
ವಿಮಾನ ಪ್ರಯಾಣ ಸೇರಿದಂತೆ ಯಾವುದೇ ಸಾರ್ವಜನಿಕ ಸಾರಿಗೆಯಲ್ಲಿ ಕೆಲ ಶಿಸ್ತು ಪಾಲಿಸುಬೇಕಾಗಿರುವ ಅಗತ್ಯವಿದೆ. ಆದರೆ ಇತ್ತೀಚೆಗೆ ವಿಮಾನ ಪ್ರಯಾಣದಲ್ಲಿ ಹಲವು ಅಶಿಸ್ತಿನ ನಡವಳಿಕೆ, ಕಿರುಕುಳ ಘಟನೆಗಳು ವರದಿಯಾಗುತ್ತಿದೆ. ಇದೀಗ ವಿಮಾನ ಪ್ರಯಾಣದಲ್ಲಿ ಜೋಡಿಗಳ ರೋಮ್ಯಾನ್ಸ್ ಭಾರಿ ವೈರಲ್ ಆಗಿದೆ. ಈ ಜೋಡಿಗೆ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಬೆಡ್ ರೂಂ ಲೈಟ್ ಆಫ್ ಮಾಡಿದಷ್ಟು ಖಷಿಯಾಗಿದೆ. ರೋಮ್ಯಾಂಟಿಕ್ ಮೂಡ್‌ನಲ್ಲಿ ಪ್ರಣಯ ಹಕ್ಕಿಗಳಂತೆ ಸದೀರ್ಘ ನಾಲ್ಕು ತಾಸು ಪ್ರಯಾಣ ಮಾಡಿದ್ದಾರೆ. ಈ ಜೋಡಿಯ ರೋಮ್ಯಾಂಟಿಕ್ ಜರ್ನಿ ಇದೀಗ ಭಾರಿ ವೈರಲ್ ಆಗಿದೆ. ಆದರೆ ಈ ಜೋಡಿ ಹಕ್ಕಿಗಳ ಪ್ರಯಾಣ ಇತರರಿಗೆ ತೀವ್ರ ಇರಿಸು ಮುರಿಸು ತಂದಿದೆ.
ಪ್ರಣಯ ಹಕ್ಕಿಗಳ ವೈರಲ್ ಫೋಟೋ, ವಿಮಾನ ಪ್ರಯಾಣದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಆದರೆ ವಿಮಾನ ಪ್ರಯಾಣದಲ್ಲಿನ ಈ ಘಟನೆಯನ್ನು FLEA ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ದೃಶ್ಯ ಸಂಪೂರ್ಣ ನಾಲ್ಕು ಗಂಟೆ ಪ್ರಯಾಣದಲ್ಲಿ ನಡೆದಿತ್ತು ಎಂದು ಬರೆದುಕೊಂಡಿದ್ದಾರೆ.
ವಿಮಾನ ಪ್ರಯಾಣದಲ್ಲೂ ಬಿಡದ ಪಕ್ಕಾ ಲೋಕಲ್ ಚಟ, ಬೀಡಿ ಸೇದಿದ ಪ್ರಯಾಣಿಕ ಅರೆಸ್ಟ್!
ವಿಮಾನ ಹತ್ತಿದ ಈ ಜೋಡಿ ತಮ್ಮ ಸೀಟಿನಲ್ಲಿ ಆಸಿನವಾಗಿದೆ. ವಿಮಾನ ಟೇಕ್ ಆಫ್ ಮೊದಲು ಸೀಟು ಬೆಲ್ಟು ಕಡ್ಡಾಯವಾಗಿದೆ. ಹೀಗಾಗಿ ಅಕ್ಕ ಪಕ್ಕ ಕುಳಿತಿದ್ದ ಈ ಜೋಡಿ ಸೀಟು ಬೆಲ್ಟು ಹಾಕಿ ಶಿಸ್ತಿನಿಂದ ಕುಳಿತಿದೆ. ಆದರೆ ಟೇಕ್ ಆಫ್ ಆದ ಬೆನ್ನಲ್ಲೇ ಸೀಟು ಬೆಲ್ಟ್ ತೆಗೆದು ಬೆಡ್ ರೂಂ ಮಾಡಿಕೊಂಡಿದ್ದಾರೆ. ಕುಳಿತುಕೊಳ್ಳುವ ಸೀಟಿನಲ್ಲಿ ಇಬ್ಬರು ಮಲಗಿದ್ದಾರೆ. ಒಂದೆಡೆ ವಿಮಾನ ಆಗಸದಲ್ಲಿ ಹಾರಾಡುತ್ತಿದ್ದರೆ, ಈ ಜೋಡಿ ಹಕ್ಕಿಗಳು ತಮ್ಮದೇ ಪ್ರಯಣ ಪ್ರಪಂಚದಲ್ಲಿ ತೇಲಾಡುತ್ತಿದ್ದರು.
ಈ ಪ್ರಣಯ ಹಕ್ಕಿಗಳ ಚಿಲಿಪಿಲಿ ಸಹ ಪ್ರಯಾಣಿಕರಿಗೆ ಕಿರಿಕಿರಿ ತಂದಿತ್ತು. ನಾಲ್ಕು ಗಂಟೆಗಳ ಸಂಪೂರ್ಣ ಪ್ರಯಾಣ ಮಲಗಿಕೊಂಡೇ ಸಾಗಿದ್ದಾರೆ. ಹಾರ್ಟ್ ಸಿಂಬಲ್ ತೋರಿಸುತ್ತಾ, ಚುಂಬನಗಳ ಕಚುಕಳಿಯಲ್ಲಿ ಈ ಜೋಡಿ ಪ್ರಯಾಣವನ್ನು ಸ್ಮರಣೀಯವಾಗಿಸಿದ್ದಾರೆ. ಇದೇ ವೇಳೆ ಇವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಿಕ್ ಲೀವ್ ಹಾಕ್ಕೊಂಡು ಟ್ರಿಪ್ ಹೊರಟವಳಿಗ ವಿಮಾನ ಏರ್ತಿದ್ದಂತೆ ಕಾದಿತ್ತು ಶಾಕ್!
ಈ ಪೋಸ್ಟ್‌ಗೆ ಹಲವರು ಕಮೆಂಟ್ ಮಾಡಿದ್ದಾರೆ. ಸೀಟು ಬೆಲ್ಟು ತೆಗೆದು ಈ ರೀತಿ ಪ್ರಯಾಣ ಮಾಡುವದನ್ನು ಸಿಬ್ಬಂದಿಗಳು ವಿರೋಧಿಸಲಿಲ್ಲವೇ ಎಂದು ಕೆಲವರು ಪ್ರಶ್ನಿಸಿದ್ದಾರೆ. ಹೆಡ್ ಫೋನ್ ಹಾಕಿಕೊಳ್ಳಿ, ಮೋವಿ ನೋಡಿ, ಬೇರೆಲ್ಲೂ ನೋಡಬೇಡಿ ಎಂದು ಇತರರ ಕಮೆಂಟ್ ಮಾಡಿದ್ದಾರೆ. ವಿಮಾನ ಪ್ರಯಾಣದಲ್ಲಿ ರೋಮ್ಯಾಟಿಂಕ್ ಮೂವಿ ಪ್ಲೇ ಆಗುತ್ತಿದೆ ಎಂದುಕೊಳ್ಳಿ. ಚಲನಚಿತ್ರವಾಗಿ ನೋಡಿ ಎಂದು ಕೆಲವರು ಸಲಹೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ