
ಜಿನೆವಾ(ಮೇ.23): ಕೊರೋನಾ ವೈರಸ್ ಸೋಂಕಿನಿಂದ ಈವರೆಗೆ ವಿಶ್ವಾದ್ಯಂತ 34 ಲಕ್ಷ ಮಂದಿ ಬಲಿಯಾಗಿದ್ದಾರೆ. ಆದರೆ ನೈಜ ಸಾವಿನ ಸಂಖ್ಯೆ ಇದಕ್ಕಿಂತ 2ರಿಂದ 3 ಪಟ್ಟು ಅಧಿಕವಾಗಿರಬಹುದು. ಹಲವು ಸಾವುಗಳು ವರದಿಯಾಗಿರುವ ಸಾಧ್ಯತೆ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ. ಈ ಮೂಲಕ ನೈಜ ಸಾವಿನ ಸಂಖ್ಯೆ 1 ಕೋಟಿ ದಾಟಿರಬಹುದು ಎಂಬ ಸಂದೇಹ ವ್ಯಕ್ತಪಡಿಸಿದೆ.
WHO ಲಿಸ್ಟ್‌ನಲ್ಲಿಲ್ಲ ಕೊವ್ಯಾಕ್ಸೀನ್: ಭಾರತೀಯರ ವಿದೇಶ ಪ್ರಯಾಣಕ್ಕೆ ಕುತ್ತು
2020ನೇ ಇಸ್ವಿಯಲ್ಲಿ ಕೋವಿಡ್‌ನಿಂದ 18 ಲಕ್ಷ ಮಂದಿ ಸಾವಿಗೀಡಾಗಿದ್ದಾರೆ ಎಂದು ಅಧಿಕೃತ ಅಂಕಿ-ಸಂಖ್ಯೆಗಳು ಹೇಳುತ್ತವೆ. ಆದರೆ ನೈಜ ಸಾವಿನ ಸಂಖ್ಯೆ 30 ಲಕ್ಷಕ್ಕಿಂತ ಅಧಿಕವಾಗಿರಬಹುದು. ಅದರೆ 12 ಲಕ್ಷ ಅಧಿಕ ಸಾವು ಸಂಭವಿಸಿರಬಹುದು ಎಂದು ವಾರ್ಷಿಕ ವಿಶ್ವ ಆರೋಗ್ಯ ಸಂಖ್ಯಾ ವರದಿಯನ್ನು ಬಿಡುಗಡೆ ಮಾಡಿ ಡಬ್ಲು ್ಯಎಚ್‌ಒ ಹೇಳಿದೆ.
2021ರ ಮೇ 20ರವರೆಗೆ ವಿಶ್ವಾದ್ಯಂತ 34 ಲಕ್ಷ ಮಂದಿ ಬಲಿಯಾಗಿದ್ದಾರೆ. ಆದರೆ ನೈಜ ಸಂಖ್ಯೆ ಇನ್ನೂ ಹೆಚ್ಚಿರಬಹುದು. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕೋವಿಡ್‌ಗೆ ಬಲಿಯಾದವರ ಲೆಕ್ಕ ಸಿಗುತ್ತಿಲ್ಲ ಎಂದು ತಿಳಿಸಿದೆ.
ಕೊರೋನಾ ಅಬ್ಬರ ಮಧ್ಯೆ ಲಸಿಕೆ ಪಡೆದವರಿಗೊಂದು ಶುಭ ಸಮಾಚಾರ!
ಲ್ಯಾಟಿನ್ ಅಮೆರಿಕ ಹಾಗೂ ಏಷ್ಯಾದಲ್ಲಿ ರೂಪಾಂತರಿ ಕೊರೋನಾದಿಂದ ಸಾವು ಅಧಿಕವಾಗಿದೆ. ಹೀಗಾಗಿ ನೈಜ ಸಾವಿನ ಸಂಖ್ಯೆ 2ರಿಂದ 3 ಪಟ್ಟು ಅಧಿಕವಿರುತ್ತದೆ ಎಂದು ಡಬ್ಲು ್ಯಎಚ್‌ಒ ಸಹಾಯಕ ಮಹಾನಿರ್ದೇಶಕ ಸಮೀರಾ ಆಸ್ಮಾ ತಿಳಿಸಿದ್ದಾರೆ.
ಹಲವು ದೇಶಗಳಲ್ಲಿ ಕೋವಿಡ್ ಸಾವಿನ ಸಂಖ್ಯೆ ನಮೂದಿಸಲು ವಿಶ್ವಾಸಾರ್ಹ ವ್ಯವಸ್ಥೆ ಇಲ್ಲ. ಇನ್ನೂ ಹಲವು ಪ್ರಕರಣಗಳಲ್ಲಿ ಕೋವಿಡ್ ಪರೀಕ್ಷೆ ನಡೆಸುವ ಮುನ್ನವೇ ಜನರು ಸಾವಿಗೀಡಾಗಿರುತ್ತಾರೆ. ಆಸ್ಪತ್ರೆ ಸೌಲಭ್ಯ ಇಲ್ಲದ ಕಾರಣ, ಜನ ಸಂಚಾರಕ್ಕೆ ನಿರ್ಬಂಧ ಕಾರಣ ಸೂಕ್ತ ವೈದ್ಯಕೀಯ ಸೌಲಭ್ಯ ಸಿಗದೆ ಕೂಡ ಸಾವು ಸಂಭವಿಸಿವೆ ಎಂದು WHO ತಜ್ಞರು ತಿಳಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ