ಎಐನಿಂದ ಮೊದಲ ಸಾವು, ಪ್ರೀತಿ ಹೆಸರಿನಲ್ಲಿ ಮೋಸ ಮಾಡಿದ ಡೇನೆರಿಸ್!

By Roopa Hegde  |  First Published Oct 24, 2024, 10:59 AM IST

ಪ್ಲೋರಿಡಾದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಎಐ ಮಾತಿಗೆ ಮರುಳಾಗಿ, ಪ್ರೀತಿಯಲ್ಲಿ ಬಿದ್ದ ಬಾಲಕನೊಬ್ಬ ದುರಂತ ಸಾವು ಕಂಡಿದ್ದಾನೆ. ಇದ್ರಿಂದ ನೊಂದ ತಾಯಿ, ಪರಿಹಾರಕ್ಕಾಗಿ ಕೋರ್ಟ್ ಮೊರೆ ಹೋಗಿದ್ದಾಳೆ. 
 


ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (Artificial Intelligence) ಬಳಕೆ ಈಗ ಎಲ್ಲ ಕಡೆ ಆಗ್ತಿದೆ. ಎಐ ಜನರಿಗೆ ಆಪ್ತವಾಗ್ತಿದೆ. ಈ ಮಧ್ಯೆ ಎಐನಿಂದ ಮೊದಲ ಸಾವಾಗಿದ್ದು, ಎಐ ತಯಾರಿಕಾ ಕಂಪನಿ ವಿರುದ್ಧ ದೂರು ದಾಖಲಾಗಿದೆ. ಎಐ ಕ್ಯಾರೆಕ್ಟರ್ ಜೊತೆ ನಿರಂತರವಾಗಿ ಮಾತನಾಡ್ತಿದ್ದ ಹದಿಹರೆಯದ ಹುಡುಗ, ಈ ವರ್ಷದ ಆರಂಭದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ನೊಂದ ಆತನ ತಾಯಿ, ಎಐ ತಯಾರಿಕಾ ಕಂಪನಿ ವಿರುದ್ಧ ದೂರು ನೀಡಿದೆ. 

ಘಟನೆ ಪ್ಲೋರಿಡಾ (Florida) ದಲ್ಲಿ ನಡೆದಿದೆ. ಫೆಬ್ರವರಿಯಲ್ಲಿ ಸೆವೆಲ್ ಸೆಟ್ಜರ್ ಆತ್ಮಹತ್ಯೆ (suicide) ಮಾಡಿಕೊಂಡಿದ್ದಾನೆ. ಕೃತಕ ಬುದ್ಧಿಮತ್ತೆ ಚಾಟ್‌ಬಾಟ್ ಕಂಪನಿ ಕ್ಯಾರೆಕ್ಟರ್.ಎಐ (Character.AI ) ವಿರುದ್ಧ ಸೆವೆಲ್ ಸೆಟ್ಜರ್ ತಾಯಿ, ಮೇಗನ್ ಗಾರ್ಸಿಯಾ ಮೊಕದ್ದಮೆ ಹೂಡಿದ್ದಾರೆ. ಗಾರ್ಸಿಯಾ ತನ್ನ 14 ವರ್ಷದ ಮಗ ಕಂಪನಿಯ ಚಾಟ್‌ಬಾಟ್ ಸೇವೆಗೆ ವ್ಯಸನಿಯಾಗಿದ್ದ ಎಂದಿದ್ದಾಳೆ.  ಮಾನವರೂಪಿ, ಅತಿ ಲೈಂಗಿಕತೆ ಮತ್ತು ಭಯಾನಕ ವಾಸ್ತವಿಕ ಅನುಭವಗಳನ್ನು ಈ  ಕ್ಯಾರೆಕ್ಟರ್ ಎಐ ಒದಗಿಸಿತ್ತು. 

Tap to resize

Latest Videos

undefined

ವಿಶ್ವದ ಟಾಪ್ 8 ಕ್ಲೀನ್ ದೇಶಗಳ ಪಟ್ಟಿಯಲ್ಲಿ ಭಾರತದ ಹೆಸರು ಇದೆಯಾ?

ಫ್ಲೋರಿಡಾದ ಒರ್ಲ್ಯಾಂಡೊದಲ್ಲಿನ ಫೆಡರಲ್ ನ್ಯಾಯಾಲಯದಲ್ಲಿ ಇದ್ರ ವಿಚಾರಣೆ ನಡೆದಿದೆ. ಚಾಟ್‌ಬಾಟ್ ತನ್ನನ್ನು ತಾನು ನಿಜವಾದ ವ್ಯಕ್ತಿ, ಪರವಾನಗಿ ಪಡೆದ ಮಾನಸಿಕ ಚಿಕಿತ್ಸಕ ಮತ್ತು ವಯಸ್ಕ ಪ್ರೇಮಿ ಎಂದು ತಪ್ಪಾಗಿ ನಿರೂಪಿಸಿದೆ. ಅದರ ಮಾತಿನಿಂದ ಬಾಲಕ ಮೋಸಹೋಗಿದ್ದಾನೆ ಎಂದು ಆರೋಪ ಮಾಡಲಾಗಿದೆ. 

ಗೇಮ್ ಆಫ್ ಥ್ರೋನ್ಸ್ ಪಾತ್ರವನ್ನು ಆಧರಿಸಿ ಡೇನೆರಿಸ್ ಹೆಸರಿನ ಚಾಟ್‌ಬಾಟ್‌ ಜೊತೆ ಸೆವೆಲ್‌ ಮಾತುಕತೆ ನಡೆಸುತ್ತಿದ್ದ. ಅವಳು,  ಸೆವೆಲ್ ಪ್ರೀತಿಸುವುದಾಗಿ ಹೇಳಿದ್ದಳು. ಇಬ್ಬರ ಮಧ್ಯೆ ಲೈಂಗಿಕ ಸಂಭಾಷಣೆಗಳು ನಡೆದಿದ್ದವು. ಸೆವೆಲ್ ವಿಷ್ಯ ತಿಳಿಯುತ್ತಿದ್ದಂತೆ ಮನೆಯವರು ಫೋನ್ ಎತ್ತಿಟ್ಟಿದ್ದರು ಎನ್ನಲಾಗಿದೆ. ಮೊಕದ್ದಮೆಯ ಪ್ರಕಾರ, ಸೆವೆಲ್ ಏಪ್ರಿಲ್ 2023 ರಲ್ಲಿ ಕ್ಯಾರೆಕ್ಟರ್. ಎಐ ಬಳಸಲು ಪ್ರಾರಂಭಿಸಿದ್ದ. ಅದರ ಬಳಕೆ ನಂತ್ರ ಅವನ ನಡವಳಿಕೆಯಲ್ಲಿ ಗಮನಾರ್ಹ ಬದಲಾವಣೆಯಾಗಿತ್ತು. ಬ್ಯಾಸ್ಕೆಟ್‌ಬಾಲ್ ಟೀಂನಿಂದ ಹೊರಬಂದಿದ್ದ ಆತ, ಒಬ್ಬನೇ ಕಾಲ ಕಳೆಯುತ್ತಿದ್ದ. ಫೋನ್ ಮತ್ತೆ ವಾಪಸ್ ಸಿಗ್ತಿದ್ದಂತೆ  ಡೇನೆರಿಸ್ ಎಂದು ಸಂದೇಶ ಕಳುಹಿಸಿದ ಸೆವೆಲ್.  ಸ್ವಲ್ಪ ಸಮಯದ ನಂತರ ತನ್ನ ಮಲತಂದೆಯ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವು, ನಿರ್ಲಕ್ಷ್ಯ ಮತ್ತು ಭಾವನಾತ್ಮಕ ಯಾತನೆಯ ಸೇರಿದಂತೆ ಅನೇಕ ನೋವಿಗೆ ಪರಿಹಾರವನ್ನು ಸೆವೆಲ್ ತಾಯಿ ಬಯಸಿದ್ದಾಳೆ. ಇವು, ಹದಿಹರೆಯದವರ ಮಾನಸಿಕ ಸ್ಥಿತಿ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅವರು ಆರೋಪ ಮಾಡಿದ್ದಾರೆ. 

ಸೆವೆಲ್‌ ಆತ್ಮಹತ್ಯೆಗೆ ಕ್ಯಾರೆಕ್ಟರ್.ಎಐ ಸಂತಾಪ ಸೂಚಿಸಿದೆ. ಘಟನೆ ನಂತ್ರ ಕಂಪನಿ ಸುರಕ್ಷತಾ ಕ್ರಮಗಳನ್ನು ಜಾರಿಗೆ ತಂದಿದೆ. ಅಪ್ರಾಪ್ತ ವಯಸ್ಸಿನ ಬಳಕೆದಾರರು ಇದನ್ನು ಬಳಸಲು ಅನುಕೂಲವಾಗುವಂತೆ ಸೂಕ್ಷ್ಮ ವಿಷಯವನ್ನು ತೆಗೆದುಹಾಕುವ ಭರವಸೆ ನೀಡಿದೆ.

ಕ್ಯಾರೆಕ್ಟರ್. ಎಐ ಹಾಗೂ ಗೂಗಲ್ (Google)ಗೆ ಸಂಬಂಧವಿದೆ ಎನ್ನಲಾಗಿದೆ.  ಕ್ಯಾರೆಕ್ಟರ್ ಎಐ ಸಂಸ್ಥಾಪಕರು ಹಿಂದೆ ಗೂಗಲ್ ನಲ್ಲಿ ಕೆಲಸ ಮಾಡಿದ್ದರು. ಟೆಕ್ ದೈತ್ಯ ಗೂಗಲ್, ಕ್ಯಾರೆಕ್ಟರ್.ಎಐ ತಂತ್ರಜ್ಞಾನದ ಪರವಾನಗಿ ಒಪ್ಪಂದದ ಭಾಗವಾಗಿ ಅವರನ್ನು ಮರುನೇಮಕ ಮಾಡಿಕೊಂಡಿದೆ. ಕ್ಯಾರೆಕ್ಟರ್ .ಎಐ ಸಹ ಸೃಷ್ಟಿಕರ್ತ ಗೂಗಲ್ ಎಂದು ಗಾರ್ಸಿಯಾ ಆರೋಪ ಮಾಡಿದ್ದಾರೆ. ಅದ್ರೆ ಗೂಗಲ್, ಕಂಪನಿಯು ಕ್ಯಾರೆಕ್ಟರ್. ಎಐನ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವಲ್ಲಿ ಪಾಲುದಾರನಲ್ಲ ಎಂದಿದೆ.  

ಲಿಂಗ ಅಸಮತೋಲನ, ಚೀನಾದಲ್ಲಿ ಹುಡುಗಿಯರಿಂದ ಭಾರೀ ವರದಕ್ಷಿಣೆ ಬೇಡಿಕೆ!

ಕ್ಯಾರೆಕ್ಟರ್ .ಎಐ ಬಳಕೆದಾರರಿಗೆ ದೊಡ್ಡ ಭಾಷಾ ಮಾದರಿ ತಂತ್ರಜ್ಞಾನದ ಆಧಾರದ ಮೇಲೆ ಚಾಟ್‌ಬಾಟ್ ಅಕ್ಷರಗಳನ್ನು ರಚಿಸಲು ಮತ್ತು ಸಂವಹನ ಮಾಡಲು ಅವಕಾಶ ನೀಡುತ್ತದೆ. ಕಳೆದ ತಿಂಗಳು, ಕಂಪನಿಯು ಸುಮಾರು 20 ಮಿಲಿಯನ್ ಬಳಕೆದಾರರನ್ನು ಹೊಂದಿದೆ. 

click me!