ಶವಸಂಸ್ಕಾರಕ್ಕೂ ಮೊದಲು ಎಚ್ಚೆತ್ತ 8 ತಿಂಗಳ ಕಂದ ಮತ್ತೆ ಸಾವು

By Anusha KbFirst Published Oct 24, 2024, 1:19 PM IST
Highlights

ಬ್ರೆಜಿಲ್‌ನಲ್ಲಿ ಸತ್ತಿದೆ ಎಂದು ಘೋಷಿಸಲಾದ 8 ತಿಂಗಳ ಮಗು ಶವಪೆಟ್ಟಿಗೆಯಲ್ಲಿ ಜೀವಂತವಾಗಿ ಪಕ್ಕದಲ್ಲಿದ್ದವರ ಬೆರಳನ್ನು ಹಿಡಿದ ಘಟನೆ ನಡೆದಿದೆ. ಆಸ್ಪತ್ರೆಗೆ ಕರೆದೊಯ್ಯುವಾಗ ಮತ್ತೆ ಮಗು ಸಾವನ್ನಪ್ಪಿದ್ದು, ಕುಟುಂಬಸ್ಥರು ಆಘಾತಕ್ಕೀಡಾಗಿದ್ದಾರೆ.

ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಲ್ಪಟ್ಟ ಮೇಲೆ ಇನ್ನೇನು ಚಿತೆಗೆ ಬೆಂಕಿ ಇಡಬೇಕು ಎನ್ನುವಷ್ಟರಲ್ಲಿ ಮೃತರಾದವರು ಎದ್ದು ಕುಳಿತಂತಹ ಹಲವು ಘಟನೆಗಳು ಈ ಹಿಂದೆ ನಡೆದಿದೆ. ಈಗ ಇಂತಹದ್ದೇ ಮತ್ತೊಂದು ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ. 8 ತಿಂಗಳ ಕಿಯರಾ ಕ್ರಿಸ್ಲೇನ್ ಎಂಬ ಮಗುವನ್ನು ವೈದ್ಯರು ಸಾವನ್ನಪ್ಪಿದೆ ಎಂದು ಘೋಷಿಸಿದ್ದರು. ಹೀಗಾಗಿ ಮಗು ಕಳೆದುಕೊಂಡ ಪೋಷಕರು ವಾಸ್ತವವನ್ನು ಅರಿತುಕೊಂಡು ಮಗುವಿನ ಶವಸಂಸ್ಕಾರಕ್ಕೆ ಸಿದ್ಧತೆ ಮಾಡಿದ್ದರು. ಮಗುವನ್ನು ಶವಪೆಟ್ಟಿಗೆಯಲ್ಲಿ ಮಲಗಿಸಿಕೂಡ ಆಗಿತ್ತು. ಅಷ್ಟರಲ್ಲಿ ಮಗು ತನ್ನ ಶವಪೆಟ್ಟಿಗೆಯ ಪಕ್ಕದಲ್ಲಿ ನಿಂತಿದ್ದವರೊಬ್ಬರ ಬೆರಳನ್ನು ಗಟ್ಟಿಯಾಗಿ ಹಿಡಿದುಕೊಂಡಿದೆ. ಹೀಗಾಗಿ ಮಗು ಜೀವಂತವಿದೆ ಎಂಬುದರ ಅರಿವು ಪೋಷಕರಿಗೆ ಆಗಿದೆ. 

ಕೂಡಲೇ ಪೋಷಕರು ಮಗುವನ್ನು ಶವಪೆಟ್ಟಿಗೆಯಿಂದ ತೆಗೆದು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಆಸ್ಪತ್ರೆ ತಲುಪುವಷ್ಟರಲ್ಲಿ ಪುಟಾಣಿಯ ಸಣ್ಣಜೀವವೂ ಹೊರಟು ಹೋಗಿದ್ದು, ಆಕೆ ಸತ್ತಿದ್ದಾಳೆ ಎಂದು ವೈದ್ಯರು ಮತ್ತೆ ಘೋಷಣೆ ಮಾಡಿದ್ದಾರೆ. ಇದರಿಂದ ಮಗುವಿನ ಕುಟುಂಬದವರು ಆಘಾತಕ್ಕೀಡಾಗಿದ್ದಾರೆ. ಮಗು ತನ್ನ ಶವಪೆಟ್ಟಿಗೆ ಪಕ್ಕದಲ್ಲಿದ್ದವರ ಕೈ ಹಿಡಿದಾಗ ಆಕೆ ಬದುಕಬಹುದು ಎಂಬ ಭರವಸೆಯಲ್ಲಿ ಕುಟುಂಬದವರಿದ್ದರು. ಆದರೆ ಆಕೆ ಆಸ್ಪತ್ರೆಗೆ ಬರುವಷ್ಟರರಲ್ಲಿ ಸಾವನ್ನಪ್ಪಿದ್ದು, ಕುಟುಂಬದವರು ಶಾಕ್‌ನಲ್ಲಿದ್ದಾರೆ.  

Latest Videos

ಜಸ್ಟ್ ಮಿಸ್: ಹೃದಯ ತೆಗೆಯಬೇಕು ಅನ್ನುವಷ್ಟರಲ್ಲಿ ಎದ್ದು ಕುಳಿತ ಬ್ರೈನ್‌ಡೆಡ್‌ ವ್ಯಕ್ತಿ

ನಾವು ಈಗಾಗಲೇ ಆಘಾತಕ್ಕೊಳಗಾಗಿದ್ದೆವು, ಅಷ್ಟರಲ್ಲಿ ಸಣ್ಣದೊಂದು ಭರವಸೆ ಸಿಕ್ಕಿತ್ತು. ಆದರೆ ಅಷ್ಟರಲ್ಲಿ ಹೀಗಾಯ್ತು ಎಂದು ಮಗುವಿನ ತಂದೆ ಕ್ರಿಶ್ಟಿನೊ ಸಂತೊಸ್ ಹೇಳಿದ್ದಾರೆ. ಈ ಮಗುವಿಗೆ ವೈರಲ್ ಸೋಂಕು ಉಂಟಾಗಿತ್ತು. ಹೀಗಾಗಿ ಆಕೆಯನ್ನು ಕುಟುಂಬದವರು ಆಸ್ಪತ್ರೆಗೆ ಕರೆದೊಯ್ದಿದ್ದು.  ಮೊದಲ ಬಾರಿ ಮಗು ಉಸಿರಾಡುತ್ತಿಲ್ಲ, ಹೃದಯಬಡಿತ ಇಲ್ಲ ಹೀಗಾಗಿ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಘೋಷಿಸಿದ್ದರು. ಆದರೆ ಆಕೆಯ ದೇಹದಲ್ಲಿ ಮತ್ತೆ ಚಲನೆ ಕಂಡು ಬಂದಾಗ, ವೈದ್ಯರು ಆಕೆಯನ್ನು ಉಳಿಸುವ ಪ್ರಯತ್ನ ಮಾಡಿದರಾದರೂ ಆಕೆ ಬದುಕುಳಿಯಲಿಲ್ಲ,  ಘಟನೆ ಹಿನ್ನೆಲೆ ಈಗ ಬ್ರೆಜಿಲ್‌ನ ಸ್ಪೆಷಲಿಸ್ಟ್ ಸೈಂಟಿಫಿಕ್ ಪೊಲೀಸರು ಆಸ್ಪತ್ರೆ ವಿರುದ್ಧ ತನಿಖೆಗೆ ಆಗ್ರಹಿಸಿದ್ದಾರೆ. 

ಬೆಂಗಳೂರು: ಮೆದುಳು ನಿಷ್ಕ್ರಿಯಗೊಂಡಿದ್ದ ಮಗನ ಅಂಗಾಂಗ ದಾನ ಮಾಡಿದ ಪೋಷಕರು

ಕೆಲ ದಿನಗಳ ಹಿಂದಷ್ಟೇ ಅಮೆರಿಕಾದ ಕೆಂಟುಕಿಯಲ್ಲಿ ಬ್ರೈನ್ ಡೆಡ್ ಆದ ವ್ಯಕ್ತಿ ಹಠಾತ್ ಆಗಿ ಎಚ್ಚರಗೊಂಡು ಎದ್ದು ಕುಳಿತ ಘಟನೆ ನಡೆದಿತ್ತು. ಮಿದುಳು ನಿಷ್ಕ್ರಿಯಗೊಂಡವರು ಬಹುತೇಕ ಸತ್ತಂತೆ, ಹೀಗಾಗಿ ಈತನ ದೇಹದ ಅಂಗಾಂಗ ದಾನ ಪಡೆದು ಬೇರೆಯವರಿಗೆ ನೀಡಲು ಆಸ್ಪತ್ರೆ ತೀರ್ಮಾನಿಸಿತ್ತು. ಅದರಂತೆ ಆತನ ಕುಟುಂಬದವರ ಒಪ್ಪಿಗೆಯನ್ನು ಪಡೆದಿತ್ತು. ಬಳಿಕ ಆತನ ಹೃದಯವನ್ನು ದೇಹದಿಂದ ಬೇರ್ಪಡಿಸಲು ಅಪರೇಷನ್‌ಗೆ ಸಿದ್ಧತೆ ನಡೆಸುತ್ತಿದ್ದ ವೇಳೆ 36 ವರ್ಷದ ಯುವಕನಿಗೆ ಮತ್ತೆ ಪ್ರಜ್ಞೆ ಬಂದಿತ್ತು. ಈ ವಿಚಾರದ ವೈದ್ಯಕೀಯ ಲೋಕದಲ್ಲಿ ಅಚ್ಚರಿ ಮೂಡಿಸಿದೆ. ಈ ಯುವಕನನ್ನು ಡ್ರಗ್ ಓವರ್‌ಡೋಸ್ ಆದ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನಂತರ ಈತನ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಘೋಷಿಸಿದ್ದರು.

click me!