಲಂಘನೆಯಾಗಿತ್ತು. ಪಾಕಿಸ್ತಾನ ಹೇಳಿದ್ದು ಒಂದಾದರೆ ಅಮೆರಿಕ ಹಾಗೂ ಇಸ್ರೇಲ್ ಹೇಳುತ್ತಿರುವುದು ಮತ್ತೊಂದು. ಇಷ್ಟೇ ಅಲ್ಲ ಲಬೆನಾನ್ ಮೇಲೆ ಮಿಸೈಲ್ ಮಳೆ ಸುರಿಸಿ ನೀರಿನಲ್ಲಿ ಹೋಮ ಮಾಡಿದಂತೆ ಮಾಡಿತ್ತು.

ಪಾಕ್ ಪ್ರಧಾನಿಯ ಟ್ವೀಟ್ ಹಾಗೂ ಗೊಂದಲ

ಪಾಕಿಸ್ತಾನ ಪ್ರಧಾನಿ ಷರೀಫ್ ತಮ್ಮ ಟ್ವೀಟ್‌ನಲ್ಲಿ ಕದನ ವಿರಾಮ ಲೆಬೆನಾನ್ ಸೇರಿದಂತೆ ಎಲ್ಲೆಡೆ ಅನ್ವಯಿಸುತ್ತದೆ ಎಂದಿದ್ದರು. ಆದರೆ ಮರು ಕ್ಷಣದಲ್ಲಿ ಇಸ್ರೇಲ್ ಕದನ ವಿರಾಮ ಲೆಬೆನಾನ್‌ಗೆ ಅನ್ವಯಿಸಲ್ಲ ಎಂದಿತ್ತು. ಇಷ್ಟೇ ಅಲ್ಲ ಲೆಬೆನಾನ್‌ನಲ್ಲಿರುವ ಹೆಜ್‌ಬೂಲ್ಲಾ ಕಮಾಂಡರ್ ಸೆಂಟರ್ ಮೇಲೆ 100ಕ್ಕೂ ಹೆಚ್ಚು ದಾಳಿ ಮಾಡಿತ್ತು. ಇದೀಗ ಪಾಕಿಸ್ತಾನದ ಮಧ್ಯಸ್ಥಿತಿಕೆ ಮೇಲೆ ಅನುಮಾನಗಳು ಮೂಡಿದೆ. ಮೂರು ದೇಶಕ್ಕೆ ಮೂರು ಒಪ್ಪಂದ ರೆಡಿ ಮಾಡಿ ಮಧ್ಯಸ್ಥಿಕೆ ವಹಿಸಿತ್ತಾ? ಅನ್ನೋ ಅನುಮಾನ ಮೂಡಿದೆ.

ಅಮೆರಿಕ ಹಾಗೂ ಇಸ್ರೇಲ್ ಷರತ್ತನ್ನು ಇರಾನ್ ಒಪ್ಪಿಕೊಳ್ಳಲು ಸಿದ್ಧವಿಲ್ಲ ಎಂದು ಖಡಕ್ ಆಗಿ ಹೇಳಿತ್ತು. ಇತ್ತ ಇರಾನ್ ಷರತ್ತನ್ನು ಅಮರಿಕ ಹಾಗೂ ಇಸ್ರೇಲ್ ಒಪ್ಪಲ್ಲ ಎಂದಿತ್ತು. ಇದರ ನಡುವೆ ಪಾಕಿಸ್ತಾನ ಮೂರು ದೇಶಗಳಿಗೆ ಮೂರು ಬೇರೆ ಬೇರೆ ಪ್ರಸ್ತಾವನೆ ಸಲ್ಲಿಸಿ ಮಧ್ಯಸ್ಥಿಕೆ ಮಾಡಿತಾ ಅನ್ನೋ ಗೊಂದಲಕ್ಕೆ ಪುಷ್ಠಿ ನೀಡಿದೆ. ಕಾರಣ ಇರಾನ್ ಬಳಿಕ ಲೆಬೆನಾನ್ ಸೇರಿದಂತೆ ಎಲ್ಲಾ ಕಡೆ ಕದನ ವಿರಾಮ ಎಂಬ ಮಾತು ಹೇಳಿದ ಪಾಕಿಸ್ತಾನ ಅಮೆರಿಕ ಹಾಗೂ ಇಸ್ರೇಲ್ ಬಳಿಕ ಇರಾನ್ ಮೇಲಿನ ದಾಳಿಗೆ ಮಾತ್ರ ಕದನ ವಿರಾಮ ಎಂಬ ಮಾತು ಹೇಳಿದೆ. ಲೆಬೆನಾನ್ ಮೇಲಿನ ದಾಳಿ ಬಳಿಕ ಅಮರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನೀಡಿದ ಹೇಳಿಕೆ ಇದನ್ನು ಪುಷ್ಠೀಕರಿಸುತ್ತಿದೆ. ನಾವು ಲೆಬೆನಾನ್ ಬಗ್ಗೆ ಯಾವುದೇ ಭರವಸೆ ನೀಡಿಲ್ಲ. ಇಲ್ಲಿ ತಪ್ಪು ತಿಳುವಳಿಕೆಯಾಗಿದೆ ಎಂದು ವ್ಯಾನ್ಸ್ ಹೇಳಿದ್ದಾರೆ.

ಕದನ ವಿರಾಮದ ಬಳಿಕ ಲೆಬೆನಾನ್ ಮೇಲೆ ಇಸ್ರೇಲ್ ದಾಳಿ ನಡೆಸಿದ 250ಕ್ಕೂ ಹೆಚ್ಚು ಮಂದಿ ಹತ್ಯೆಯಾಗಿದ್ದಾರೆ. 100ಕ್ಕೂ ಹೆಚ್ಚು ಕಡೆ ದಾಳಿಯಾಗಿದೆ. ಇತ್ತ ಹೊರ್ಮುಜ್ ಜಲಸಂಧಿ ಮುಚ್ಚುತ್ತೇವೆ ಎಂದು ಇರಾನ್ ಎಚ್ಚರಿಕೆ ನೀಡಿತ್ತು. ಇತ್ತ ಹಡಗುಗಳಿಗೆ ಹೊರ್ಮುಜ್ ಜಲಸಂಧಿ ದಾಟದಂತೆ ಇರಾನ್ ನೌಕಾ ಪಡೆ ಸೂಚಿಸಿತ್ತು. ಮಧ್ಯಸ್ಥಿತಿಕೆ ಬಗ್ಗೆ ತಮ್ಮ ಬೆನ್ನು ತಾವೇ ತಟ್ಟಿದ್ದ ಪಾಕಿಸ್ತಾನಕ್ಕೆ ತೀವ್ರ ಮುಜುಗರವಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತ ಅಲ್ಲ, ಇದು ನೇಪಾಳ, ರಸ್ತೆಯಲ್ಲಿ ಉಗುಳಿದ ಭಾರತೀಯನಿಗೆ ನೇಪಾಳಿಗನ ಕ್ಲಾಸ್
58ರ ಮಹಿಳೆ ಸೀನಿದಾಗ ಮೂಗಿನಿಂದ ಹೊರಬಿತ್ತು 1 ಇಂಚಿನ ಜೀವಂತ ಹುಳು! ಚಿಕಿತ್ಸೆಗೆ ಹೋದರೆ ವೈದ್ಯರೇ ಶಾಕ್!