
ಲಾಸ್‌ಏಂಜಲೀಸ್(ಜ.04): ಕೋವಿಡ್-19 ವೈರಸ್ಸಿನಿಂದ ಅತಿ ಹೆಚ್ಚು ನಲುಗುತ್ತಿರುವ ರಾಷ್ಟ್ರಗಳ ಪೈಕಿ ಭಾರತದಲ್ಲಿ ಕೊರೋನಾ ವೈರಸ್ ಆಟಾಟೋಪ ಅಲ್ಪಮಟ್ಟಿಗೆ ತಗ್ಗಿದ್ದರೆ, ಅತ್ತ ವಿಶ್ವದ ದೊಡ್ಡಣ್ಣ ಅಮೆರಿಕ ಮಾತ್ರ ಮಹಾಮಾರಿಯ ಆರ್ಭಟಕ್ಕೆ ಅಕ್ಷರಶಃ ತತ್ತರಗೊಂಡಿದೆ.
ನಿತ್ಯ ಸರಾಸರಿ 2 ಲಕ್ಷಕ್ಕೂ ಹೆಚ್ಚು ಹೊಸ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಸೋಂಕಿತರಿಗೆ ಆಸ್ಪತ್ರೆಯಲ್ಲಿ ಹಾಸಿಗೆ ಸೌಲಭ್ಯ ಒದಗಿಸುವುದೂ ದುಸ್ತರವಾಗಿದೆ. ಸೋಂಕಿತರ ಪೈಕಿ ಯಾರಾದರೊಬ್ಬರು ಮೃತಪಟ್ಟರೆ ಮಾತ್ರ ಆಸ್ಪತ್ರೆಗಳು ರೋಗಿಗಳನ್ನು ದಾಖಲಿಸಿಕೊಳ್ಳುತ್ತಿವೆ.
ಇನ್ನು ಕಳೆದ ಒಂದು ವಾರದಿಂದೀಚೆಗೆ ಪ್ರತಿದಿನ ಸರಾಸರಿ 2500 ಜನರು ಸೋಂಕಿಗೆ ಬಲಿಯಾಗುತ್ತಿದ್ದು, ಸ್ಮಶಾನಗಳೆಲ್ಲವೂ ಮೃತದೇಹಗಳಿಂದ ತುಂಬಿ ತುಳುಕುತ್ತಿವೆ. ಅಂತ್ಯಸಂಸ್ಕಾರಕ್ಕೆಂದು ಕಳೇಬರವನ್ನು ಹೊತ್ತುತಂದ ಕುಟುಂಬಸ್ಥರು ಕಣ್ಣೀರಿಡುತ್ತಾ ಚಿತಾಗಾರದ ಎದುರು ನಿಲ್ಲುವ ಪರಿಸ್ಥಿತಿ ಬಂದೊದಗಿದೆ.
ಅಮೆರಿಕದಲ್ಲಿ ಈವರೆಗೆ 2,09,04,701 ಜನರಿಗೆ ಕೊರೋನಾ ಸೋಂಕು ತಗುಲಿದ್ದು, 3,58,682 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ