
ಅಮೆರಿಕ-ಇರಾನ್ ನಡುವೆ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಗಳವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನ ಭೇಟಿಯಾಗಿರುವುದು ಜಾಗತಿಕ ಸಂಚಲನ ಮೂಡಿಸಿದೆ.
ಇರಾನ್, ಮಧ್ಯಪ್ರಾಚ್ಯ ಯುದ್ಧ ಸಂಘರ್ಷದ ಬಗ್ಗೆ ಟ್ರಂಪ್ ಜೊತೆ ನೆತನ್ಯಾಹು ಸುದೀರ್ಘ ಚರ್ಚೆ ನಡೆಸಿದ್ದಾರೆ. ಮೂಲಗಳ ಪ್ರಕಾರ ಭೇಟಿಯ ಸಮಯದಲ್ಲಿ ಟ್ರಂಪ್-ನೆತನ್ಯಾಹು ರಹಸ್ಯ ಮಾಹಿತಿ ಹಂಚಿಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಇದು ಇರಾನ್ ಗೆ ಅಪಾಯ ಉಂಟು ಮಾಡಬಹುದು.
ಇಸ್ರೇಲ್‌ನ ಚಾನೆಲ್ 12 ವರದಿಯ ಪ್ರಕಾರ ಇಸ್ರೇಲ್ ಇರಾನ್ ವಿರುದ್ಧ ಮತ್ತೊಂದು ದಾಳಿ ನಡೆಸಬೇಕಾಗಬಹುದು ಎಂದು ನೆತನ್ಯಾಹು ಹೇಳಿದ್ದಾರೆ ಎನ್ನಲಾಗಿದೆ. ಇರಾನ್ ಮೇಲೆ ಮತ್ತೊಮ್ಮೆ ದಾಳಿ ಮಾಡುವುದು ಇಸ್ರೇಲ್‌ನ ಕೊನೆಯ ಆಯ್ಕೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದನ್ನು ವರದಿ ಉಲ್ಲೇಖಿಸಿದೆ. ಇರಾನ್ ಸರ್ವನಾಶವಾಗದೆ ಶಾಂತಿ ಸಿಗುವುದಿಲ್ಲ. ಮುಂದೊಮ್ಮೆ ಇಸ್ರೇಲ್ ದಾಳಿ ಮಾಡಿದ್ರೆ ಈವರೆಗೆ ದಾಳಿಗೊಳಗಾಗದ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳಲಿದೆ ಎಂದು ವರದಿಯಾಗಿದೆ.
ಇರಾನ್ ಪುನರ್‌ನಿರ್ಮಾಣ ಮಾಡಿರುವ ಸ್ಥಳಗಳ ಮೇಲೆಯೇ ಮತ್ತೊಮ್ಮೆ ದಾಳಿ ಮಾಡುವ ಮೂಲಕವೇ ಇರಾನ್ ಮಂಡಿಯೂರುವಂತೆ ಮಾಡಬೇಕು. ಈ ಹಿಂದಿನ ದಾಳಿಗಳಲ್ಲಿ ಇರಾನ್ ಭಾರೀ ನಷ್ಟವನ್ನು ಅನುಭವಿಸಿದೆ. ಅದೇ ಸ್ಥಳಗಳನ್ನು ಮತ್ತೆ ಗುರಿಯಾಗಿಸಬಹುದು ಈ ವಿಚಾರವಾಗಿ ಟ್ರಂಪ್ ಜೊತೆ ನೆತನ್ಯಾಹು ಚರ್ಚಿಸಿದ್ದಾರೆ ಎಂದು ವರದಿಯಾಗಿದೆ. ಇಸ್ರೇಲ್ ಅಧಿಕಾರಿಯ ಪ್ರಕಾರ ಇಸ್ರೇಲ್ ತನ್ನ evaluation ಅಮೆರಿಕದೊಂದಿಗೆ ಹಂಚಿಕೊಂಡಿದೆ, ಆದರೆ ಮತ್ತೊಂದು ದಾಳಿಯನ್ನ ನಡೆಸಲು ಅಮೆರಿಕದ ಮೇಲೆ ಒತ್ತಡ ಹೇರುವುದಿಲ್ಲ. ಆದರೆ ಏನು ಮಾಡಬೇಕು ಅನ್ನುವುದು ಟ್ರಂಪ್ ನಿರ್ಧರಿಸುತ್ತಾರೆ ಎಂದು ಅಧಿಕಾರಿ ಹೇಳಿದ್ದಾರೆ.
ಅಮೆರಿಕ-ಇರಾನ್ ನಡುವೆ ನಡೆಯುತ್ತಿರುವ ಯುದ್ಧವು ಜಾಗತಿಕವಾಗಿ ಅನೇಕ ದೇಶಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇದು ಕೇವಲ ಅಮೆರಿಕ-ಇರಾನ್ ನಡುವಿನ ಯುದ್ಧವಲ್ಲ ಬದಲಾಗಿ ಇವೆರಡು ರಾಷ್ಟ್ರಗಳೊಂದಿಗೆ ಇತರ ಗಲ್ಫ್ ರಾಷ್ಟ್ರಗಳು ಸಹ ಹೋರಾಟಕ್ಕೆ ಧುಮುಕುತ್ತಿವೆ. ಇದೀಗ ಇರಾನ್ ವಿರುದ್ಧದ ಸಂಘರ್ಷದಲ್ಲಿ ಸೌದಿ ಅರೇಬಿಯಾ ಕೂಡ ಈ ಪಟ್ಟಿಗೆ ಸೇರಿದೆ. ಅಮೆರಿಕದೊಂದಿಗೆ ಜಂಟಿಯಾಗಿ ಮಂಗಳವಾರ (ಜುಲೈ 28) ಇರಾಕ್‌ನಲ್ಲಿ ವೈಮಾನಿಕ ದಾಳಿ ನಡೆಸಿತು. ಯುಎಸ್ ಸೆಂಟ್ರಲ್ ಕಮಾಂಡ್ ಪ್ರಕಾರ, ಯುಎಸ್-ಸೌದಿ ವೈಮಾನಿಕ ದಾಳಿಯು ಇರಾಕ್‌ನಲ್ಲಿರುವ ಇರಾನ್ ಬೆಂಬಲಿತ ನೆಲೆಗಳನ್ನು ಗುರಿಯಾಗಿರಿಸಿತ್ತು.
ಈ ದಾಳಿಯ ಬಗ್ಗೆ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಯುಎಸ್ ಸೆಂಟ್ರಲ್ ಕಮಾಂಡ್, ಜುಲೈ 28 ರಂದು, ಯುಎಸ್ ಸೆಂಟ್ರಲ್ ಕಮಾಂಡ್ ಮತ್ತು ಸೌದಿ ಅರೇಬಿಯನ್ ಪಡೆಗಳು ಇರಾಕ್‌ನಲ್ಲಿ ಇರಾನ್ ಅನ್ನು ಬೆಂಬಲಿಸುವ ಭಯೋತ್ಪಾದಕ ತಾಣಗಳ ಮೇಲೆ ನಿಖರವಾದ ವೈಮಾನಿಕ ದಾಳಿಗಳನ್ನು ನಡೆಸಿದವು. ಈ ಭಯೋತ್ಪಾದಕರಿಗೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಯುಎಸ್ ಪಡೆಗಳು ಮತ್ತು ಸೌದಿ ಅರೇಬಿಯಾದ ಇಂಧನ ಮೂಲಸೌಕರ್ಯದ ಮೇಲೆ ದಾಳಿ ಮಾಡಲು ಆದೇಶಿಸಿತ್ತು. ಹೀಗಾಗಿ ಪ್ರತಿದಾಳಿ ನಡೆಸಿರುವುದಾಗಿ ಸೌದಿ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ