ಹೆಚ್ಚುತ್ತಿರೋ ಕೊರೋನಾ ಮಧ್ಯೆ ಬದುಕೋಕೆ ಸುರಕ್ಷಿತ ದೇಶಗಳಿವು..!

By Suvarna News  |  First Published Apr 30, 2021, 11:15 AM IST

ಹೆಚ್ಚುತ್ತಿದೆ ಕೊರೋನಾ | ದೇಶದ ಹಲವು ರಾಷ್ಟ್ರಗಳ ಮೇಲೆ ಕೊರೋನಾ ಎರಡನೇ ಅಲೆ ಅಪಾಯ | ಕೊರೋನಾ ಕಾಲದಲ್ಲಿ ಬದುಕೋಕೆ ಸುರಕ್ಷಿತ ದೇಶಗಳಿವು


ಸಿಂಗಾಪುರ್(ಏ.30): COVID-19 ಸಾಂಕ್ರಾಮಿಕ ಕಾಲದಲ್ಲಿ ಸಿಂಗಾಪುರ ಸದ್ಯಕ್ಕೆ ಭೂಮಿಯ ಮೇಲಿನ ಸುರಕ್ಷಿತ ಸ್ಥಳ. ಕೊರೊನಾವೈರಸ್ ಸಮಯದಲ್ಲಿ ದೇಶಗಳು ಎಷ್ಟು ಸುರಕ್ಷಿತವಾಗಿ ಉಳಿಯಬೇಕೆಂಬುದರ ಆಧಾರದ ಮೇಲೆ ಕಳೆದ ವರ್ಷ ನವೆಂಬರ್‌ನಲ್ಲಿ ಪ್ರಾರಂಭಿಸಲಾದ ಬ್ಲೂಮ್‌ಬರ್ಗ್‌ನ ಕೋವಿಡ್ ರೆಸಿಲಿಯನ್ಸ್ ಶ್ರೇಯಾಂಕದ ಪ್ರಕಾರ, ಸಿಂಗಾಪುರವು ನ್ಯೂಜಿಲೆಂಡ್‌ನ್ನು ಸೋಲಿಸಿ ಮೊದಲ ಸ್ಥಾನದಲ್ಲಿದೆ.

ಅತಿ ವೇಗದಲ್ಲಿ ವೈರಸ್‌ ವಿರುದ್ಧ ಹೋರಾಟ ಮತ್ತು ಲಸಿಕೆಗಳನ್ನು ನೀಡುವ ಯೋಜನೆಯಲ್ಲಿ ಈ ತಿಂಗಳಿನಲ್ಲಿ ಬ್ಲೂಮ್‌ಬರ್ಗ್‌ನ ಕೋವಿಡ್ ರೆಸಿಲಿಯನ್ಸ್ ಶ್ರೇಯಾಂಕದಲ್ಲಿ ಸಿಂಗಾಪುರ ಅಗ್ರಸ್ಥಾನದಲ್ಲಿದೆ. ಕೊರೋನಾ ಎದುರಿಸುತ್ತಿರುವ ಅತ್ಯುತ್ತಮ ಮತ್ತು ಅತ್ಯಂತ ಹೆಚ್ಚು ಸಂಕಷ್ಟ ಎದುರಿಸುತ್ತಿರುವ ಸ್ಥಳಗಳಲ್ಲಿ ನ್ಯೂಜಿಲೆಂಡ್ ಅನ್ನು ಮೊದಲ ಬಾರಿಗೆ ಸಿಂಗಾಪುರ ಸೋಲಿಸಿದೆ.

Latest Videos

undefined

ಭಾರತಕ್ಕೆ ಅಮೆರಿಕದಿಂದ ನೆರವಿನ ಪೂರ: ತುರ್ತು ನೆರವಿನ ವಸ್ತುಗಳೊಂದಿಗೆ ತಲುಪಿದ ಮೊದಲ ವಿಮಾನ

ಸಿಂಗಾಪುರದಲ್ಲಿ ಕೊರೋನಾ ಹರಡುವ ಪ್ರಕರಣ ಶೂನ್ಯಕ್ಕೆ ತಲುಪಿದೆ. ಈಗಾಗಲೇ ತನ್ನ ಜನಸಂಖ್ಯೆಯ ಐದನೇ ಭಾಗದಷ್ಟು ಲಸಿಕೆಗಳನ್ನು ನೀಡಿದೆ. ಇದು ಸಾಂಕ್ರಾಮಿಕ ನಿಯಂತ್ರಣದ ಒಂದು ಅಂಶವಾಗಿದ್ದು, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ತೈವಾನ್‌ನಂತಹ ಹೆಚ್ಚಿನ ಕಾರ್ಯಕ್ಷಮತೆ ಹೊಂದಿರುವ ದೇಶಗಳು ಹಿಂದುಳಿದಿವೆ.

ಅಗ್ರ ಮೂರು ರಾಷ್ಟ್ರ-ಸಿಂಗಾಪುರ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾಗಳು ತಮ್ಮ ಜನರಿಗೆ ಕೊರೋನಾ ಪೂರ್ವದ ಜೀವನಮಟ್ಟವನ್ನು ಒದಗಿಸಲು ಸಮರ್ಥವಾಗಿವೆ. ಅಂತರರಾಷ್ಟ್ರೀಯ ಪ್ರಯಾಣವನ್ನು ಹೊರತುಪಡಿಸಿ, ವೈರಸ್ ಮತ್ತೆ ಹೆಚ್ಚಾಗುವುದನ್ನು ತಡೆಯಲು ಇದನ್ನು ಲಾಕ್‌ಡೌನ್ ಮಾಡಲಾಗಿತ್ತು. 53 ದೇಶಗಳ ಪೈಕಿ ಭಾರತವು 30 ನೇ ಸ್ಥಾನದಲ್ಲಿದೆ. ಅರ್ಜೆಂಟೀನಾ, ಪೋಲೆಂಡ್ ಮತ್ತು ಬ್ರೆಜಿಲ್‌ನಲ್ಲಿ ಕೊರೋನಾ ಸ್ಥಿತಿ ಕೆಟ್ಟದಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!