ಲೆಕ್ಕ ತಂದಿಟ್ಟ ಆತಂಕ; ಪ್ರತಿ 15 ಸೆಕೆಂಡಿಗೆ ಒಬ್ಬರು ಕೊರೋನಾಕ್ಕೆ  ಬಲಿ!

By Suvarna NewsFirst Published Aug 6, 2020, 3:30 PM IST
Highlights

ಅಮೆರಿಕದಲ್ಲಿ ನಿಲ್ಲದ ಕೊರೋನಾ ಆರ್ಭಟ/ ಬುಧವಾರಕ್ಕೆ  7 ಲಕ್ಷ ದಾಟಿದ ಸಾವಿನ ಸಂಖ್ಯೆ/ ಲ್ಯಾಟಿನ್ ಅಮೆರಿದ ಪ್ರರಿಸ್ಥಿತಿಯಂತೂ ಬೇಡವೇ ಬೇಡ/ ಬ್ರೆಜಿಲ್ ಒಂದರಲ್ಲೇ 95,819 ಸಾವುಗಳು ಆಗಿವೆ.

ನ್ಯೂಯಾರ್ಕ್(ಆ.06)  ಅಮೆರಿಕ ಒಂದರಲ್ಲೇ ಕೊರೋನಾ ಸಾವಿನ ಸಂಖ್ತೆ ಬುಧವಾರಕ್ಕೆ  7 ಲಕ್ಷ ದಾಟಿದೆ.   ಬ್ರೆಜಿಲ್, ಭಾರತ, ಮೆಕ್ಸಿಕೋ ಸಹ ಸಾವಿನ ಸಂಖ್ಯೆಯಲ್ಲಿ ದಾಪುಗಾಲು ಇಡುತ್ತಿವೆ.

24  ಗಂಟೆ ಅವಧಿಯಲ್ಲಿ 5,900 ಜನ ಸರಾಸರಿ  ಕೊರೋನಾಕ್ಕೆ ಬಲಿಯಾಗುತ್ತಿದ್ದಾರೆ.  ಅಂದರೆ ಗಂಟೆಗೆ 247 ಜನರು. ಪ್ರತಿ 15 ಸೆಕೆಂಡಿಗೆ ಒಬ್ಬರು!

ಅಮೆರಿಕದಲ್ಲಿ ಕೊರೋನಾ ನಿಯಂತ್ರಣದಲ್ಲಿದೆ ಎಂದು ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ.  ಬೇರೆ ಕಾರಣಕ್ಕೆ ಸಾವಿಗೆ ಗುರಿಯಾಗುತ್ತಿರುವವರನ್ನು ಕೊರೋನಾ ಎಂದು  ಹೇಳಲಾಗುತ್ತಿದೆ. ಇದೊಂದು ಕ್ಲಿಷ್ಟಕರ ಸನ್ನಿವೇಶ ಎದುರಿಸಲೇಬೇಕು ಎಂದು ಟ್ರಂಪ್ ಹೇಳಿದ್ದಾರೆ.

ಹೊಸ ಭರವಸೆ ಮೂಡಿಸಿದ ಡಿಸ್ಚಾರ್ಜ್ ಸಂಖ್ಯೆ

ಯುರೋಪ್ ಖಂಡವನ್ನು ಸಾವಿನ ಲೆಕ್ಕದಲ್ಲಿ ಲ್ಯಾಟಿನ್ ಅಮೆರಿಕ ಹಿಂದಕ್ಕೆ ಹಾಕಿದೆ. ಲ್ಯಾಟಿನ್ ಅಮೆರಿಕ ಪ್ರದೇಶದಲ್ಲಿ 2,06,000 ಸಾವುಗಳು ಸಂಭವಿಸಿದೆ. ಪ್ರಪಂಚದ ಶೇ. 30 ರಷ್ಟು ಸಾವುಗಳಿಗೆ ಈ ಪ್ರದೇಶವೇ ಸಾಕ್ಷಿಯಾಗಿದೆ.  ಬ್ರೆಜಿಲ್ ಒಂದರಲ್ಲೇ 95,819 ಸಾವುಗಳು ಆಗಿವೆ. ಮೆಕ್ಸಿಕೋ ನಂತರದ ಸ್ಥಾನದಲ್ಲಿ ಇದ್ದು 48,869 ಜನ ಕೊರೋನಾಕ್ಕೆ ಬಲಿಯಾಗಿದ್ದಾಋಎ. ಕೋಲಂಬಿಯಾ ಮತ್ತು ಅರ್ಜೆಂಟೀನಾದಲ್ಲಿಯೂ ಕೊರೋನಾ ಆರ್ಭಟ ಜೋರಾಗಿಯೇ ಇದೆ.

click me!