'ಕಮಲಾ ಬಗ್ಗೆ ಯಾರಿಗೂ ಗೊತ್ತಿಲ್ಲ.; ಬೈಡೆನ್‌ ಗೆದ್ದರೆ ಒಂದೇ ತಿಂಗಳಲ್ಲಿ ಕೆಳಗಿಳಿಸ್ತಾರೆ'

By Kannadaprabha NewsFirst Published Nov 4, 2020, 5:19 AM IST
Highlights

ಕಮಲಾಗೆ ಅಧ್ಯಕ್ಷೆ ಆಗುವ ಆಸೆ; ಹೀಗಾಗಿ ಬೈಡೆನ್‌ಗೆ ಮತ ಬೇಡ: ಟ್ರಂಪ್‌!| ಬೈಡೆನ್‌ರನ್ನು ಒಂದೇ ತಿಂಗಳಲ್ಲಿ ಕಮಲಾ ಇಳಿಸುತ್ತಾರೆ| ಕಮಲಾ ಬಗ್ಗೆ ಯಾರಿಗೂ ಗೊತ್ತಿಲ್ಲ.| ಕಮಲಾಗೆ ಮೂಲಭೂತವಾದಿಗಳೊಂದಿಗೆ ಸಂಬಂಧ ಇದೆ

ವಾಷಿಂಗ್ಟನ್(ನ.04): : ಡೆಮಾಕ್ರೆಟಿಕ್‌ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಆಯ್ಕೆಯಾದ ದಿನದಿಂದಲೂ ಕಮಲಾ ಹ್ಯಾರಿಸ್‌ ವಿರುದ್ಧ ಕಿಡಿ ಕಾರುತ್ತಾ ಬಂದಿರುವ ಅಮೆರಿಕ ಅಧ್ಯಕ್ಷ ಟ್ರಂಪ್‌, ಈಗ ಮತ್ತೆ ಕಮಲಾ ಮೇಲೆ ವಾಕ್ಸಮರ ಮಾಡಿದ್ದಾರೆ.

ಕಮಲಾಗೆ ಅಮೆರಿಕದ ಮೊದಲ ಮಹಿಳೆಯಾಗುವ ಆಸೆ. ಅದರೆ ಅದು ಸಾಧ್ಯವಿಲ್ಲ. ಬೈಡೆನ್‌ಗೆ ಮತ ಚಲಾಯಿಸದೇ ಇರಲು ಅದು ಒಂದು ಒಳ್ಳೆಯ ಕಾರಣ. ಒಂದು ವೇಳೆ ಬೈಡೆನ್‌ ಗೆದ್ದರೆ ಒಂದೇ ತಿಂಗಳಿನಲ್ಲಿ ಅವರನ್ನು ಇಳಿಸಿ ಕಮಲಾ ಅಧ್ಯಕ್ಷ ಪಟ್ಟಕ್ಕೇರಲಿದ್ದಾರೆ ಎಂದು ಟ್ರಂಪ್‌ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಈ ಕಮಲಾ ಬಗ್ಗೆ ಯಾರಿಗಾದರೂ ತಿಳಿದಿದೆಯಾ ಎಂದು ಪ್ರಶ್ನೆ ಮಾಡಿದ್ದಾರೆ.

ಫೆä್ಲೕರಿಡಾಡಲ್ಲಿ ನಡೆದ ರಾರ‍ಯಲಿಯಲ್ಲಿ, ಕಮಲಾಗೆ ಮೂಲಭೂತ ಎಡ ಪಕ್ಷಗಳೊಂದಿಗೆ ಸಂಬಂಧ ಇದೆ ಎಂದು ಆರೋಪಿಸಿದ್ದಾರೆ.

ಲೋವಾದಲ್ಲಿ ನಡೆದ ಮತ್ತೊಂದು ಪ್ರಚಾರ ಸಭೆಯಲ್ಲಿ, ಕಮಲಾ ಹೆಸರಿನ ಬಗ್ಗೆ ಟ್ರಂಪ್‌ ಕುಹಕವಾಡಿದ್ದಾರೆ. ಕಮಲ ಅವರು ತಮ್ಮ ಹೆಸರನ್ನು ಸರಿಯಾಗಿ ಉಚ್ಛರಿಸಬೇಕು ಎಂದು ಬಯಸಿದ್ದಾರೆ. ಹ್ಯಾರಿಸ್‌ ಎಂದರೆ ಏನು? ಕಮಲಾ ಎಂದು ಉಚ್ಛರಿಸುವಾಗ ಕೋಮಾ ಎಂದು ಹೇಳಿದಾಗೆ ಆಗುತ್ತದೆ ಎಂದು ತಮಾಷೆ ಮಾಡಿದ್ದಾರೆ.

click me!