
ಕ್ಯಾನ್‌ಬೆರಾ[ಜ.07]: ಆಸ್ಟ್ರೇಲಿಯಾದ ಕಾಡುಗಳಿಗೆ ಭೀಕರ ಅಗ್ನಿ ತಗುಲಿದೆ. ಸಾವಿರಾರು ಅಗ್ನಿಶಾಮಕ ಸಿಬ್ಬಂದಿ ತಮ್ಮ ಜೀವ ಪಣಕ್ಕಿಟ್ಟು ಬೆಂಕಿ ನಂದಿಸುವ ಕಾರ್ಯಕ್ಕಿಳಿದಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿಯ ಪುಟ್ಟ ಮಗಳೊಬ್ಬಳು ಶೇರ್ ಮಾಡಿರುವ ಪೋಟೋ ನೆಟ್ಟಿಗರನ್ನು ಭಾವುಕರನ್ನಾಗಿಸಿದೆ.
5 ದಿನದೊಳಗೆ 10 ಸಾವಿರ ಒಂಟೆ ಕೊಲ್ಲಲು ಆದೇಶ: ಕಾರಣ ಹೀಗಿದೆ!
ಮಗಳು ಶೇರ್ ಮಾಡಿಕೊಂಡಿರುವ ಈ ಫೋಟೋದಲ್ಲಿ ಅಗ್ನಿಶಾಮಕ ಸಿಬ್ಬಂದಿ ಪಾರ್ಕ್ ಒಂದರಲ್ಲಿ ಮಲಗಿದ್ದು ಕಾಣಬಹುದು. ಇವರು ಕಳೆದ 10 ದಿನಗಳಿಂದ ನಿರಂತರ 12 ಗಂಟೆ ಕರ್ತವ್ಯ ಮಾಡುತ್ತಿದ್ದಾರೆನ್ನಲಾಗಿದೆ ಈ ಮೂಲಕ ಕಾಡಿಗೆ ತಾಗಿರುವ ಬೆಂಕಿ ನಿಯಂತ್ರಿಸಲು ಯತ್ನಿಸುತ್ತಿದ್ದಾರೆ. ಕರ್ತವ್ಯದಲ್ಲಿದ್ದ ಆತ ಕೇವಲ 5 ನಿಮಿಷ ಅಲ್ಲೇ ಇದ್ದ ಪಾರ್ಕ್ ನಲ್ಲಿ ಮಲಗಿದ್ದು, ಈ ವೇಲೆ ಆತನ ಮಗಳು ಫೋಟೋ ಕ್ಲಿಕ್ ಮಾಡಿದ್ದಾಳೆ.
ಆಸ್ಟ್ರೇಲಿಯಾ ಕಾಡ್ಗಿಚ್ಚು ನಿಯಂತ್ರಣಕ್ಕೆ 1 ಮಿಲಿಯನ್ ನೀಡಿದ ನಟ!
ಜನರನ್ನು ಭಾವುಕರನ್ನಾಗಿಸಿದ ಫೋಟೋ
ಆಸ್ಟ್ರೇಲಿಯಾದ ನ್ಯೂ ಸೌತ್ ವೆಲ್ಸ್ ನ ಜೆನ್ನಾ ಒಕೀಫ್ ಎಂಬಾಕೆ ಈ ಫೋಟೋ ಶೇರ್ ಮಾಡಿಕೊಂಡಿದ್ದಾಳೆ. ಅಲ್ಲದೇ 'ಇದು ನಮ್ಮ ಮನೆ ಎದುರಿರುವ ಪಾರ್ಕ್ ನಲ್ಲಿ 5 ನಿಮಿಷ ನಿದ್ದೆಗೆ ಜಾರಿದ ದೃಶ್ಯ. ಅವರು RFS NSW ಜೊತೆ ಸ್ವಯಂಸೇವಕರಾಗಿ ಕಳೆದ 10 ದಿನಗಳಿಂದ 12 ತಾಸಿಗೂ ಅಧಿಕ ಸಮಯ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಕೇವಲ 5 ನಿಮಿಷ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಕಳೆದ 1 ತಿಂಗಳಿಂದ ನಮ್ಮ ಕುಟುಂಬ ಹಾಘೂ ಸಮುದಾಯ ಈ ಬೆಂಕಿ ನಂದಿಸಲು ಶ್ರಮಿಸುತ್ತಿದೆ. ಅವರೆಲ್ಲರಿಗೂ ಸುಸ್ತಾಗಿದೆ, ನೋವಾಗುತ್ತಿದೆ. ಇಂದು ನಾನು ನನ್ನ ತಂದೆ ಅಳುತ್ತಿರುವುದನ್ನು ನೋಡಿದೆ. ಅವರು ನನ್ನ ಬಳಿ 'ಜೆನ್ ನಾನು ಈವರೆಗೂ ಇಂತಹ ದೃಶ್ಯ ನೋಡಿರಲಿಲ್ಲ. ಇದು ನಿಯಂತ್ರಣಕ್ಕೆ ಸಿಗುವುದಿಲ್ಲ. ಇನ್ನೂ 50 ದಿನ ಬೇಸಿಗೆ ಕಾಲವಿದೆ. ಆದರೆ ನಾವಿನ್ನೂ ಅರ್ಧದಷ್ಟೂ ಬೆಂಕಿ ನಂದಿಸಿಲ್ಲ. ಸದ್ಯ ಇದು ಕೊನೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಏನಾಗುತ್ತದೆ ಎಂದು ಚಿಂತಿಸಿ ಭಯಪಡಬೇಡ' ಎಂದು ಹೇಳಿರುವುದಾಗಿ ಬರೆದಿದ್ದಾಳೆ.
ಇನ್ನೂ ಮುಂದುವರೆಸಿ ಬರೆದಿರುವ ಜೆನ್ 'ಆಸ್ಟ್ರೇಲಿಯಾ ಸುಡುತ್ತಿದೆ. ಇಲ್ಲಿ ಜಗತ್ತಿನ ಧೈರ್ಯವಂತರು ಸ್ವಯಂಸೇವಕರಾಗಿ ನಮ್ಮ ಜೀವ ಹಾಗೂ ಮನೆ ರಕ್ಷಿಸಲು ಪ್ರತಿದಿನ ಶ್ರಮಿಸುತ್ತಿದ್ದಾರೆ. ಈ ಅಗ್ನಿಶಾಮಕ ಸಿಬ್ಬಂದಿಗೆ ನಮ್ಮ ಆಸರೆ ಬೇಕಿದೆ. ಪ್ರತ್ಯಕ್ಷ ಹಾಗೂ ಪರೋಕ್ಷ ಸೇವೆ ಸಲ್ಲಿಸುತ್ತಿರುವ ಎಲ್ಲರಿಗೂ ನನ್ನ ಧನ್ಯವಾದಗಳು. ಉಳಿದವರಲ್ಲಿ ಕೈಲಾದಷ್ಟು ಸಹಾಯ ಮಾಡಿ ಎಂದು ವಿನಂತಿಸುತ್ತೇನೆ' ಎಂದಿದ್ದಾರೆ.
ಸಿಡ್ನಿಯ ತಾಪಮಾನ ವಿಶ್ವದಲ್ಲೇ ಅಧಿಕ!
ಭಾರತ ಪ್ರವಾಸ ರದ್ದುಗೊಳಿಸಿದ ಆಸಿಸ್ ಪ್ರಧಾನಿ?: ಕಾರಣ ಏನು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ