ನಮ್ಮ ಲಸಿಕೆ ಫೈಜರ್‌ಗಿಂತ ಕಮ್ಮಿ ಏನೂ ಅಲ್ಲ, ನಮ್ಮನ್ನೇಕೆ ಟಾರ್ಗೆಟ್‌ ಮಾಡಲಾಗುತ್ತಿದೆ?

Published : Jan 05, 2021, 08:43 AM IST
ನಮ್ಮ ಲಸಿಕೆ ಫೈಜರ್‌ಗಿಂತ ಕಮ್ಮಿ ಏನೂ ಅಲ್ಲ, ನಮ್ಮನ್ನೇಕೆ ಟಾರ್ಗೆಟ್‌ ಮಾಡಲಾಗುತ್ತಿದೆ?

ಸಾರಾಂಶ

ನಮ್ಮ ಲಸಿಕೆ ಫೈಜರ್‌ಗಿಂತ ಕಮ್ಮಿ ಏನೂ ಅಲ್ಲ| ಮ್ಮನ್ನೇಕೆ ಟಾರ್ಗೆಟ್‌ ಮಾಡಲಾಗುತ್ತಿದೆ?| ವಿದೇಶೀ ದತ್ತಾಂಶ ಆಧರಿಸಿ ವಿದೇಶಿ ಲಸಿಕೆಗೆ ಅನುಮತಿ ಏಕೆ?| ಲಸಿಕೆ ಟ್ರಯಲ್‌ ಬಗ್ಗೆ 5 ಲೇಖನ ಮುದ್ರಿಸಿದ್ದೇವೆ| ಫೆಬ್ರವರಿ-ಮಾಚ್‌ರ್‍ನಲ್ಲಿ 3ನೇ ಹಂತದ ಕೋವ್ಯಾಕ್ಸಿನ್‌ ಲಸಿಕೆ ದತ್ತಾಂಶ| ವಿಜ್ಞಾನಿಗಳ ಮೇಲಿನ ಟೀಕೆಯಿಂದ ನೋವಾಗಿದೆ: ಭಾರತ್‌ ಬಯೋಟೆಕ್‌ ಮುಖ್ಯಸ್ಥ| ವಿಜ್ಞಾನಿಗಳ ಮೇಲೆ ಕಲ್ಲೆಸೆತದಿಂದ ನೋವು: ಬೇಸರ

ಹೈದರಾಬಾದ್‌(ಜ.05): ಭಾರತ್‌ ಬಯೋಟೆಕ್‌ನ ‘ಕೋವ್ಯಾಕ್ಸಿನ್‌’ ಕೊರೋನಾ ಲಸಿಕೆಯ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿರುವ ಬಗ್ಗೆ ಸೃಷ್ಟಿಯಾಗಿರುವ ವಿವಾದಕ್ಕೆ ಕಂಪನಿ ಸಂಸ್ಥಾಪಕ ಅಧ್ಯಕ್ಷ ಡಾ

ಕೃಷ್ಣ ಎಲ್ಲಾ ದಿಟ್ಟತಿರುಗೇಟು ನೀಡಿದ್ದಾರೆ. ‘ಕೇವಲ ಭಾರತದ ಕಂಪನಿಗಳನ್ನಷ್ಟೇ ಏಕೆ ಟಾರ್ಕೆಟ್‌ ಮಾಡಲಾಗುತ್ತಿದೆ? ಬ್ರಿಟನ್‌ನಲ್ಲಿ ನಡೆದ ಟ್ರಯಲ್‌ನ ದತ್ತಾಂಶ ಆಧರಿಸಿ, ಕಂಪನಿಯೊಂದಕ್ಕೆ ಏಕೆ ಭಾರತದಲ್ಲಿ ಲಸಿಕೆಗೆ ಅನುಮೋದನೆ ನೀಡಲಾಗಿದೆ?’ ಎಂದು ಪ್ರಶ್ನಿಸಿದ್ದಾರೆ.

‘ಕೋವ್ಯಾಕ್ಸಿನ್‌’ ಲಸಿಕಾ ಪ್ರಯೋಗದ 3ನೇ ಹಂತವೇ ಇನ್ನೂ ಮುಗಿದಿಲ್ಲ. ಆಗಲೇ ಅದಕ್ಕೆ ಅನುಮತಿ ಏಕೆ’?’ ಎಂದು ಕೆಲವು ಪ್ರತಿಪಕ್ಷಗಳು ಪ್ರಶ್ನಿಸಿದ್ದವು. ಈ ಸಂಬಂಧ ಆನ್‌ಲೈನ್‌ನಲ್ಲಿ ಸೋಮವಾರ ಸಂಜೆ ಸುದ್ದಿಗೋಷ್ಠಿ ನಡೆಸಿ ಉತ್ತರಿಸಿದ ಡಾ

ಕೃಷ್ಣ, ‘ಕೆಲವು ಜನರು ಭಾರತೀಯ ಕಂಪನಿಗಳ ವಿರುದ್ಧ ಮಾತನಾಡುತ್ತಿದ್ದಾರೆ. ವಿಶ್ವದಲ್ಲೂ ಹೀಗಾಗುತ್ತಿದೆ. ಏಕೆ ಎಂದು ತಿಳಿಯುತ್ತಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯೇ ಲೈಬೀರಿಯಾ ಹಾಗೂ ಗಿನಿಯಾದಲ್ಲಿ ಪ್ರಯೋಗ ಪೂರ್ಣಗೊಳ್ಳದ ಎಬೋಲಾ ಲಸಿಕೆಗೆ ಅನುಮತಿ ನೀಡಿರಲಿಲ್ಲವೇ? ಆಸ್ಟ್ರಾಜನೆಕಾವನ್ನೇಕೆ ಜನ ಪ್ರಶ್ನಿಸುತ್ತಿಲ್ಲ’ ಎಂದು ಪ್ರಶ್ನಿಸಿದರು.

‘3ನೇ ಹಂತದ ಲಸಿಕೆ ಪ್ರಯೋಗದ ಬಗ್ಗೆ ಫೆಬ್ರವರಿ-ಮಾಚ್‌ರ್‍ನಲ್ಲಿ ದತ್ತಾಂಶ ಬಿಡುಗಡೆ ಮಾಡಲಿದ್ದೇವೆ. ಮಕ್ಕಳ ಮೇಲೂ ಲಸಿಕೆ ಪ್ರಯೋಗ ನಡೆಸುತ್ತಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

‘ಅಮೆರಿಕ, ಬ್ರಿಟನ್‌ನಲ್ಲಿ ಅನುಮೋದನೆ ಪಡೆದ ಫೈಜರ್‌ ಲಸಿಕೆಗಿಂತ ನಮ್ಮ ಲಸಿಕೆ ಕಮ್ಮಿ ಏನೂ ಅಲ್ಲ. ನಾವೂ ಕೂಡ ಜಾಗತಿಕ ಕಂಪನಿ. 12 ದೇಶಗಳಲ್ಲಿ ಕ್ಲಿನಿಕಲ್‌ ಟ್ರಯಲ್‌ ನಡೆಸಿದ್ದೇವೆ. ಇದರಲ್ಲಿ ಬ್ರಿಟನ್‌, ಪಾಕಿಸ್ತಾನ, ನೇಪಾಳ, ಬಾಂಗ್ಲಾ ಕೂಡ ಸೇರಿವೆ’ ಎಂದರು.

‘ನಾವು ದತ್ತಾಂಶ ಪಾರದರ್ಶಕವಾಗಿ ನೀಡುತ್ತಿಲ್ಲ ಎಂಬ ಆರೋಪವಿದೆ. ಭಾರತ್‌ ಬಯೋಟೆಕ್‌ ಕೋವಿಡ್‌-19 ಲಸಿಕೆ ಪ್ರಕ್ರಿಯೆಯ ಬಗ್ಗೆ 5 ಲೇಖನಗಳನ್ನು ಹೊರತಂದಿದೆ. ವಿವಿಧ ಅಂತಾರಾಷ್ಟ್ರೀಯ ನಿಯತಕಾಳಿಕೆಗಳಲ್ಲಿ 70 ಲೇಖನ ಬರೆದಿದ್ದೇವೆ’ ಎಂದು ಉತ್ತರಿಸಿದರು.

ಕೆಲವು ರಾಜಕೀಯ ಪಕ್ಷಗಳು ಮಾಡಿದ ಆರೋಪಕ್ಕೆ ತಿರುಗೇಟು ನೀಡಿದ ಅವರು, ‘ನಮ್ಮವರಾರೂ ರಾಜಕೀಯದಲ್ಲಿಲ್ಲ. 16 ಲಸಿಕೆ ತಯಾರಿಸಿದ ಕಂಪನಿ ನಮ್ಮದು. ವಿಜ್ಞಾನಿಗಳತ್ತ ಕಲ್ಲೆಸೆಯುವುದು ನೋವು ತರಿಸುತ್ತಿದೆ. ನಾವು ಅಷ್ಟುನಿಕೃಷ್ಟರೇ?’ ಎಂದು ಬೇಸರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿಂಧೂ ನೀರಿಲ್ಲದೆ 24 ಕೋಟಿ ಜನಕ್ಕೆ ಸಂಕಷ್ಟ : ಪಾಕ್‌ ಗೋಳು
ಗ್ರೀನ್‌ಲ್ಯಾಂಡ್‌ ವಶಕ್ಕೆ ಬಲಪ್ರಯೋಗ ಮಾಡಲ್ಲ: ಟ್ರಂಪ್‌