ಚೀನಾದಲ್ಲಿ ಭಾರೀ ಭೂಕಂಪ: 131 ಸಾವು, 700ಕ್ಕೂ ಹೆಚ್ಚು ಮಂದಿಗೆ ಗಾಯ, ಭರದಿಂದ ಸಾಗುತ್ತಿರುವ ರಕ್ಷಣಾ ಕಾರ್ಯಾಚರಣೆ

Published : Dec 20, 2023, 12:02 PM IST
ಚೀನಾದಲ್ಲಿ ಭಾರೀ ಭೂಕಂಪ: 131 ಸಾವು, 700ಕ್ಕೂ ಹೆಚ್ಚು ಮಂದಿಗೆ ಗಾಯ, ಭರದಿಂದ ಸಾಗುತ್ತಿರುವ ರಕ್ಷಣಾ ಕಾರ್ಯಾಚರಣೆ

ಸಾರಾಂಶ

ಚೀನಾದಲ್ಲಿ ಭಾರೀ ಭೂಕಂಪ 118 ಸಾವು, 500 ಮಂದಿಗೆ ಗಾಯ- 6.2 ರಿಕ್ಟರ್‌ ಮಾಪಕದ ತೀವ್ರತೆಯ ಭೂಕಂಪ- ಹಲವು ಮೂಲಸೌಕರ್ಯ ವ್ಯವಸ್ಥೆಗಳಿಗೆ ಭಾರೀ ಹಾನಿ- ಭರದಿಂದ ಸಾಗುತ್ತಿರುವ ರಕ್ಷಣಾ ಕಾರ್ಯಾಚರಣೆ

ಬೀಜಿಂಗ್‌: ಚೀನಾದ ವಾಯವ್ಯ ಭಾಗದ ಗಾನ್ಸು ಹಾಗೂ ಕಿಂಗಾಯ್‌ ಪ್ರಾಂತ್ಯದಲ್ಲಿ ಸೋಮವಾರ ತಡರಾತ್ರಿ 6.2 ರಿಕ್ಟರ್‌ ಮಾಪಕದ ಭಾರೀ ಭೂಕಂಪ ಸಂಭವಿಸಿದ್ದು, 118 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಚೀನಾ ತುರ್ತು ನಿರ್ವಹಣಾ ಇಲಾಖೆ ತಿಳಿಸಿದೆ.

ಈ ಕುರಿತು ಮಾಹಿತಿ ನೀಡಿದ ವಕ್ತಾರರಾದ ಹ್ಯಾನ್‌ ಶುಜುನ್‌, ‘ಲೈಗೂ ನಗರವನ್ನು ಕೇಂದ್ರೀಕೃತವಾಗಿಸಿಕೊಂಡು 10 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದ ಪರಿಣಾಮ ಟಿಬೆಟ್‌ಗೆ ಹೊಂದಿಕೊಂಡಂತಿರುವ ಎರಡು ಹಿಮಾಲಯ ಶಿಖರದ ಪ್ರಾಂತ್ಯಗಳಲ್ಲಿ ಭಾರೀ ಆಸ್ತಿ-ಪಾಸ್ತಿ ಹಾನಿಯಾಗಿದೆ. 105 ಜನ ಗಾನ್ಸು ಪ್ರಾಂತ್ಯದಲ್ಲಿ ಹಾಗೂ 13 ಜನ ಕಿಂಗಾಯ್‌ ಪ್ರಾಂತ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ 579 ಮಂದಿಗೆ ತೀವ್ರತರವಾದ ಗಾಯಗಳಾಗಿವೆ’ ಎಂದಿದ್ದಾರೆ.

ರಾಜ್ಯದಲ್ಲಿ ಕೊರೊನಾಗೆ ಮೊದಲ ಬಲಿ, ಸ್ಪಷ್ಟಪಡಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

‘ಪ್ರಬಲ ಭೂಕಂಪ ರಾತ್ರಿ 12ಕ್ಕೆ ಸಂಭವಿಸಿದ ನಂತರ ಸರಾಸರಿ 44 ರಿಕ್ಟರ್‌ ಮಾಪಕದಲ್ಲಿ ಸುಮಅರು 32 ಬಾರಿ ಅಲ್ಪ ಪ್ರಮಾಣದ ಭೂಕಂಪ ಬೆಳಗ್ಗೆ 9:45ರವರೆಗೆ ಸಂಭವಿಸಿದೆ. ಇದರಿಂದಾಗಿ ಹಲವು ರಸ್ತೆಗಳು, ವಿದ್ಯುಚ್ಛಕ್ತಿ ಮತ್ತು ದೂರಸಂಪರ್ಕ ತಂತಿಗಳಿಗೆ ಹಾನಿಯಾಗಿದ್ದು, ಜಿಶಿಶನ್‌ ಪ್ರಾಂತ್ಯದಲ್ಲಿ ಸುಮಾರು 6,381 ಮನೆಗಳನ್ನು ಧ್ವಂಸ ಮಾಡಿದೆ. ಜೊತೆಗೆ ಹಳದಿ ನದಿಗೆ ಕಟ್ಟಲಾಗಿದ್ದ ಸೇತುವೆಯು ಕುಸಿದಿದೆ. ಪರಿಹಾರ ಕಾರ್ಯಕ್ಕೆ 580 ರಕ್ಷಕರು 88 ಅಗ್ನಿಶಾಮಕ ವಾಹನಗಳೊಂದಿಗೆ 12 ನಾಯಿಗಳ ಜೊತೆ ರಕ್ಷಣೆಗೆ ನಿಯೋಜಿಸಲಾಗಿದೆ. ಅಲ್ಲದೆ 10 ಸಾವಿರ ಜೊತೆ ಪರಿಹಾರ ಸಾಮಗ್ರಿಗಳನ್ನು ಸಂತ್ರಸ್ತರಿಗೆ ವಿತರಿಸಲಾಗಿದೆ’ ಎಂದು ತಿಳಿಸಿದ್ದಾರೆ.

ತಮಿಳುನಾಡಲ್ಲಿ ವ್ಯಾಪಕ ಮಳೆಗೆ 10 ಸಾವು, 17 ಸಾವಿರಕ್ಕೂ ಹೆಚ್ಚು ಮಂದಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ

ಈ ನಡುವೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ರಕ್ಷಣಾ ಕಾರ್ಯಾಚರಣೆಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದು, ಪಕ್ಷದ ಅಧ್ಯಕ್ಷರು ಮತ್ತು ರಾಜ್ಯಪಾಲರು ಸ್ವತಃ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಗಳಿಗೆ ಕೈಜೋಡಿಸಿದ್ದಾರೆ ಎಂದು ವರದಿಯಾಗಿದೆ. ಈ ಭೂಕಂಪವು ಮುಸ್ಲಿಂ ಬಾಹುಳ್ಯ ಪ್ರದೇಶವಾದ ಉಯಿಗುರ್‌ ಪ್ರಾಂತ್ಯಕ್ಕೂ ಬಹಳಷ್ಟು ಹಾನಿ ಮಾಡಿದೆ ಎಂದು ವರದಿಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಅವಧಿಯಲ್ಲಿ ವಾಕ್‌ ಸ್ವಾತಂತ್ರ್ಯಕ್ಕೆ ಕಡಿವಾಣ : ಸಲ್ಮಾನ್‌ ರಶ್ದಿ ಆರೋಪ
ಆಸೀಸ್‌ನಲ್ಲಿ ಮಕ್ಕಳಿಗೆ ಜಾಲತಾಣ ಬಳಕೆ ನಿಷೇಧ : ನಾಳೆಯಿಂದ ಜಾರಿ