Illegal Immigration: 75 ಲಕ್ಷ ತೆತ್ತು ಅಕ್ರಮವಾಗಿ ಅಮೆರಿಕ ಪ್ರವೇಶದ ರಹಸ್ಯ!

Kannadaprabha News   | Asianet News
Published : Jan 31, 2022, 04:59 AM IST
Illegal Immigration: 75 ಲಕ್ಷ ತೆತ್ತು ಅಕ್ರಮವಾಗಿ ಅಮೆರಿಕ ಪ್ರವೇಶದ ರಹಸ್ಯ!

ಸಾರಾಂಶ

ಶ್ರೀಮಂತ ದೇಶ ಅಮೆರಿಕಕ್ಕೆ ವಿಶ್ವದ ನಾನಾ ದೇಶಗಳ ಜನರ ಅಕ್ರಮ ವಲಸೆ ಹೊಸತೇನಲ್ಲ. ಆದರೆ ಇತ್ತೀಚೆಗೆ ಗುಜರಾತಿನ ಪಟೇಲ್‌ ಸಮುದಾಯಕ್ಕೆ ಸೇರಿದ ಒಂದೇ ಕುಟುಂಬದ ನಾಲ್ವರು ಕೆನಡಾ ಮೂಲಕ ಅಕ್ರಮವಾಗಿ ಪ್ರವೇಶಿಸಲು ಭೀಕರವಾಗಿ ಸಾವನ್ನಪ್ಪಿದ ಘಟನೆ ನಾನಾ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವಾಷಿಂಗ್ಟನ್‌ (ಜ.31): ಶ್ರೀಮಂತ ದೇಶ ಅಮೆರಿಕಕ್ಕೆ ವಿಶ್ವದ ನಾನಾ ದೇಶಗಳ ಜನರ ಅಕ್ರಮ ವಲಸೆ (Illegal Immigration) ಹೊಸತೇನಲ್ಲ. ಆದರೆ ಇತ್ತೀಚೆಗೆ ಗುಜರಾತಿನ ಪಟೇಲ್‌ ಸಮುದಾಯಕ್ಕೆ ಸೇರಿದ ಒಂದೇ ಕುಟುಂಬದ ನಾಲ್ವರು ಕೆನಡಾ (US Canada border) ಮೂಲಕ ಅಕ್ರಮವಾಗಿ ಪ್ರವೇಶಿಸಲು ಭೀಕರವಾಗಿ ಸಾವನ್ನಪ್ಪಿದ (Death) ಘಟನೆ ನಾನಾ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಅದರಲ್ಲೂ ಜಗದೀಶ್‌ ಕುಮಾರ್‌ ಪಟೇಲ್‌ ಅವರ ಕುಟುಂಬ 75 ಲಕ್ಷ ರು.ನಷ್ಟುಭಾರೀ ಹಣ ತೆತ್ತು, ಯಾವುದೇ ಸಮಯದಲ್ಲಿ ಸಿಕ್ಕಿಬೀಳುವ ಭೀತಿಯಲ್ಲೇ, ಮೈಕೊರೆಯುವ ಮೈನಸ್‌ 35 ಡಿ.ಸೆ ಚಳಿಯಲ್ಲಿ ಹತ್ತಾರು ಕಿ.ಮೀ ನಡೆದು ಕೆನಡಾ ಗಡಿಯಿಂದ ಅಮೆರಿಕಕ್ಕೆ ಹೋಗುವ ಪ್ರಮೇಯವೇನಿತ್ತು ಎಂಬುದು ಇದೀಗ ಕೆನಡಾ ಪೊಲೀಸರನ್ನು ಬಹುವಾಗಿ ಕಾಡುತ್ತಿರುವ ಪ್ರಶ್ನೆ. ಆದರೆ, ಹೇಗಾದರೂ ಮಾಡಿ ಅಮೆರಿಕದಲ್ಲಿ ವಾಸಿಸಬೇಕು ಎಂಬ ‘ಹುಚ್ಚು’ ಇವರ ಸಾವಿಗೆ ಕಾರಣ ಎಂದು ಹೇಳಲಾಗಿದೆ.

ಮೈಕೊರೆವ ಹಾದಿ: ಜಗದೀಶ್‌ ಕುಮಾರ್‌ ಪಟೇಲ್‌(39), ಅವರ ಪತ್ನಿ ವೈಶಾಲಿ ಬೆನ್‌(37), ಪುತ್ರಿ ವಿಹಾಂಗಿ(11), ಪುತ್ರ ಧಾರ್ಮಿಕ್‌ ಪಟೇಲ್‌(3) ಇನ್ನೇನು 10 ಕಿ.ಮೀ ನಡೆದು ಹೋಗಿದ್ದರೆ ಅಮೆರಿಕ ಗಡಿ ದಾಟಿ ಬಿಡುತ್ತಿದ್ದರು. ಆದರೆ ತಡರಾತ್ರಿಯ ಕತ್ತಲಿನ ಹಾದಿ, ಮೈಕೊರೆವ ಚಳಿ, ಇಡೀ ಕುಟುಂಬದ ಅಮೆರಿಕ ಕನಸನನ್ನು ಇನ್ನಿಲ್ಲದಂತೆ ಹಿಮಸಮಾಧಿ ಮಾಡಿತ್ತು.

ತಾಲಿಬಾನ್‌ ಆಡಳಿತದಿಂದ ಆಫ್ಘನ್‌ನಲ್ಲಿ ಭೀಕರ ಸ್ಥಿತಿ: ಆಹಾರ ಖರೀದಿಸಲು ಕಿಡ್ನಿ ಮಾರಾಟ..!

ದೊಡ್ಡ ಜಾಲ: ಅಕ್ರಮ ವಲಸಿಗರನ್ನು ತಿಂಗಳಲ್ಲಿ ಎರಡು ಬಾರಿ ಅಮೆರಿಕಕ್ಕೆ ಸಾಗಿಸುವ ಜಾಲ ಕೆನಡಾದಲ್ಲಿ ಸಕ್ರಿಯವಾಗಿದ್ದು, ಅದರ ಭಾಗವಾಗಿ ಪಟೇಲ್‌ ಕುಟುಂಬ ಕೂಡಾ ತೆರಳಿತ್ತು ಎನ್ನಲಾಗಿದೆ. ಪ್ರವಾಸಿ ವೀಸಾದೊಂದಿಗೆ ಜ.12ರಂದು ಕೆನಡಾದ ಟೊರಾಂಟೋಕ್ಕೆ ಬಂದಿದ್ದ ಜಗದೀಶ್‌ ಕುಟುಂಬ ಮುಂದಿನ 4 ದಿನಗಳಲ್ಲಿ ಸ್ಲಗ್ಲರ್‌ಗಳ ನೆರವಿನೊಂದಿಗೆ ಗಡಿಗೆ ಹೊಂದಿಕೊಂಡ ಪ್ರದೇಶ ವಿನ್ನಿಪೆಗ್‌ಗೆ ವಾಹನದಲ್ಲಿ ತಲುಪಿತ್ತು. ಇವರ ಜೊತೆಗೆ ಇನ್ನೂ 7 ಜನರಿದ್ದರು. ಎಲ್ಲರೂ ಒಟ್ಟಿಗೆ ಪ್ರಯಾಣ ಬೆಳೆಸಿದ್ದರಾದರೂ, ಪುಟ್ಟಮಕ್ಕಳನ್ನು ಕರೆದೊಯ್ಯಲಾಗದೇ ಪಟೇಲ್‌ ಇಡೀ ಕುಟುಂಬ ಸಮೇತ ಹೆಪ್ಪುಗಟ್ಟಿಸಾವನ್ನಪ್ಪಿದೆ.

ಸ್ಥಳೀಯರೇ ಚಳಿಗಾಲದಲ್ಲಿ ಮನೆಯಿಂದ ಹೊರಬರಲಾಗದ ಸ್ಥಿತಿಯಲ್ಲಿ ಪುಟ್ಟಮಕ್ಕಳನ್ನು ಕಟ್ಟಿಕೊಂಡು ಜಗದೀಶ್‌ ದಂಪತಿ ಎದುರಿಸಿದ ಅಂತಿಮ ಕ್ಷಣಗಳು ಎಲ್ಲರಲ್ಲೂ ಕಣ್ಣೀರಿಗೆ ಕಾರಣವಾಗಿದೆ. ಅಕ್ರಮ ಜಾಲ ನಡೆಸುವ ತಂಡ ಇವರಿಗೆಲ್ಲಾ ಚಳಿಯಿಂದ ರಕ್ಷಿಸಿಕೊಳ್ಳಲು ಬೇಕಾದ ಗ್ಲೌಸ್‌, ಸ್ಕೀ ಮಾಸ್ಕ್‌, ಸ್ವೆಟರ್‌, ರಬ್ಬರ್‌ ಬೂಟ್‌ಗಳು ಎಲ್ಲವನ್ನೂ ಒದಗಿಸಿತ್ತಾದರೂ ಅದ್ಯಾವುದೂ ಜೀವ ಕಾಪಾಡುವಲ್ಲಿ ನೆರವಾಗಲಿಲ್ಲ.

ಹಲವು ಪ್ರಶ್ನೆ: ಪಟೇಲ್‌ ಕುಟುಂಬ ದುರ್ಘಟನೆ ಕೆನಡಾ ಪೊಲೀಸರಲ್ಲೂ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಷ್ಟೆಲ್ಲಾ ಹಣ ತೆತ್ತು ಅವರು ಅಮೆರಿಕಕ್ಕೇ ಏಕೆ ಹೋಗಬೇಕಿತ್ತು? ಕೆನಡಾದಲ್ಲೇ ಇರಬಹುದಿತ್ತಲ್ಲಾ? ಈ ದೊಡ್ಡ ಜಾಲದ ಹಿಂದೆ ಯಾರಿದ್ದಾರೆ? ಎಂಬುದೆಲ್ಲಾ ಅವರನ್ನು ಕಾಡುತ್ತಿರುವ ಪ್ರಶ್ನೆಗಳು.

ಸೇನೆಯ ಮುಖ್ಯ ಹುದ್ದೆ ಬಿಟ್ಟು porn ಚಿತ್ರೋದ್ಯಮಕ್ಕೆ ಧುಮುಕಿದ ಬೆಡಗಿ

ಅಮೆರಿಕವೇ ಏಕೆ?: ಕೆನಡಾದಲ್ಲಿ ಕೂಡಾ ಪಂಜಾಬ್‌ ಮತ್ತು ಗುಜರಾತಿಗಳ ದೊಡ್ಡ ಸಮುದಾಯವೇ ಇದೆ. ಆದರೆ ಅಮೆರಿಕದಲ್ಲಿ ಪಟೇಲ್‌ ಸಮುದಾಯಕ್ಕೆ ಸೇರಿದ ಕನಿಷ್ಠ 1.50 ಲಕ್ಷ ಜನರಿದ್ದಾರೆ. ನೇರ ಮಾರ್ಗದ ಮೂಲಕ ಸಾಗಿ ಅಮೆರಿಕದಲ್ಲಿ ಬದುಕುವುದು ಸಾಧ್ಯವಿಲ್ಲವಾದ ಕಾರಣ ಜಗದೀಶ್‌ ಸೇರಿದಂತೆ ನೂರಾರು ಕುಟುಂಬಗಳು ಹೀಗೆ ದುಬಾರಿ ಹಣ ತೆತ್ತು ಅಕ್ರಮ ಮಾರ್ಗದ ಮೂಲಕ ಅಮೆರಿಕ ಪ್ರವೇಶ ಮಾಡುತ್ತವೆ. ಈ ಪೈಕಿ ಕೆಲವರು ಯಶಸ್ವಿಯಾದರೆ, ಇನ್ನು ಕೆಲವರು ಯಾರಿಗೂ ತಿಳಿಯದಂತೆ ನಾಪತ್ತೆಯಾಗಿ ಬಿಡುತ್ತಾರೆ. ಅದೃಷ್ಟವಿದ್ದವರ ಶವವಾದರೂ ಸಿಗುತ್ತದೆ. ಇನ್ನು ಕೆಲವರು ಏನಾದರೂ ಎಂಬುದು ದಶಕಗಳೇ ಕಳೆದರೂ ತಿಳಿಯುವುದಿಲ್ಲ ಎಂದು ಹೀಗೆ ತಮ್ಮವರನ್ನು ಕಳೆದುಕೊಂಡ ಗುಜರಾತಿನ ಪಟೇಲ್‌ ಸೇರಿದಂತೆ ಹಲವು ಸಮುದಾಯಗಳ ನೋವಿನ ನುಡಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?