
ಬೀಜಿಂಗ್ (ಜ.10): ಹುಲಿಯ ಬಾಯಿಂದ ತಪ್ಪಿಕೊಂಡು ಬಂದ ಪುಣ್ಯಕೋಟಿ ಹಸುವಿನ ಕತೆ ನಿಮಗೆಲ್ಲಾ ಗೊತ್ತಿರಬಹುದು. ಅದೇ ರೀತಿಯ ಮನಕಲುಕುವ ಘಟನೆಯೊಂದು ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ನಡೆದಿದೆ.
ತನ್ನನ್ನು ಕಡಿಯಲು ಕರೆದೊಯ್ಯಲಾಗುತ್ತಿದೆ ಎಂದು ಅರಿತ ಗರ್ಭಿಣಿ ಹಸುವೊಂದು ಕೆಲಸಗಾರರ ಮುಂದೆ ಮಂಡಿಯೂರಿ ಕಣ್ಣೀರು ಹಾಕಿದೆ. ಬಳಿಕ ಕಸಾಯಿಖಾನೆಗೆ ಹೋಗಲು ನಿರಾಕರಿಸಿ ಮಂಡಿಯೂರಿ ಕುಳಿತುಕೊಂಡಿತ್ತು.
'ಭಾರತದಲ್ಲಿ ವಿದ್ಯಾರ್ಥಿಗಳಿಗಿಂತ ಹೆಚ್ಚಾಗಿ ಹಸುಗಳಿಗೆ ರಕ್ಷಣೆಯಿದೆ'...
ಹಸುವಿನ ಮೇಲೆ ಕರುಣೆ ತೋರಿದ ಕೆಲಸಗಾರನೊಬ್ಬ ಈ ದೃಶ್ಯವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ನೆರವು ಯಾಚಿಸಿದ್ದ. ಹಸುವಿನ ಆಕ್ರಂದನಕ್ಕೆ ಮರುಗಿದ ಜನರು 2.50 ಲಕ್ಷ ರು. ಸಂಗ್ರಹಿಸಿ ಹಸುವನ್ನು ಕಸಾಯಿಖಾನೆಯಿಂದ ಬಿಡುಗಡೆಗೊಳಿಸಿದ್ದಾರೆ.
1 ವರ್ಷದಲ್ಲಿ ಸಿಎಂ ಆಸ್ತಿಯಲ್ಲಿ ಏರಿಕೆ ಆಗಿದ್ದು ಹಸು, ಕರು ಮಾತ್ರ!..
ಒಂದು ವೇಳೆ ಜನರು ಹಣ ಕೊಟ್ಟು ಹಸುವನ್ನು ಬಿಡುಗಡೆ ಮಾಡದೇ ಇದ್ದಿದ್ದರೆ ಭಾನುವಾರದಂದು ಹಸುವನ್ನು ಕೊಲ್ಲಲಾಗುತ್ತಿತ್ತು ಎಂದು ಕಸಾಯಿಖಾನೆ ಸಿಬ್ಬಂದಿಯೊಬ್ಬರು ಹೇಳಿದ್ದಾರೆ. ಕಸಾಯಿಖಾನೆಯ ಮಾಲೀಕ ಹಸುವನ್ನು ಮಾರಲು ಒಪ್ಪಿದ್ದರಿಂದ ವ್ಯಕ್ತಿಯೊಬ್ಬ ಹಸುವನ್ನು ಕರೆದೊಯ್ದಿದ್ದಾನೆ. ಆ ವೇಳೆಯೂ ಹಸು ಮಂಡಿಯೂರಿ ಮಾಲೀಕನಿಗೆ ತನ್ನ ಕೃತಜ್ಞತೆ ವ್ಯಕ್ತಪಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ