ಕೋವಿಶೀಲ್ಡ್‌ ಲಸಿಕೆ ಪಡೆದವರಿಗೊಂದು ಗುಡ್‌ನ್ಯೂಸ್: ಅಧ್ಯಯನದಲ್ಲಿ ಅಚ್ಚರಿಯ ಮಾಹಿತಿ ಬಯಲು!

Published : May 24, 2021, 12:11 PM ISTUpdated : May 24, 2021, 12:49 PM IST
ಕೋವಿಶೀಲ್ಡ್‌ ಲಸಿಕೆ ಪಡೆದವರಿಗೊಂದು ಗುಡ್‌ನ್ಯೂಸ್: ಅಧ್ಯಯನದಲ್ಲಿ ಅಚ್ಚರಿಯ ಮಾಹಿತಿ ಬಯಲು!

ಸಾರಾಂಶ

* ಡಬಲ್‌ ಮ್ಯುಟೆಂಟ್‌ ವೈರಸ್‌ಗೆ ಕೋವಿಶೀಲ್ಡ್‌ ಪರಿಣಾಮಕಾರಿ * ಫೈಝರ್‌/ಬಯೋಎನ್‌ಟೆಕ್‌, ಕೋವಿಶೀಲ್ಡ್‌ನಿಂದ ರಕ್ಷಣೆ *  ಎರಡೂ ಡೋಸ್‌ ಪಡೆದಲ್ಲಿ ಉತ್ತಮ: ಬ್ರಿಟನ್‌ ಅಧ್ಯಯನ

ಲಂಡನ್‌(ಮೇ.24): ಭಾರತದಲ್ಲಿ ಮೊದಲು ಪತ್ತೆಯಾದ ಹಾಗೂ ಶರವೇಗದಲ್ಲಿ ಹಬ್ಬುವ ಮೂಲಕ ಆತಂಕ ಮೂಡಿಸಿರುವ ‘ಡಬಲ್‌ ಮ್ಯುಟೆಂಟ್‌’ (ಬಿ1.617.2) ಕೊರೋನಾ ವೈರಸ್‌ಗೆ ಕೋವಿಡ್‌ ಲಸಿಕೆಯ ಎರಡು ಡೋಸ್‌ಗಳು ಅತ್ಯಂತ ಪರಿಣಾಮಕಾರಿ ಎಂದು ಇದೇ ಮೊದಲ ಬಾರಿಗೆ ಅಧ್ಯಯನವೊಂದರಲ್ಲಿ ಸಾಬೀತಾಗಿದೆ.

ಫೈಝರ್‌/ಬಯೋಎನ್‌ಟೆಕ್‌ ಕಂಪನಿಯ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದ ಎರಡು ವಾರಗಳ ಬಳಿಕ ಡಬಲ್‌ ಮ್ಯುಟೆಂಟ್‌ ಸೋಂಕಿನಿಂದ ಶೇ.88ರಷ್ಟುರಕ್ಷಣೆ ದೊರೆಯುತ್ತದೆ. ಆಕ್ಸ್‌ಫರ್ಡ್‌/ಆಸ್ಟ್ರಾಜೆನೆಕಾ ಕಂಪನಿಯ (ಭಾರತದಲ್ಲಿ ಕೋವಿಶೀಲ್ಡ್‌) ಲಸಿಕೆಯಿಂದ ಶೇ.60ರಷ್ಟುರಕ್ಷಣೆ ಸಿಗುತ್ತದೆ ಎಂದು ಬ್ರಿಟನ್‌ನ ಆರೋಗ್ಯ ಅಧಿಕಾರಿಗಳು ನಡೆಸಿರುವ ಅಧ್ಯಯನ ವಿವರಿಸಿದೆ.

ಸ್ಫುಟ್ನಿಕ್ ಲಸಿಕೆ ಪ್ರವಾಸ, ರಷ್ಯಾಗೆ ಹೋಗಿ ವ್ಯಾಕ್ಸಿನ್ ಹಾಕಿಸಿಕೊಂಡು ಬನ್ನಿ!

ಆದರೆ ಈ ಲಸಿಕೆಗಳ ಒಂದೇ ಡೋಸ್‌ ಪಡೆದವರಲ್ಲಿ ಡಬಲ್‌ ಮ್ಯುಟೆಂಟ್‌ನಿಂದ ಕೇವಲ ಶೇ.33ರಷ್ಟುರಕ್ಷಣೆ ದೊರೆಯುತ್ತದೆ ಎಂದು ತಿಳಿಸಿದೆ.

ಈ ಅಧ್ಯಯನವನ್ನು ಐತಿಹಾಸಿಕ ಎಂದು ಬ್ರಿಟನ್‌ ಆರೋಗ್ಯ ಸಚಿವ ಮ್ಯಾಟ್‌ ಹ್ಯಾಂಕಾಕ್‌ ಬಣ್ಣಿಸಿದ್ದಾರೆ. ನಾವು ಪ್ರೀತಿಸುವ ಜನರನ್ನು ರಕ್ಷಿಸುವಲ್ಲಿ ನಮ್ಮ ಕೋವಿಡ್‌ ಲಸಿಕೆ ಅಭಿಯಾನ ಎಷ್ಟುಮೌಲ್ಯಯುತವಾಗಿದೆ ಎಂಬುದನ್ನು ಅಧ್ಯಯನ ನಿರೂಪಿಸಿದೆ. ಅಲ್ಲದೆ ಕೊರೋನಾದಿಂದ ರಕ್ಷಣೆ ಪಡೆಯಲು ಎರಡನೇ ಡೋಸ್‌ ಎಷ್ಟುಮಹತ್ವದ್ದು ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಎಲ್ಲರೂ ಲಸಿಕೆ ಪಡೆಯಿರಿ ಎಂದು ತಿಳಿಸಿದ್ದಾರೆ.

ಸ್ಫುಟ್ನಿಕ್ ಲಸಿಕೆ ಪ್ರವಾಸ, ರಷ್ಯಾಗೆ ಹೋಗಿ ವ್ಯಾಕ್ಸಿನ್ ಹಾಕಿಸಿಕೊಂಡು ಬನ್ನಿ!

ಮತ್ತೊಂದೆಡೆ, ಕೋವಿಡ್‌ ಲಸಿಕಾ ಅಭಿಯಾನದಿಂದ ಮೇ 9ರವರೆಗೆ ಬ್ರಿಟನ್‌ನಲ್ಲಿ 13 ಸಾವಿರ ಮಂದಿಯ ಸಾವು ಹಾಗೂ 39100 ವಯೋವೃದ್ಧರು ಆಸ್ಪತ್ರೆ ಸೇರುವುದು ತಪ್ಪಿದೆ ಎಂದು ತಜ್ಞರ ಅಧ್ಯಯನ ವಿವರಿಸಿದೆ.

ಯಾವ ಲಸಿಕೆ ಎಷ್ಟುರಕ್ಷಣೆ?

ಲಸಿಕೆ  1 ಡೋಸ್‌2 ಡೋಸ್‌
ಫೈಝರ್‌  ಶೇ.33 ಶೇ.88
ಕೋವಿಶೀಲ್ಡ್‌ಶೇ.33ಶೇ.60

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭೂಕಂಪದ ಬೆನ್ನಲ್ಲೇ ಜಪಾನ್‌ನಲ್ಲಿ ಸುನಾಮಿ ಎಚ್ಚರಿಕೆ, ಭಾರತದ ಕರಾವಳಿ ಪ್ರದೇಶಕ್ಕಿದೆಯಾ ಆತಂಕ?
ಪ್ರದರ್ಶನದ ವೇಳೆ ಝೂನಲ್ಲಿ ಆರೈಕೆ ಮಾಡ್ತಿದ್ದವರ ಮೇಲೆಯೇ ಕರಡಿ ಅಟ್ಯಾಕ್: ವೀಡಿಯೋ