
ನವದೆಹಲಿ (ಏ. 30) ಕೊರೋನಾ ಹೋರಾಟದಲ್ಲಿರುವ ಭಾರತದ ನೆರವಿಗೆ ಜಪಾನ್ ನಿಂತಿದೆ. 300 ಜನರೇಟರ್ ಜತೆ ವೆಂಟಿಲೇಟರ್ ಗಳನ್ನು ನೀಡಲು ಮುಂದಾಗಿದೆ. ಜಪಾನ್ ರಾಯಭಾರಿ ಸಯೋಶಿ ಸುಜುಕಿ ಈ ವಿಚಾರವನ್ನು ಸೋಶಿಯಲ್ ಮೀಡಿಯಾ ಮುಖೇನ ತಿಳಿಸಿದ್ದಾರೆ. ಭಾರತದಕ್ಕೆ ಇದು ಅಗತ್ಯವಿದ್ದು ನಾವು ಕೊಡಲಿದ್ದೇವೆ ಎಂದಿದ್ದಾರೆ.
ಭಾರತ ಕೊರೋನಾ ಎರಡನೇ ಅಲೆ ವಿರುದ್ಧ ಹೋರಾಟ ಮಾಡುತ್ತಿದ್ದು ನಾವು ಕೈಜೋಡಿಸುತ್ತಿದ್ದೇವೆ 300 ಆಕ್ಸಿಜನ್ ಜನರೇಟರ್ ಮತ್ತು 300 ವೆಂಟಿಲೇಟರ್ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ್ ಶ್ರೀಂಗ್ಲಾ ಜಪಾನ್ ಸಹ ಭಾರತದ ಅತಿ ಹತ್ತಿರದ ಗೆಳೆಯ ಎಂದು ಹೇಳಿದ್ದರು. ಅಂತಾರಾಷ್ಟ್ರೀಯ ಸಂಬಂಧಗಳ ವಿಚಾರದಲ್ಲಿ ನೆರವಿನ ಬಗ್ಗೆ ಮಾತನಾಡಿದ್ದರು. ಜಪಾನ್ ವೆಂಟಿಲೇಟರ್ ಮತ್ತು ಫಾರ್ಮಾ ಉಪಕರಣಗಳನ್ನು ನೀಡುತ್ತಾ ಬಂದಿದೆ ಎಂಬುದನ್ನು ತಿಳಿಸಿದ್ದರು.
ರುಮೇನಿಯಾ ಮತ್ತು ಇಂಗ್ಲೆಂಡ್ ಸಹ ಭಾರತಕ್ಕೆ ಕೊರೋನಾ ವಿರುದ್ಧ ಹೋರಾಡುವ ಅಸ್ತ್ರಗಳನ್ನು ನೀಡಿವೆ. ರುಮೇನಿಯಾ 80 ಆಕ್ಸಿಜನ್ ಸಾಂದ್ರಕಗಳನ್ನು (concentrators) ಮತ್ತು 75 ಆಕ್ಸಿಜನ್ ಸಿಲಿಂಡರ್ ನೀಡಿದ್ದರೆ ಇಂಗ್ಲೆಂಡ್ 280 ಆಕ್ಸಿಜನ್ ಸಾಂದ್ರಕಗಳನ್ನುಗಳನ್ನು ನೀಡಿದೆ. ಭಾರತದಲ್ಲಿ ಕೊರೋನಾ ಎರಡನೇ ಅಲೆ ನಿಧಾನವಾಗಿ ನಿಯಂತ್ರಣಕ್ಕೆ ಬರುತ್ತಿದ್ದು ಹಲವು ರಾಜ್ಯಗಳು ಟಫ್ ರೂಲ್ಸ್ ಮೊರೆ ಹೋಗಿವೆ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ