ಪರಸ್ಪರ ಕೈ ಹಿಡಿದುಕೊಂಡೆ ಪ್ರಾಣ ಬಿಟ್ಟ ಡಚ್ ಮಾಜಿ ಪ್ರಧಾನಿ ಹಾಗೂ ಪತ್ನಿ

By Anusha Kb  |  First Published Feb 14, 2024, 3:13 PM IST

ಡಚ್‌ ಮಾಜಿ ಪ್ರಧಾನಿ 93 ವರ್ಷದ ಡ್ರೈಸ್ ವ್ಯಾನ್ ಆಗ್ಟ್ ಹಾಗೂ ಅವರ ಪತ್ನಿನಿಜ್ಮೆಗನ್‌ ಪರಸ್ಪರ ಕೈ ಹಿಡಿದುಕೊಂಡೆ ಪ್ರಾಣ ಬಿಟ್ಟಿದ್ದಾರೆ. ಇವರಿಬ್ಬರಿಗೂ 93 ವರ್ಷ ವಯಸ್ಸಾಗಿತ್ತು. ಈ ಮೂಲಕ ಇಬ್ಬರೂ ಸಾವಿನಲ್ಲೂ ಒಂದಾಗಿದ್ದಾರೆ.


ನೆದರ್ಲ್ಯಾಂಡ್: ಡಚ್‌ ಮಾಜಿ ಪ್ರಧಾನಿ 93 ವರ್ಷದ ಡ್ರೈಸ್ ವ್ಯಾನ್ ಆಗ್ಟ್ ಹಾಗೂ ಅವರ ಪತ್ನಿನಿಜ್ಮೆಗನ್‌ ಪರಸ್ಪರ ಕೈ ಹಿಡಿದುಕೊಂಡೆ ಪ್ರಾಣ ಬಿಟ್ಟಿದ್ದಾರೆ. ಡಚ್‌ ರಾಜಕಾರಣದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ 93 ವರ್ಷದ ಡ್ರೈಸ್ ವ್ಯಾನ್ ಆಗ್ಟ್ ಹಾಗೂ ಅವರ ಪತ್ನಿ ಯುಜೆನಿ, ಡ್ಯುಯೊ ಅವರಿಗೆ ದಯಾಮರಣಕ್ಕೆ ಅನುಮತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರು ದಯಾಮರಣದ ಮೂಲಕ ಜೊತೆಯಾಗಿಯೇ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ತಮ್ಮ ಹುಟ್ಟೂರಾದ ನಿಜ್ಮೆಗನ್‌ನಲ್ಲಿ ಈ ಜೋಡಿ ಸಾವನ್ನಪ್ಪಿದ್ದಾರೆ.

ಡ್ರೈಸ್ ವ್ಯಾನ್ ಆಗ್ಟ್ ಅವರು 1977ರಿಂದ 1982ರವರೆಗೆ ನೆದರ್ಲ್ಯಾಂಡ್‌ ಪ್ರಧಾನ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಇದೇ ಸಮಯದಲ್ಲಿ ಅವರು ಅಲ್ಲಿನ ಕ್ರಿಶ್ಚಿಯನ್ ಡೆಮಾಕ್ರಟಿಕ್ ಅಪೀಲ್ ಪಕ್ಷದ ಸ್ಥಾಪಕ ನಾಯಕರಾದರು. ತಮ್ಮ ಅಧಿಕಾರದ ನಂತರವೂ ಅವರು ತಮ್ಮ ರಾಜಕೀಯ ನಿಲುವುಗಳಿಗೆ ಬದ್ಧರಾಗಿ ಪ್ರಬುದ್ಧ ನಾಯಕ ಎನಿಸಿಕೊಂಡಿದ್ದರು. 2009ರಲ್ಲಿ ಇವರು  ದಿ ರೈಟ್ಸ್ ಫೋರಮ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು, ಇದು ಪ್ಯಾಲೇಸ್ಟಿನಿಯನ್ ಹಕ್ಕುಗಳಿಗಾಗಿ ಹೋರಾಡಲು ಮೀಸಲಾದ ಸಂಸ್ಥೆಯಾಗಿತ್ತು. 

Tap to resize

Latest Videos

ಶನಿವಾರ ನನ್ನ ಕೊನೆಯ ದಿನ, ದಯಾಮರಣಕ್ಕೂ ಮುನ್ನ ಯುವತಿಯ ಅಂತಿಮ ಪೋಸ್ಟ್!

ಇದೇ ರೈಟ್ಸ್ ಫಾರಂ ಸಂಸ್ಥೆ ಈಗ ಈ ಹಿರಿಯ ದಂಪತಿಗಳ ನಿಧನದ ವಿಚಾರವನ್ನು ಅಧಿಕೃತಪಡಿಸಿದೆ. ನಿಗದಿತ ವೈದ್ಯಕೀಯ ಕಾರಣವಿಲ್ಲದೇ ಈ ದಯಾಮರಣದಂತಹ ಪ್ರಕ್ರಿಯೆಗೆ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಅನುಮತಿ ಇಲ್ಲ. ಆದರೂ ನೆದರ್ಲ್ಯಾಂಡ್‌ನಲ್ಲಿ ಈ ಪ್ರಕ್ರಿಯೆ ಕ್ರಮೇಣ ಹೆಚ್ಚಾಗಿದ್ದು, ಕೇವಲ 2022ರ ಒಂದು ವರ್ಷದಲ್ಲೇ 58 ಜನ ದಯಾಮರಣ ಪಡೆದಿದ್ದಾರೆ. 

ಕುಟುಂಬದೊಂದಿಗೆ ಸಮಾಲೋಚಿಸಿ  ನಾವು ನಮ್ಮ ಸಂಸ್ಥೆಯ ಸಂಸ್ಥಾಪಕ ಹಾಗೂ ಗೌರವಾಧ್ಯಕ್ಷ  ಡ್ರೈಸ್ ವ್ಯಾನ್ ಆಗ್ಟ್ ಅವರು ಫೆಬ್ರವರಿ 5 ರಂದು ತಮ್ಮ ಊರು ನಿಜ್ಮೆಗನ್‌ನಲ್ಲಿ ಇಹಲೋಕ ತ್ಯಜಿಸಿದ್ದಾರೆ ಎಂಬುದನನ್ನು ತಿಳಿಸುತ್ತಿದ್ದೇವೆ.  ತಮ್ಮ ಪತ್ನಿ ಯುಜೆನಿ ವ್ಯಾನ್  ಜೊತೆಯಾಗಿಯೇ ಇವರು ಸಾವನ್ನಪ್ಪಿದ್ದು, ಇಬ್ಬರು ಪರಸ್ಪರ ಕೈ ಹಿಡಿದುಕೊಂಡೇ ಪ್ರಾಣ ಬಿಟ್ಟಿದ್ದಾರೆ. ಇವರಿಬ್ಬರೂ ಪರಸ್ಪರ ಬೆಂಬಲದೊಂದಿಗೆ ಸುಮಾರು 70 ವರ್ಷಗಳ ಕಾಲ ಜೊತೆಯಾಗಿದ್ದರು. ಸಾಯುವವರೆಗೂ ಪತ್ನಿಯನ್ನು ಸದಾ ನನ್ನ ಹುಡುಗಿ ಎಂದು ಕರೆಯುತ್ತಿದ್ದರು, ಇವರ ಅಂತ್ಯಸಂಸ್ಕಾರ ಕಾರ್ಯವೂ ಖಾಸಗಿಯಾಗಿ ನಡೆದಿದೆ. ವ್ಯಾನ್ ಆಗ್ಟ್ ಮತ್ತು ಅವರ ಪತ್ನಿ ಯುಜೆನಿ ವ್ಯಾನ್ ಇಬ್ಬರಿಗೂ 93 ವರ್ಷ ವಯಸ್ಸಾಗಿತ್ತು ಎಂದು ರೈಟ್ಸ್ ಫಾರಂ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಮಕ್ಕಳಿಗೆ ಕಾಯಿಲೆ; ದಯಾಮರಣ ಕೋರಲು ಕೇರಳದ ಐವರ ಕುಟುಂಬ ನಿರ್ಧಾರ

ಗಾರ್ಡಿಯನ್‌ ಪತ್ರಿಕೆಯ ವರದಿಯ ಪ್ರಕಾರ, ಎಕ್ಸ್‌ಪರ್ಟಿಸೆಂಟ್ರಮ್ ದಯಾಮರಣದ ವಕ್ತಾರ ಎಲ್ಕೆ ಸ್ವಾರ್ಟ್ ಅವರು, ಈ ದಯಾಮರಣ ಪ್ರಕ್ರಿಯೆಯೂ ಡಚ್ ಕಾನೂನಿನಿಂದ ನಿಗದಿಪಡಿಸಿದ ಕಟ್ಟುನಿಟ್ಟಾದ ಮಾನದಂಡಗಳನ್ನು  ಖಚಿತಪಡಿಸಿಕೊಳ್ಳಲು  ವೈಯಕ್ತಿಕ ಆಧಾರದ ಮೇಲೆ ಕಟ್ಟುನಿಟ್ಟಾಗಿ ಮೌಲ್ಯಮಾಪನ ಮಾಡಲಾಗಿದೆ ಎಂದು ಹೇಳಿದ್ದಾರೆ. ಈ ದಯಾಮರಣದ ಬಗ್ಗೆ ಆಸಕ್ತಿ ಬೆಳೆಯುತ್ತಿದೆ.  ಆದರೂ ಇದು ಅಪರೂಪ, ಇಬ್ಬರೂ ಒಂದೇ ಸಮಯದಲ್ಲಿ ಯಾವುದೇ ಪರಿಹಾರದ ನಿರೀಕ್ಷೆ ಇಲ್ಲದೇ ಅಸಹನೀಯವಾಗಿ ಬಳಲುತ್ತಿದ್ದರು ಹಾಗೂ ಇಬ್ಬರೂ ದಯಾಮರಣವನ್ನು ಬಯಸಿದ್ದರು ಎಂದು ಸ್ವಾರ್ಟ್ ಹೇಳಿದ್ದಾರೆ.

ದಯಾಮರಣ ಕೋರಿ ಪ್ರಾಣ ಬಿಟ್ಟ ಖ್ಯಾತ ನಟಿ! ಕ್ಯಾನ್ಸರ್​ ಚಿಕಿತ್ಸೆಗೆ ಹಣವಿಲ್ಲದೇ ಸಿಂಧು ದುರಂತ ಸಾವು!

click me!