
Viral News: ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದಾಗ ಆದಾಯದ ಮೂಲಗಳೆಲ್ಲಾ ಬಂದ್ ಆಗಿರುತ್ತವೆ. ಹೇಗಾದ್ರೂ ಒಂದಿಷ್ಟು ಹಣ ಬಂದ್ರೆ ಸಾಕು ಅಂತ ಕಷ್ಟಪಡುತ್ತಿರುವ ಸಂದರ್ಭದಲ್ಲಿ ನಿಮಗೆ ಖಜಾನೆ ಸಿಕ್ಕರೆ ಎಷ್ಟು ಆನಂದವಾಗಬಹದು ಅಲ್ಲವಾ? ಇಂತಹುವುದೇ ಒಂದು ಘಟನೆಯೊಂದು ನಡೆದಿದೆ. ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದ ದಂಪತಿಗೆ 1970ರ ದಶಕದ ನಿಧಿಯೊಂದು ಸಿಕ್ಕಿದೆ. ಈ ನಿಧಿಯನ್ನು ಸದ್ಯದ ಹಣಕ್ಕೆ ವಿನಿಮಯ ಮಾಡಿಕೊಂಡ ನಂತರ ದಂಪತಿಯ ಆರ್ಥಿಕ ಹೊರೆಗಳೆಲ್ಲಾ ಕಡಿಮೆಯಾಗಿವೆ. ಈ ಸಂಬಂಧದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ನಡೆದಿದ್ದು ಎಲ್ಲಿ ಎಂಬುದನ್ನು ನೋಡೋಣ ಬನ್ನಿ.
Newsweek ವರದಿಗಳ ಪ್ರಕಾರ, ಸುಮಾರು 1900ಕ್ಕಿಂತಲೂ ಮುಂಚೆ ನಿರ್ಮಾಣವಾದ ಹಳೆಯ ಮನೆಯಲ್ಲಿ ಬ್ರಿಟನ್ ಮೂಲದ ವಾಲಿ ಲುಯಿಸಾ ಮತ್ತು ಪತಿ ಡೇನ್ ದಂಪತಿ ವಾಸವಾಗಿದ್ದರು. ದೀರ್ಘ ಸಮಯದಿಂದ ಈ ಮನೆಯ ಮೆಟ್ಟಿಲುಗಳ ಕೆಳಗೆ ಜಾಗವೊಂದನ್ನು ಬಳಕೆ ಮಾಡಿರಲಿಲ್ಲ. ಈ ಜಾಗದ ಬಗ್ಗೆ ದಂಪತಿ ಕುತೂಹಲ ಹೊಂದಿದ್ದರು. ಆದರೆ ಭಯ ಸೇರಿದಂತೆ ಕಾರಣಾಂತರಗಳಿಂದ ದಂಪತಿ, ಮೆಟ್ಟಿಲಿನ ಕೆಳ ಭಾಗದ ಸ್ಥಳ ಓಪನ್ ಮಾಡಿರಲಿಲ್ಲ.
ಇತ್ತೀಚೆಗೆ ಈ ಭಾಗದಲ್ಲಿ ಭಾಗಿಲು ತೆಗೆದು ನೋಡಿದಾಗ ದಂಪತಿಗೆ ಒಳಗೆ ಕಲ್ಲಿದ್ದಿಲು ನಡುವೆ ಇರಿಸಲಾದ ಬಣ್ಣದ ಡಬ್ಬದೊಂದು ಪತ್ತೆಯಾಗಿದೆ. ಹಳೆಯ ತುಕ್ಕು ಹಿಡಿದ ಮತ್ತು ಅಮೋನಿಯಾ ವಾಸನೆ ಬರುತ್ತಿದ್ದ ಡಬ್ಬವನ್ನು ಹೊರಗೆ ತೆಗೆದುಕೊಂಡು ಬಂದಿದ್ದಾರೆ. ಡಬ್ಬದ ಮೇಲೆ ಹಲವು ಕೀಟಗಳು ಮನೆ ಮಾಡಿಕೊಂಡಿದ್ದವು. ಆದ್ರೆ ದಂಪತಿ ಮಾತ್ರ ಸುಮಾರು ತಿಂಗಳುಗಳ ಕಾಲ ಈ ಡಬ್ಬವನ್ನೇ ಓಪನ್ ಮಾಡಲು ಧೈರ್ಯ ಮಾಡಿರಲಿಲ್ಲ.
ಹಲವು ದಿನಗಳ ಬಳಿಕ ದಂಪತಿ ಮೊಬೈಲ್ ಕ್ಯಾಮೆರಾ ಆನ್ ಮಾಡ್ಕೊಂಡು ಪೇಂಟ್ ಡಬ್ಬ ಓಪನ್ ಮಾಡಲು ಮುಂದಾಗಿದ್ದಾರೆ. ದಂಪತಿ ಡಬ್ಬ ತೆರೆಯುವ ಎಲ್ಲಾ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ಡಬ್ಬದಲ್ಲಿ 1970ರ ಕಾಲಘಟ್ಟದ ಬ್ರಿಟಿಷ್ ಕರೆನ್ಸಿ ಪತ್ತೆಯಾಗಿದೆ. ಈ ಕರೆನ್ಸಿಯ ಒಟ್ಟು ಮೌಲ್ಯ 1,000 ಪೌಂಡ್ ಅಂದ್ರೆ 1.27 ಲಕ್ಷ ರೂಪಾಯಿಗೂ ಅಧಿಕ ಆಗಿತ್ತು. ಆರ್ಥಿಕ ಸಂಕಷ್ಟದಲ್ಲಿದ್ದ ವಾಲಿ ಲುಯಿಸಾ ಮತ್ತು ಡೇನ್‌ಗೆ ಇಷ್ಟೊಂದು ಹಣ ಸಿಗುತ್ತೆ ಅಂತಾ ಕನಸಿನಲ್ಲಿಯೂ ಊಹೆ ಮಾಡಿರಲಿಲ್ಲ.
ಇದನ್ನೂ ಓದಿ: IT ಕೆಲಸಕ್ಕೆ 'ಗುಡ್ ಬೈ', ರೈಸ್ ಬಿಸಿನೆಸ್‌ಗೆ 'ಹೈ': ಈಗ ಕೋಟಿ ಕೋಟಿ ವಹಿವಾಟು, ವರ್ಷಕ್ಕೆ 25 ಲಕ್ಷ ಗಳಿಸುತ್ತಿರುವ ಯುವಕ!
ಈ ಬಗ್ಗೆ ಮಾತನಾಡಿರುವ ಲುಯಿಸಾ, ನಿಧಿ ಸಿಕ್ಕಾಗ ನನ್ನ ಕೆಲಸ ಹೋಗಿತ್ತು ಮತ್ತು ಕಷ್ಟದ ದಿನಗಳನ್ನು ಎದುರಿಸುತ್ತಿದ್ದೆ. ಆಕಸ್ಮಿಕವಾಗಿ ಸಿಕ್ಕ ಈ ಹಣ ನಮ್ಮೆಲ್ಲಾ ಸಮಸ್ಯೆಗಳನ್ನು ಪರಿಹರಿಸಲಿದೆ ಎಂದು ನಂಬಿದ್ದೇನೆ. ಈ ಹಣದಿಂದ ನಮ್ಮ ಸಾಲಗಳನ್ನು ಮುಗಿಯಲಿವೆ. ಮಕ್ಕಳ ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡಬಹುದು ಎಂದು ಹೇಳಿಕೊಂಡಿದ್ದಾರೆ.
ಟಿಕ್‌ಟಾಕ್‌ನಲ್ಲಿ ಈ ವಿಡಿಯೋಗೆ 2 ಲಕ್ಷಕ್ಕೂ ಅಧಿಕ ವ್ಯೂವ್ ಬಂದಿದ್ದು, ನೋಡುಗರು ದಂಪತಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ಈ ಹಣವನ್ನು ಸಮೀಪದ ಬ್ಯಾಂಕ್‌ಗಳಿಗೆ ತೆರಳಿ ಇಂದಿನ ಮೊತ್ತಕ್ಕೆ ವಿನಿಮಯ ಮಾಡಿಕೊಳ್ಳಬಹುದು ಎಂದಿದ್ದಾರೆ. ಆದ್ರೆ ಕೆಲವರು, ಹಣ ಸಂಗ್ರಹಕಾರರು ಅಥವಾ ಮ್ಯೂಸಿಯಂಗಳಲ್ಲಿ ನಿಮ್ಮ ಬಳಿಯಲ್ಲಿರುವ ಕರೆನ್ಸಿ ಅತ್ಯಧಿಕ ಮೊತ್ತ ನೀಡಲು ಸಿದ್ಧರಾಗಿರುತ್ತಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವರ್ಷಕ್ಕೆ ₹1 ಕೋಟಿ ಸಂಬಳ, 3 ಮನೆಗಳಿದ್ದರೂ ₹15,000 ಟ್ಯಾಕ್ಸ್ ಕಟ್ಟಲು ಹಣವಿಲ್ಲ! ವೈರಲ್ ಆಯ್ತು CA ಹಂಚಿಕೊಂಡ ಕಥೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ