ಬ್ರಿಟನ್‌ ರಾಜಪ್ರಭುತ್ವ ತ್ಯಜಿಸಿದ ಪ್ರಿನ್ಸ್‌ ಹ್ಯಾರಿ-ಮೇಘನ್‌ ದಂಪತಿ

Kannadaprabha News   | Asianet News
Published : Jan 10, 2020, 11:17 AM IST
ಬ್ರಿಟನ್‌ ರಾಜಪ್ರಭುತ್ವ ತ್ಯಜಿಸಿದ ಪ್ರಿನ್ಸ್‌ ಹ್ಯಾರಿ-ಮೇಘನ್‌ ದಂಪತಿ

ಸಾರಾಂಶ

ಬ್ರಿಟನ್‌ ರಾಜಕುಮಾರ ಹ್ಯಾರಿ ಮತ್ತು ಮೇಘನ್‌ ರಾಜ ಪ್ರಭುತ್ವದಿಂದ ಹೊರಬಂದು ಸ್ವತಂತ್ರವಾಗಿ ವಾಸಿಸಲಿದ್ದಾರೆ. ಅಲ್ಲದೇ ತಮ್ಮ ಮುಂದಿನ ಜೀವನವನ್ನು ಬ್ರಿಟನ್‌ ಮತ್ತು ಅಮೆರಿಕದಲ್ಲಿ ಕಳೆಯುವ ಬಗ್ಗೆಯೂ ಸುಳಿವು ನೀಡಿದ್ದಾರೆ. 

ಲಂಡನ್‌ (ಜ.10): ಬ್ರಿಟನ್‌ ರಾಜಕುಮಾರ ಹ್ಯಾರಿ ಮತ್ತು ಮೇಘನ್‌ ದಂಪತಿ ರಾಜ ಪ್ರಭುತ್ವದ ಹಿರಿಯ ಸದಸ್ಯತ್ವ ಸ್ಥಾನವನ್ನು ತ್ಯಜಿಸುತ್ತಿರುವುದಾಗಿ ಪ್ರಕಟಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೆ ದೂಡಿದ್ದಾರೆ. 

ಇನ್ನು ಮುಂದೆ ಬ್ರಿಟನ್‌ ರಾಜಕುಮಾರ ಹ್ಯಾರಿ ಮತ್ತು ಮೇಘನ್‌ ರಾಜ ಪ್ರಭುತ್ವದಿಂದ ಹೊರಬಂದು ಸ್ವತಂತ್ರವಾಗಿ ವಾಸಿಸಲಿದ್ದಾರೆ. ಅಲ್ಲದೇ ತಮ್ಮ ಮುಂದಿನ ಜೀವನವನ್ನು ಬ್ರಿಟನ್‌ ಮತ್ತು ಅಮೆರಿಕದಲ್ಲಿ ಕಳೆಯುವ ಬಗ್ಗೆಯೂ ಸುಳಿವು ನೀಡಿದ್ದಾರೆ. 

ಆದರೆ, ರಾಜ ಪ್ರಭುತ್ವ ಹುದ್ದೆಯಿಂದ ಹೊರ ಬರುವುದಕ್ಕೂ ಮುನ್ನ ಪ್ರಿನ್ಸ್‌ ಮತ್ತು ಮೇಘನ್‌ ದಂಪತಿ ರಾಣಿ ಎಲಿಜಬೆತ್‌-2 ಅವರೊಂದಿಗೆ ಸಮಾಲೋಚನೆಯನ್ನೂ ನಡೆಸಿಲ್ಲ. ಹೀಗಾಗಿ ಬ್ರಿಟನ್‌ ರಾಜಕುಟುಂಬದಲ್ಲಿ ಮನಸ್ಥಾಪ ಉಂಟಾಗಿದೆಯೇ ಎಂಬ ಅನುಮಾನಗಳಿಗೆ ಕಾರಣವಾಗಿದೆ. 

ಕಚ್ಚದಿದ್ರೆ ಚುಂಬಿಸುವೆ: ಪವಿತ್ರ ಚುಂಬನ ಕೋರಿದ ಸನ್ಯಾಸಿನಿಗೆ ಪೋಪ್‌ ಹಾಸ್ಯ!..

ರಾಜಪ್ರಭುತ್ವವನ್ನು ತ್ಯಜಿಸಿದ ಹೊರತಾಗಿಯೂ ರಾಜಕುಮಾರ ಹ್ಯಾರಿ ಆನುವಂಶಿಕವಾಗಿ 91 ಕೋಟಿ ರು. ಆಸ್ತಿಯನ್ನು ಪಡೆದುಕೊಳ್ಳಲಿದ್ದಾರೆ. ಜೊತೆಗೆ ರಾಜಕುಟುಂಬದಿಂದ ಆನುವಂಶಿಕವಾಗಿ ದೊರೆಯಲಿರುವ ಇತರ ಎಲ್ಲಾ ಸೌಲಭ್ಯಗಳೂ ಲಭಿಸಲಿವೆ. ಜೊತೆಗೆ ಅವರ ಭದ್ರತೆಗೆ ಸಂಬಂಧ ಖರ್ಚು ವೆಚ್ಚಗಳನ್ನು ರಾಜಕುಟುಂಬವೇ ಭರಿಸಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭಾರತೀಯರ ಎಚ್‌-1ಬಿ ವೀಸಾ ಸಂದರ್ಶನ ದಿಢೀರ್‌ ರದ್ದು : ಕಿಡಿ
ಯುನೆಸ್ಕೋ ಪರಂಪರೆ ಪಟ್ಟಿಗೆ ದೀಪಾವಳಿ ಸೇರ್ಪಡೆ!