ಪತ್ನಿ ಡಿಯೋರ್ ಬ್ಯಾಗ್ ಗಿಫ್ಟ್ ಸ್ವೀಕರಿಸಿದ್ದಕ್ಕೆ ದಕ್ಷಿಣ ಕೊರಿಯಾ ಅಧ್ಯಕ್ಷರ ಗಾದಿಯೇ ಅಲ್ಲಾಡುತ್ತಿದೆ; ಏನೀ ಬ್ಯಾಗ್‌ ವಿಶೇಷತೆ?

By Suvarna News  |  First Published Jan 25, 2024, 11:52 AM IST

ಪತ್ನಿ ಡಿಯೋರ್ ಬ್ಯಾಗ್ ಗಿಫ್ಟ್ ಸ್ವೀಕರಿಸಿದ್ದಕ್ಕೆ ದಕ್ಷಿಣ ಕೊರಿಯಾ ಅಧ್ಯಕ್ಷರ ಗಾದಿಯೇ ಅಲ್ಲಾಡುತ್ತಿದೆ; ಏನೀ ಬ್ಯಾಗ್‌ ವಿಶೇಷತೆ?


ಸಿಯೋಲ್: ದಕ್ಷಿಣ ಕೊರಿಯಾದ ಪ್ರಥಮ ಮಹಿಳೆ ಕಿಮ್ ಕಿಯೋನ್ ಹೀ ಕಾಸ್ಟ್ಲಿ ಡಿಯೋರ್ ಬ್ಯಾಗ್ ಅನ್ನು ಉಡುಗೊರೆಯಾಗಿ ಸ್ವೀಕರಿಸುತ್ತಿರುವುದನ್ನು ತೋರಿಸುವ ಹಿಡನ್ ಕ್ಯಾಮೆರಾ ದೃಶ್ಯಗಳು ಅಧ್ಯಕ್ಷ ಯೂನ್ ಸುಕ್ ಯೋಲ್ ಮತ್ತು ಅವರ ಪಕ್ಷವನ್ನು ವಿವಾದದಲ್ಲಿ ಮುಳುಗಿಸಿದೆ. ಇದು ದಕ್ಷಿಣ ಕೊರಿಯಾದಲ್ಲಿ ಏಪ್ರಿಲ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಆಡಳಿತ ಪಕ್ಷವನ್ನು ಮುಳುಗಿಸುವ ಸಾಧ್ಯತೆ ಇದೆ.

ಸರ್ಕಾರಿ ಅಧಿಕಾರಿಯೊಬ್ಬರ ಸಂಗಾತಿಯಾಗಿ  ಕಿಮ್ ಕಿಯೋನ್ ಹೀ 3 ಮಿಲಿಯನ್ ವಾನ್ ($2,250) ಬೆಲೆಯ ಪರ್ಸ್ ಅನ್ನು ಸ್ವೀಕರಿಸುತ್ತಿರುವ ದೃಶ್ಯ ಹಿಡನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದು ಲಂಚ ವಿರೋಧಿ ಕಾನೂನಿನ ಉಲ್ಲಂಘನೆಯಾಗಿದೆ. ಇದೀಗ ಡಿಯೋರ್ ಬ್ಯಾಗ್ ಹಗರಣ ಎಂದು ದೊಡ್ಡ ಸದ್ದು ಮಾಡುತ್ತಿದೆ. ಅವರ  ಈ ನಡೆ ಪತಿಯ ಸ್ಥಾನ ಮತ್ತು ಪಕ್ಷದ ಸ್ಥಾನಕ್ಕೆ ಮುಳುವಾಗುವ ಸಾಧ್ಯತೆ ಹೆಚ್ಚಿದೆ.

Tap to resize

Latest Videos

ಯೂನ್ 2022 ರಲ್ಲಿ ನಿಕಟ ಚುನಾವಣೆಯನ್ನು ಗೆದ್ದರು. ಆದರೆ ಪ್ರತಿಸ್ಪರ್ಧಿ ಡೆಮಾಕ್ರಟಿಕ್ ಪಕ್ಷದಿಂದ ನಿಯಂತ್ರಿಸಲ್ಪಡುವ ಸಂಸತ್ತಿನಲ್ಲಿ ಅವರ ಕನ್ಸರ್ವೇಟಿವ್ ಪೀಪಲ್ ಪವರ್ ಪಾರ್ಟಿ  (PPP) ಅಲ್ಪಸಂಖ್ಯಾತವಾಗಿದೆ. ಇದೀಗ ಡಿಯೋರ್ ಬ್ಯಾಗ್ ಹಗರಣವು ಯೋಜಿತ ಸಂಚಾಗಿದೆ ಎಂದು ಆಡಳಿತ ಪಕ್ಷ ಆರೋಪಿಸಿದ್ದರೆ, ಘಟನೆ ಬಗ್ಗೆ ಯೂನ್ ಹಾಗೂ ಅವರ ಪತ್ನಿ ತಪ್ಪೊಪ್ಪಿಕೊಂಡು ಕ್ಷಮೆ ಯಾಚಿಸಬೇಕೆಂಬ ಕೂಗು ಎದ್ದಿದೆ.

ಅಬ್ಬಬ್ಬಾ..ಶೋಯೆಬ್‌ ಮಲಿಕ್‌ರಿಂದ ಸಾನಿಯಾ ಮಿರ್ಜಾಗೆ ಸಿಗೋ ಜೀವನಾಂಶ ಇಷ್ಟೊಂದ್ ಕೋಟಿನಾ?

ಡಿಯೋರ್ ಬ್ಯಾಗ್
ಏನಿದು ಒಂದು ಬ್ಯಾಗ್ ಅಧ್ಯಕ್ಷರ ಖುರ್ಚಿಯನ್ನೇ ಅಲುಗಾಡಿಸುತ್ತಾ ಎಂದು ಆಶ್ಚರ್ಯವಾಗಬಹುದು. ಆದರೆ, ಡಿಯೋರ್, ಅಧಿಕೃತವಾಗಿ ಕ್ರಿಶ್ಚಿಯನ್ ಡಿಯೋರ್ ಎಸ್‌ಇ ಎಂಬ ಹೆಸರಿನ ಇದು, ಉನ್ನತ-ಮಟ್ಟದ ಐಷಾರಾಮಿ ಫ್ಯಾಶನ್ ಬ್ರಾಂಡ್ ಆಗಿದ್ದು ಅದು ಅದರ ಸೊಗಸಾದ ಮತ್ತು ದುಬಾರಿ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಈಗ ದಕ್ಷಿಣ ಕೊರಿಯಾ ಅಧ್ಯಕ್ಷರ ಪತ್ನಿ ಸ್ವೀಕರಿಸಿದ ಬ್ಯಾಗ್‌ನ ಬೆಲೆ ಇಲ್ಲಿನ ಲೆಕ್ಕದಲ್ಲಿ 2 ಲಕ್ಷ ಬೆಲೆಯುಳ್ಳದ್ದಾಗಿದೆ.  

ಮೂರು ಪದಾರ್ಥಗಳಿಂದ ನೈಸರ್ಗಿಕ ಸೌಂದರ್ಯ! ಮಿಲ್ಕಿ ಬ್ಯೂಟಿ ತಮನ್ನಾ ಏನು ಹೇಳಿದ್ದಾರೆ ಕೇಳಿ

ಏಕೆ ಇಷ್ಟು ಕಾಸ್ಟ್ಲಿ?
ಡಿಯೋರ್ ತನ್ನ ನವೀನ ಮತ್ತು ಟ್ರೆಂಡ್-ಸೆಟ್ಟಿಂಗ್ ವಿನ್ಯಾಸಗಳಿಗೆ ಹೆಸರುವಾಸಿಯಾಗಿದೆ. ಬ್ರ್ಯಾಂಡ್ ಅನನ್ಯ ಮತ್ತು ಅತ್ಯಾಧುನಿಕ ಫ್ಯಾಷನ್ ಬ್ಯಾಗ್‌ಗಳನ್ನು ತಯಾರಿಸಲು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೆಚ್ಚು ಹೂಡಿಕೆ ಮಾಡುತ್ತದೆ, ಇದು ವೆಚ್ಚವನ್ನು ಹೆಚ್ಚಿಸಬಹುದು. ಅಲ್ಲದೆ ಒಂದೇ ವಿನ್ಯಾಸದ ಬ್ಯಾಗ್ ಲಿಮಿಟೆಡ್ ಎಡಿಶನ್‌ನಲ್ಲಿ ತಯಾರಿಸಲಾಗುತ್ತದೆ. ಇನ್ನು ಗುಣಮಟ್ಟ, ತಯಾರಿಸುವವರ ಕುಶಾಲತೆ ಎಲ್ಲವೂ ಸೇರಿ ಬ್ಯಾಗ್ ಬೆಲೆ ಹೆಚ್ಚಾಗಿದೆ. ಇದೆಲ್ಲದರ ಜೊತೆಗೆ ಡಿಯೋರ್ ಮಾರ್ಕೆಟಿಂಗ್‌ಗಾಗಿ ಬಹಳಷ್ಟನ್ನು ವ್ಯಯಿಸುತ್ತದೆ. ಸೆಲೆಬ್ರಿಟಿಗಳನ್ನು ಬಳಸಿ ಜಾಹೀರಾತು ತಯಾರಿಸಿ ತಮ್ಮದು ಲಕ್ಷುರಿ ಬ್ಯಾಗ್ ಎಂಬ ಬ್ರ್ಯಾಂಡ್ ಬೆಳೆಸುವುದರಲ್ಲಿ ಹೂಡಿಕೆ ಮಾಡುತ್ತದೆ. ಇನ್ನು ಡಿಯೋರ್ ಕಸ್ಟಮೈಸ್ಡ್ ಬ್ಯಾಗ್‌ಗಳನ್ನು ಕೂಡಾ ತಯಾರಿಸಿ ಕೊಡುತ್ತದೆ. ಸಾಮಾನ್ಯವಾಗಿ ಡಿಯೋರ್ ಬ್ಯಾಗ್ ಬೆಲೆ 1 ಲಕ್ಷದಿಂದ ಏಳೆಂಟು ಲಕ್ಷದವರೆಗೂ ಇರುತ್ತದೆ.

click me!