ಜಮ್ಮು ಕಾಶ್ಮೀರ ಪಾಕ್‌ ಭಾಗ, ವಿವಾದಾತ್ಮಕ ನಕ್ಷೆ ಪೋಸ್ಟ್ ಮಾಡಿದ ಟ್ರಂಪ್ ಮಗ!

By Suvarna NewsFirst Published Nov 4, 2020, 5:09 AM IST
Highlights

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಮಂಗಳವಾರ ಮತದಾನ|  ಈ ಚುನಾವಣೆ ನಡುವೆಯೇ ಟ್ರಂಪ್ ಮಗ ಡೊನಾಲ್ಡ್ ಟ್ರಂಪ್ ಜೂನಿಯರ್ ವಿವಾದಾತ್ಮಕ ನಕ್ಷೆ| ಜಮ್ಮು ಕಾಶ್ಮೀರ ಪಾಕ್ ಭಾಗವಾಗಿ ಗುರುತಿಸಿದ ಜೂನಿಯರ್ ಟ್ರಂಪ್

ವಾಷಿಂಗ್ಟನ್(ನ.04): ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಮಂಗಳವಾರ ಮತದಾನ ನಡೆಯುತ್ತಿದೆ. ಹೀಗಿರುವಾಗ ಅಭ್ಯರ್ಥಿಗಳಾದ ಟ್ರಂಪ್ ಹಾಗೂ ಬೈಡೆನ್ ನಡುವೆಡ ತೀವ್ರ ಪೈಪೋಟಿ ಏರ್ಪಟ್ಟಿದೆ. ಆದರೀಗ ಈ ಚುನಾವಣೆ ನಡುವೆಯೇ ಟ್ರಂಪ್ ಮಗ ಡೊನಾಲ್ಡ್ ಟ್ರಂಪ್ ಜೂನಿಯರ್ ವಿವಾದಾತ್ಮಕ ನಕ್ಷೆಯೊಂದನ್ನು ಟ್ವೀಟ್ ಮಾಡಿದ್ದಾರೆ. 

ಈ ವಿವಾದಾತ್ಮಕ ನಕ್ಷೆಯಲ್ಲಿ ಜಮ್ಮು ಕಾಶ್ಮೀರವನ್ನು ಪಾಕಿಸ್ತಾನದ ಭಾಗವಾಗಿ ತೋರಿಸಲಾಗಿದೆ. ಇಷ್ಟೇ ಅಲ್ಲದೇ ಈಶಾನ್ಯ ಭಾಗವನ್ನೂ ಭಾರತದಿಂದ ಬೇರ್ಪಡಿಸಲಾಗಿದೆ. ಈ ಮೂಲಕ ಯಾವ ದೇಶ ಜೂನಿಯರ್ ಟ್ರಂಪ್ ಯಾವ ದೇಶ ತನ್ನ ತಂದೆ ಬೆಂಬಲಕ್ಕಿದೆ ಹಾಗೂ ಯಾವ ದೇಶ ಜೋ ಬೈಡೆನ್ ಬೆಂಬಲಿಸುತ್ತಿದೆ ಎಂಬ ಭವಿಷ್ಯ ನುಡಿದಿದ್ದಾರೆ.

Okay, finally got around to making my electoral map prediction. pic.twitter.com/STmDSuQTMb

— Donald Trump Jr. (@DonaldJTrumpJr)

ಜೂನಿಯರ್ ಟ್ರಂಪ್ ಈ ಮ್ಯಾಪ್ ಮೂಲಕ ಭಾರತ, ಚೀನಾ, ಮೆಕ್ಸಿಕೋ ಮೊದಲಾದ ದೇಶ ಜೋ ಬೈಡೆನ್ ಬೆಂಬಲಿಸುತ್ತಿದೆ ಎಂದಿದ್ದಾರೆ. ಹಹೀಗಿರುವಾಗಲೇ ವಿಶ್ವದ ಅನೇಕ ರಾಷ್ಟ್ರಗಳನ್ನು ಟ್ರಂಪ್ ಸಮರ್ಥಕರೆಂದಿದ್ದಾರೆ. ಅವರು ಇಡೀ ವಿಶ್ವದ ನಕ್ಷೆಯನ್ನು ಎರಡು ಬಣ್ಣಗಳಲ್ಲಿ ವಿಂಗಡಿಸಿದ್ದಾರೆ. ಮೊದಲನೆಯದ್ದು ಕೆಂಪು ಬಣ್ಣ ಹಾಗೂ ಎರಡನೆಯದ್ದು ನೀಲಿ. ಅಮೆರಿಕದ ಚುನಾವಣೆಯಲ್ಲಿ ರಿಪಬ್ಲಿಕನ್ ಪಾರ್ಟಿ ಕೆಂಪು ಹಾಗೂ ಡೆಮಾಕ್ರಟಿಕ್ ನೀಲಿ ಬಣ್ಣವಾಗಿ ಪರಿಗಣಿಸಲಾಗುತ್ತದೆ. ಈ ನಕ್ಷೆ ಶೇರ್ ಮಾಡಿರುವ ಟ್ರಂಪ್ ಮಗ 'ಸರಿ, ನಕ್ಷೆ ಮೂಲಕ ನಾನು ಮಾಡಿರುವ ಚುನಾವಣಾ ಭವಿಷ್ಯ' ಎಂದಿದ್ದಾರೆ. ಜೊತೆಗೆ #2020Election #VOTE ಈ ಎರಡು ಹ್ಯಾಷ್ ಟ್ಯಾಗ್‌ಗಳನ್ನೂ ಬಳಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟೀಕೆ

ಸದ್ಯ ಅವರ ಈ ಪೋಸ್ಟ್‌ಗೆ ಭಾರೀ ಟೀಕೆ ವ್ಯಕ್ತವಾಗಿದೆ. ಅನೇಕ ಮಂದಿ ಗಣ್ಯರು ಅವರ ಈ ನಡೆಯನ್ನು ವಿರೋಧಿಸಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ತರೂರ್ ಈ ವಿಚಾರವಾಗಿ ಮೋದಿ ಮೇಲೆ ಪರೋಕ್ಷ ದಾಳಿ ನಡೆಸಿದ್ದಾರೆ.  

click me!