ತರಗುಟ್ಟುವ ಚಳಿ: ರಸ್ತೆಬದಿ ಮಲಗಿದ್ದ ನಿರ್ಗತಿಕ ಮಹಿಳೆ ಮೇಲೆ ನೀರೆರಚಿದ ಕ್ರೂರಿ

By Anusha KbFirst Published Jan 11, 2023, 6:20 PM IST
Highlights

ಒಳ್ಳೆಯದು ಮಾಡಲಾಗದಿದ್ದರೂ ಕೆಟ್ಟದು ಮಾಡಬಾರದು ಎಂಬ ಮಾತಿದೆ. ಆದರೆ ಪ್ರಪಂಚದಲ್ಲಿ ತಮಗೇನು ಅನ್ಯಾಯ ಮಾಡದಿದ್ದರೂ ಬೇರೆಯವರಿಗೆ ಕೆಟ್ಟದು ಮಾಡಿ ಖುಷಿ ಪಡುವವರ ಸಂಖ್ಯೆಯೇ ಹೆಚ್ಚು ಅದೇ ರೀತಿ ಇಲ್ಲೊಂದು ಕಡೆ ವ್ಯಕ್ತಿಯೋರ್ವ ಮನೆಯಿಲ್ಲದ ನಿರ್ಗತಿಕ ಮಹಿಳೆಯ ಮೇಲೆ ನೀರೆರಚಿ ಅನ್ಯಾಯ ಮಾಡಿದ್ದಾನೆ.

ಸ್ಯಾನ್ ಫ್ರಾನ್ಸಿಸ್ಕೋ: ಒಳ್ಳೆಯದು ಮಾಡಲಾಗದಿದ್ದರೂ ಕೆಟ್ಟದು ಮಾಡಬಾರದು ಎಂಬ ಮಾತಿದೆ. ಆದರೆ ಪ್ರಪಂಚದಲ್ಲಿ ತಮಗೇನು ಅನ್ಯಾಯ ಮಾಡದಿದ್ದರೂ ಬೇರೆಯವರಿಗೆ ಕೆಟ್ಟದು ಮಾಡಿ ಖುಷಿ ಪಡುವವರ ಸಂಖ್ಯೆಯೇ ಹೆಚ್ಚು ಅದೇ ರೀತಿ ಇಲ್ಲೊಂದು ಕಡೆ ವ್ಯಕ್ತಿಯೋರ್ವ ಮನೆಯಿಲ್ಲದ ನಿರ್ಗತಿಕ ಮಹಿಳೆಯ ಮೇಲೆ ನೀರೆರಚಿ ಅನ್ಯಾಯ ಮಾಡಿದ್ದಾನೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.  ಅಂದಹಾಗೆ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಈ ಘಟನೆ ನಡೆದಿದೆ.

ಹೇಳಿಕೇಳಿ ಅಮೆರಿಕಾದಲ್ಲಿ ಈಗ ವಿಪರೀತ ಚಳಿ ಇದೆ. ಇಲ್ಲಿನ ಚಳಿಯ ತೀವ್ರತೆ ಹೇಗಿದೆ ಎಂದರೆ ಇಲ್ಲಿನ ಸುಪ್ರಸಿದ್ಧ ನಯಾಗಾರ ಜಲಪಾತವೇ ಭಾಗಶಃ ಗಟ್ಟಿಯಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಶತಮಾನದಿಂದ ಕಂಡು ಕೇಳರಿಯದ ಈ ವಿಪರೀತ ಚಳಿ ಹಾಗೂ ಹಿಮಪಾತದಿಂದ ಈಗಾಗಲೇ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಇದರ ಜೊತೆಗೆ ಪ್ರಾಣಿಗಳು ಕೂಡ ಸಂಕಷ್ಟಪಡುತ್ತಿವೆ.   ಮನೆಯ ಒಳಗೆ ಇರುವವರೇ ಚಳಿಯನ್ನು ತಡೆದುಕೊಳ್ಳಲಾಗದಂತಹ ಸ್ಥಿತಿಯಲ್ಲಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಮನೆ ಇಲ್ಲದೇ ರಸ್ತೆ ಬದಿ ಚಳಿಯಿಂದ ಬಸವಳಿಯುತ್ತಾ ರಸ್ತೆ ಬದಿ ಮುದುಡಿ ಕುಳಿತಿದ್ದ ನಿರ್ಗತಿಕ ಮಹಿಳೆ (Homeless Woman) ಮೇಲೆ  ವ್ಯಕ್ತಿಯೊಬ್ಬ ಪೈಪ್‌ನಿಂದ ನೀರು ಎರಚಿ ಕರುಣೆ ಇಲ್ಲದಂತೆ ವರ್ತಿಸಿದ್ದಾನೆ. ಈತನ ಈ ಕ್ರೌರ್ಯದ ವಿಡಿಯೋ ನೋಡಿದ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಹೀಗೆ ಮಹಿಳೆಯ ಮೇಲೆ ನೀರೆರಚಿದ ವ್ಯಕ್ತಿಯನ್ನು  ಕೊಲಿಯರ್ ಗ್ವಿನ್ (Collier Gwin) ಎಂದು ಗುರುತಿಸಲಾಗಿದೆ.  ಈತನೋರ್ವ ಆರ್ಟ್ ಗ್ಯಾಲರಿಯ ಮಾಲಕನಾಗಿದ್ದಾನೆ.  ಅಲ್ಲದೇ ಈ ಘಟನೆಯನ್ನು ಆತ ಸಮರ್ಥಿಸಿಕೊಂಡಿದ್ದು, ಕ್ಷಮೆ ಕೇಳಲು ನಿರಾಕರಿಸಿದ್ದಾನೆ.  ಆದರೆ ಸಾಮಾಜಿಕ ಜಾಲತಾಣ (Social Media) ಬಳಕೆದಾರರು ಈತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ವಿಡಿಯೋದಲ್ಲಿ ಕಾಣಿಸುವಂತೆ ರಸ್ತೆ ಬದಿ ಮುದುಡಿ ಮಲಗಿದ್ದ ಮಹಿಳೆಯ ಮುಖದ ಮೇಲೆಯೇ ನೇರವಾಗಿ ಈ ಕ್ರೂರಿ ಪೈಪ್ ಮೂಲಕ ನೀರು ಹಿಡಿಯುತ್ತಿದ್ದಾನೆ. ಈ ವೇಳೆ ಮಹಿಳೆ ಕೈಯನ್ನು ಅಡ್ಡ ಹಿಡಿದು ಆ ರೀತಿ ಮಾಡದಂತೆ ಈ ಸ್ಥಳದಿಂದ ತಾನು ಹೊರಟು ಹೋಗುತ್ತೇನೆ ಎಂದು ಮನವಿ ಮಾಡುತ್ತಾಳಾದರೂ ಆತ ನೀರು ಎರಚುವುದನ್ನು ನಿಲ್ಲಿಸಿಲ್ಲ. ಇದರಿಂದ ಆಕೆಯ ಬಟ್ಟೆ ಹೊದಿಕೆ ಎಲ್ಲವೂ ನೀರಿನಲ್ಲಿ ತೇವವಾಗುತ್ತದೆ. 

ಹಿಮಪಾತಕ್ಕೆ ಶೋ ಪೀಸ್‌ನಂತಾದ ಕಾರ್ ವಾಶಿಂಗ್ ಸೆಂಟರ್: ವಿಡಿಯೋ ವೈರಲ್

ಘಟನೆಯನ್ನು ಇದೇ ಸ್ಥಳದಲ್ಲಿ (cafe) ಕೆಫೆಯೊಂದನ್ನು ಹೊಂದಿರುವ ಈಡ್ಸನ್ ಗ್ರೇಸಿಯಾ (Edson Garcia) ಎಂಬುವವರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.  ನಾನು ಆ ಕಡೆ ತಿರುಗಿದಾಗ ವ್ಯಕ್ತಿಯೊಬ್ಬ ಮಹಿಳೆ ಮೇಲೆ ನೀರು ಎರಚುತ್ತಿರುವುದು ಕಾಣಿಸಿತು ಎಂದು ಅವರು ಮಾಧ್ಯಮವೊಂದಕ್ಕೆ ಹೇಳಿದ್ದಾರೆ. 

ಇಲ್ಲಿ ತುಂಬಾ ಮಳೆ ಹಾಗೂ ಶೀತ ವಾತಾವರಣವಿದ್ದು,  ನೀರೆರಚಿದಾಗ ಆಕೆ ಇಲ್ಲಿಂದ ಹೊರಟು ಹೋಗುವೆ ಎಂದು ಹೇಳುತ್ತಾಳೆ.  ಜನರು ಈ ರೀತಿ ಕರುಣೆ ಇಲ್ಲದೇ ವರ್ತಿಸುವುದನ್ನು ನೋಡಲು ಬೇಸರವಾಗುತ್ತಿದೆ ಎಂದು ಅವರು ಹೇಳಿದ್ದಾರೆ.  ಆದರೆ ಗ್ಯಾಲರಿ ಮಾಲೀಕ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿದ್ದು, ಆಕೆ ಕಳೆದ ಎರಡು ವಾರಗಳಿಂದ ಇಲ್ಲೇ ವಾಸವಿದ್ದಾಳೆ. ಆಕೆಗೆ ನಾನು ತುಂಬಾ ಸಲ ಇಲ್ಲಿಂದ ಹೊರಟು ಹೋಗುವಂತೆ, ಹಾಗೂ ನನ್ನ ಗ್ಯಾಲರಿ ದಾರಿಯಲ್ಲಿ ಇರದಂತೆ ಹೇಳಿದೆ.  ಆದರೆ ಆಕೆ ಅಲ್ಲಿಂದ ಹೋಗುವುದು ಕಾಣಿಸಿಲ್ಲ ಎಂದು ಹೇಳಿಕೊಂಡಿದ್ದಾನೆ. ಅಲ್ಲದೇ ಆ ಮಹಿಳೆ ತುಂಬಾ ಗಲಾಟೆ ಮಾಡುತ್ತಿದ್ದಿದ್ದಾಗಿಯೂ ಆತ ಹೇಳಿದ್ದಾನೆ.  ಆದರೆ ಈ ವಿಡಿಯೋವನ್ನು 7 ಮಿಲಿಯನ್‌ಗೂ ಅಧಿಕ ಜನ ವೀಕ್ಷಿಸಿದ್ದು,  ಅನೇಕರು  ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಅಮೆರಿಕಾದಲ್ಲಿ ಹಿಮಪಾತಕ್ಕೆ ತತ್ತರಿಸಿದ ಪ್ರಾಣಿಗಳು: ವಿಡಿಯೋ ವೈರಲ್

San Francisco pic.twitter.com/n6XU5CMvQa

— Clown World ™ 🤡 (@ClownWorld_)

 

click me!