ದಾವಣಗೆರೆ ಮೂಲದ ಇಂಜಿನಿಯರ್ ಕುಟುಂಬವೊಂದು ಅಮೇರಿಕಾಗೆ ಹೋಗಿ ಮೃತಪಟ್ಟಿದ್ದು, ಮೂವರ ತಲೆಯಲ್ಲಿಯೂ ಬಂದೂಕಿನ ಬುಲೆಟ್ ಇರುವುದು ಪತ್ತೆಯಾಗಿದೆ.
ದಾವಣಗೆರೆ (ಆ.20): ದಾವಣಗೆರೆ ಮೂಲದ ಇಂಜಿನಿಯರ್ ಕುಟುಂಬವೊಂದು ಅಮೇರಿಕಾಗೆ ಹೋಗಿ 9 ವರ್ಷಗಳ ಕಾಲ ವಾಸವಾಗಿತ್ತು. ಆದರೆ, ಇದ್ದಕ್ಕಿದ್ದಂತೆ ಕುಟುಂಬದಲ್ಲಿ ತಂದೆ, ತಾಯಿ ಹಾಗೂ ಮಗು ಸಾವನ್ನಪ್ಪಿದ್ದರು. ಸಾವಿನ ಹಿಂದೆ ಹಲವು ಅನುಮಾನಗಳು ಕಂಡುಬಂದಿದ್ದವು. ಆದರೆ, ಮರಣೋತ್ತರ ಪರೀಕ್ಷೆ ಮಾಡಿದಾಗ ಮೂವರ ತಲೆಯಲ್ಲಿಯೂ ಬಂದೂಕಿನ ಬುಲೆಟ್ ಇರುವುದು ಪತ್ತೆಯಾಗಿದೆ.
ಅಮೇರಿಕಾದ ಬಾಲ್ಟಿಮೋರ್‌ನಲ್ಲಿ ದಾವಣಗೆರೆ ಮೂಲದ ಕುಟುಂಬದ ಮೂವರು ಸಾವನ್ನಪ್ಪಿದ್ದರು. ಆದರೆ, ಮೂವರ ಸಾವಿನ ಬಗ್ಗೆ ಅಮೇರಿಕಾ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಮೂವರ ತಲೆಯಲ್ಲಿಯೂ ಗುಂಡುಗಳು ಹೊಕ್ಕಿದ್ದು, ಬಂದೂಕಿನಿಂದ ಶೂಟ್ ಮಾಡಿ ಸಾಯಿಸಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಅವರನ್ನು ಯಾರು ಕೊಲೆ ಮಾಡಿದ್ದಾರೆ ಎಂದು ಶೋಧಕಾರ್ಯ ನಡೆಸಿದಾಗ ಕುಟುಂಬದ ಒಡೆಯನಾಗಿದ್ದ ಯೋಗೇಶ್ ಸ್ವತಃ ತನ್ನ ಹೆಂಡತಿ ಹಾಗೂ ಮಗುವಿನ ತಲೆಗೆ ಗುಂಡಿಟ್ಟು ಹತ್ತೆ ಮಾಡಿದ್ದಾನೆ. ನಂತರ, ತಾನೂ ತಲೆಗೆ ಗುಂಡು ಹೊಡೆದುಕೊಂಡು ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಅಮೇರಿಕಾದಲ್ಲಿ ಕನ್ನಡದ ಕುಟುಂಬ ದಾರುಣ ಸಾವು: ಗಂಡ, ಹೆಂಡ್ತಿ ಮಗು ಮೃತ
ಮೃತ ಯೋಗೇಶ್ ಮನೆಯಲ್ಲಿ ಡೆತ್‌ನೋಟ್ ಪತ್ತೆ: ಅಮೇರಿಕಾದ ಬಾಲ್ಟಿಮೋರ್ ನಲ್ಲಿ ಆ.15ರಂದು ಯೋಗೇಶ್ ಹೊನ್ನಾಳ(37), ಪ್ರತಿಭಾ ಹೊನ್ನಾಳ್(35), ಯಶ್ ಹೊನ್ನಾಳ್(6) ಮೃತಪಟ್ಟಿದ್ದರು. ಒಂದೇ ಕುಟುಂಬದ ಮೂವರ ಸಾವು ಹಿನ್ನಲೆಯಲ್ಲಿ ಪರಿಶೀಲನೆ ಮಾಡಿದ ಪೊಲೀಸರಿಗೆ ಮೃತ ಯೋಗೇಶ್ ಅವರ ಮನೆಯಲ್ಲಿ ಡೆತ್‌ನೋಟ್ ಪತ್ತೆಯಾಗಿದೆ. ಈ ಬಗ್ಗೆ ಬಾಲ್ಟಿಮೋರ್‌ನ ಪೊಲೀಸರು ಮೃತ ಯೋಗೇಶ್ ಅವರ ಕುಟುಂಬದೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆದರೆ, ಡೆತ್ ನೋಟ್ ನಲ್ಲಿ ಏನಿದೆ ಎಂಬ ಬಗ್ಗೆ ಮಾಹಿತಿ ಗೌಪ್ಯವಾಗಿಡಲಾಗಿದೆ. ಅಮೇರಿಕಾದ ಪೊಲೀಸರಿಂದ ತನಿಖೆ ಮುಂದುವರಿದೆ. ಮೃತಪಟ್ಟ ಪಾರ್ಥಿವ ಶರೀರಗಳನ್ನು ಭಾರತಕ್ಕೆ ತರಲು ಕುಟುಂಬಸ್ಥರಿಂದ ಶತಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಅಮೇರಿಕಾದಲ್ಲಿರುವ ಶ್ರೀನಿವಾಸ್ ಎನ್ನುವವರುಗೆ ಮೃತದೇಹ ತರುವಂತೆ ಜವಾಬಾರಿ ವಹಿಸಲಾಗಿದೆ. ಇನ್ನು ಶ್ರೀನಿವಾಸ್ ಮೃತ ಮಹಿಳೆ ಪ್ರತಿಭಾ ಹೊನ್ನಾಳ್ ಅವರ ಸಂಬಂಧಿಯಾಗಿದ್ದಾರೆ. ಪೊಲೀಸರ ತನಿಖೆ ನಡೆಯುತ್ತಿರುವುದರಿಂದ ಇನ್ನು ಕೆಲ ದಿನ ಮೃತದೇಹ ಕುಟುಂಬಸ್ಥರಿಗೆ ಒಪ್ಪಿಸುವ ಸಾಧ್ಯತೆಯಿದೆ. ದೂರದ ಅಮೇರಿಕಾ ಮಾಹಿತಿಗಾಗಿ ದಾವಣಗೆರೆಯಲ್ಲಿ ಕುಟುಂಬ ಸದಸ್ಯರು ಕಾದು ಕುಳಿತಿದ್ದಾರೆ.
ಮಗ, ಪತ್ನಿ ಕೊಂದು ಗುಂಡು ಹಾರಿಸಿಕೊಂಡ ಪತಿ: ಇನ್ನು ಮನೆಯಲ್ಲಿ ಡೆತ್‌ನೋಟ್ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ತಮ್ಮ ಕುಟುಂಬದಲ್ಲಿ ಮೂವರು ಗುಂಡೇಟಿನಿಂದ ಸಾವು. ಬಾಲ್ಟಿಮೋರ್ ಕೌಂಟಿ ಪೊಲೀಸರಿಂದ ಹೇಳಿಕೆ ಬಿಡುಗಡೆ ಮಾಡಲಾಗಿದೆ. ಪ್ರಾಥಮಿಕ ಮಾಹಿತಿಯಿಂದ ಅವಳಿ ಹತ್ಯೆ, ಆತ್ಮಹತ್ಯೆ ವಿಚಾರ ಬಹಿರಂಗವಾಗಿದೆ. ಪತಿ, ಪತ್ನಿ ಕಲಹಕ್ಕೆ ಮಗು ಕೂಡ ಬಲಿಯಾಗಿದೆ. ಮೃತ ಯೋಗೇಶ್ ಸ್ವತಃ ತಾನೇ ತನ್ನ ಮಗು ಯಶ್, ಪತ್ನಿ ಪ್ರತಿಭಾಗೆ ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ನಂತರ, ತಾನೂ ಗುಂಡು ಹಾರಿಸಿಕೊಂಡಿದ್ದಾನೆ. ಮೂವರು ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಸರ್ಕಾರಕ್ಕೆ ಶಾಕ್ ಕೊಟ್ಟ ಮದ್ಯಪ್ರಿಯರು: ಎಣ್ಣೆ ಮಾರಾಟದಲ್ಲಿ ಭಾರಿ ಇಳಿಮುಖ
ಮರಣೋತ್ತರ ಪರೀಕ್ಷೆ ಬಳಿಕ ಸಂಪೂರ್ಣ ಮಾಹಿತಿ: ಆಗಸ್ಟ್ 15ರಂದು ರಾತ್ರಿ ಘಟನೆ ನಡೆದಿದೆ. ಆಗಸ್ಟ್ 18ರಂದು ಪೊಲೀಸರ ಮಾಹಿತಿಯಿಂದ ಘಟನೆ ಬಹಿರಂಗವಾಗಿದೆ. ಮೃತ ದೇಹ ತಾಯ್ನಾಡಿಗೆ ತರಿಸಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ದಾವಣಗೆರೆ ಜಿಲ್ಲಾಧಿಕಾರಿಗಳ ಮೃತರ ಕುಟುಂಬಸ್ಥರು ಮೂಲಕ ಮನವಿ ಮಾಡಿಕೊಂಡಿದ್ದಾರೆ. ದಾವಣಗೆರೆ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಅವರಿಗೆ ಮೃತ ಯೋಗೇಶ್ ತಾಯಿ ಶೋಭಾ ಮನವಿ ಪತ್ರ ನೀಡಿದ್ದರು. ಮನವಿ ಪತ್ರ ಸ್ವೀಕರಿಸಿ ವಿದೇಶಾಂಗ ಸಚಿವಾಲಯಕ್ಕೆ ಮಾಹಿತಿ ರವಾನೆ ಮಾಡಲಾಗಿದೆ. ವಿದೇಶಾಂಗ ಸಚಿವಾಲಯ ಮೂಲಕ ಮೃತದೇಹ ತವರಿಗೆ ತರಿಸಿಕೊಳ್ಳಲು ಜಿಲ್ಲಾಡಳಿತ ಪ್ರಯತ್ನ ಮಾಡಲಾಗುತ್ತಿದೆ.