ಪಾಕ್ ಮಹಿಳೆಯರಿಗೆ ಮಲಾಲ ಯೂಸಫ್ ಸ್ಕಾಲರ್‌ಶಿಪ್ ಕಾಯ್ದೆ ಪಾಸ್ ಮಾಡಿದ ಅಮೆರಿಕ!

Published : Jan 04, 2021, 06:45 PM ISTUpdated : Jan 04, 2021, 06:47 PM IST
ಪಾಕ್ ಮಹಿಳೆಯರಿಗೆ ಮಲಾಲ ಯೂಸಫ್ ಸ್ಕಾಲರ್‌ಶಿಪ್ ಕಾಯ್ದೆ ಪಾಸ್ ಮಾಡಿದ ಅಮೆರಿಕ!

ಸಾರಾಂಶ

ಅಮೆರಿಕ ಕಾಂಗ್ರೆಸ್  ವಿಶೇಷ ಕಾಯ್ದೆ ಪಾಸ್ ಮಾಡಿದೆ. ಪಾಕಿಸ್ತಾನ ಮಹಿಳೆಯರಿಗೆ ಉನ್ನತ ಶಿಕ್ಷಣ ಪಡೆಯಲು ಮಲಾಲ ಯೂಸುಫ್ ಝಾಯಿ ವಿದ್ಯಾರ್ಥಿ ವೇತನ ವಿಸ್ತರಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.  

ವಾಶಿಂಗ್ಟನ್(ಜ.04): ಪಾಕಿಸ್ತಾನ ಮಹಿಳೆಯರಿಗೆ ಉನ್ನತ ಶಿಕ್ಷಣ ಪಡೆಯಲು ಯೂಸುಫ್ ಝಾಯಿ ಮಲಾಲ ವಿದ್ಯಾರ್ಥಿ ವೇತನ ಕಾಯ್ದೆಯನ್ನು ಅಮೆರಿಕ ಕಾಂಗ್ರೆಸ್ ಪಾಸ್ ಮಾಡಿದೆ.  ಅರ್ಹತೆ ಮತ್ತು ಅಗತ್ಯ ಆಧಾರಿತ ಕಾರ್ಯಕ್ರಮದಡಿಯಲ್ಲಿ ಉನ್ನತ ಶಿಕ್ಷಣ ಪಡೆಯಲು ಲಭ್ಯವಿರುವ ವಿದ್ಯಾರ್ಥಿವೇತನದ ಸಂಖ್ಯೆಯನ್ನು ಅಮೆರಿಕ ವಿಸ್ತರಿಸುತ್ತಿದೆ.

ಮಲಾಲಾಗೆ ಗುಂಡು ಹಾರಿಸಿದ್ದ ತಾಲಿಬಾನ್‌ ಉಗ್ರ ಜೈಲಿಂದ ಎಸ್ಕೇಪ್‌

ಅಮೆರಿಕ ಕಾಂಗ್ರೆಸ್ ಪಾಸ್ ಮಾಡಿದ ಈ ಮಸೂದೆ ಇದೀಗ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸಹಿ ಹಾಕಿದ ಬಳಿಕ ಕಾನೂನಾಗಿ ಜಾರಿಯಾಗಲಿದೆ. ಇದಕ್ಕಾಗಿ ಈ ಮಸೂದೆಯನ್ನು ಶ್ವೇತಭವನಕ್ಕೆ ಕಳುಹಿಸಲಾಗಿದೆ.  2020ರ ಮಾರ್ಚ್ ತಿಂಗಲಲ್ಲಿ ಹೌಸ್ ಆಫ್ ರೆಪ್ರಸೆಂಟೇಟೀವ್ಸ್ ಅಂಗೀಕರಿಸಿದ ಸ್ಕಾಲರ್‌ಶಿಪ್ ಮಸೂದೆಯನ್ನು ಯುಎಸ್ ಸೆನೆಟ್ ಹೊಸ ವರ್ಷದ ಮೊದಲ ದಿನವೇ ಧ್ವನಿ ಮತದ ಮೂಲಕ ಅಂಗೀಕರಿಸಿತ್ತು.

ಪಾಕಿಸ್ತಾನ ಮಹಿಳೆಯರಿಗೆ ಈ ಸ್ಕಾಲರ್‌ಶಿಪ್ ಅಡಿಯಲ್ಲಿ ಶೇಕಡಾ 50 ರಷ್ಟು ವಿದ್ಯಾರ್ಥಿವೇತನ ನೀಡಲು ಈ ಮೂಸದೆಯಲ್ಲಿ ಉಲ್ಲೇಖಿಸಲಾಗಿದೆ. ವಿವಿಧ ಶೈಕ್ಷಣಿಕ ವಿಭಾಗಗಳಲ್ಲಿ ಮತ್ತು ಅರ್ಹತೆಗೆ ಅನುಗುಣವಾಗಿ ಸ್ಕಾಲರ್‌ಶೀಪ್ ನೀಡಬೇಕು ಎಂದು ಮಸೂದೆಯಲ್ಲಿ ಹೇಳಲಾಗಿದೆ. 

2012ರಲ್ಲಿ ಮಲಾಲ ಯೂಸುಫ್ ಝಾಯಿ ಶಾಲೆಯಿಂದ ಮನೆಗೆ ತೆರಳುವ ವೇಳೆ ಪಾಕಿಸ್ತಾನಿ ತಾಲಿಬಾನ್ ಉಗ್ರರ ಗುಂಪು ತಲೆಗೆ ಗುಂಡು ಹಾರಿಸಿತ್ತು. 2008ರಲ್ಲಿ ಮಹಿಳೆಯ ಶಿಕ್ಷಣ ನಿರ್ಬಂಧ ವಿದಿಸಿದ್ದ ತಾಲಿಬಾನ್ ಉಗ್ರ ಸಂಘಟನೆ, ಎಚ್ಚರಿಕೆ ನೀಡಿತ್ತು. ಈ ಎಚ್ಚರಿಕೆ ಧಿಕ್ಕರಿಸಿದ ಮಲಾಲಗೆ ಗುಂಡು ಹಾರಿಸಲಾಗಿತ್ತು. ಆದರೆ ಮಲಾಲ ಅಪಾಯದಿಂದ ಪಾರಾಗಿದ್ದರು. 2014ರಲ್ಲಿ ಮಲಾಲ ಯೂಸುಫ್‌ಗೆ ಶಾಂತಿ ನೊಬೆಲ್ ಪ್ರಶಸ್ತಿ ಲಭಿಸಿದೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್
ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್