
Metro Viral Video: ಇತ್ತೀಚಿನ ದಿನಗಳಲ್ಲಿ ಮೆಟ್ರೋ ಪ್ರಯಾಣಿಕರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ದೆಹಲಿ ಮೆಟ್ರೋದಲ್ಲಿ ಮದ್ಯ ಕುಡಿದ ವ್ಯಕ್ತಿ ದಂಡ ತೆತ್ತಿದ್ದನು. ಇನ್ನು ಕೆಲ ದಿನಗಳ ಹಿಂದೆಯಷ್ಟೇ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಜೋಡಿಯೊಂದು ಅಸಭ್ಯವಾಗಿ ನಡೆದುಕೊಂಡು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಎಲ್ಲಾ ಬೆಳವಣಿಗೆ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ವಿಡಿಯೋ ಟ್ರೆಂಡಿಂಗ್ ಪಟ್ಟಿಗೆ ಸೇರ್ಪಡೆಯಾಗಿದೆ. ಮೆಟ್ರೋ ನಿಲ್ದಾಣ ಪ್ಲಾಟ್‌ಫಾರಂ ಮತ್ತು ರೈಲಿನೊಳಗೆ ತುಟಿಗೆ ತುಟಿ ಸೇರಿಸುತ್ತಿದ್ದ ಜೋಡಿಗೆ ಮೈಕ್‌ನಲ್ಲಿ ಅನೌನ್ಸಮೆಂಟ್ ಮಾಡುವ ಮೂಲಕ ಎಚ್ಚರಿಕೆ ನೀಡಲಾಗಿದೆ. ಮೈಕ್‌ನಲ್ಲಿನ ಧ್ವನಿ ಕೇಳಿ ಸಿಸಿಟಿವಿ ಕ್ಯಾಮೆರಾದತ್ತ ನೋಡಿದ ಜೋಡಿ ಜೋರಾಗಿ ನಕ್ಕಿದ್ದಾರೆ.
ಸದ್ಯ ವೈರಲ್ ಆಗುತ್ತಿರುವ ವಿಡಿಯೋ ಲಂಡನ್ ಮೆಟ್ರೋದ್ದಾಗಿದೆ. ಪಾಶ್ಚತ್ಯ ಸಂಸ್ಕೃತಿಯಲ್ಲಿ ಸಾರ್ವಜನಿಕವಾಗಿ ಅಪ್ಪಿಕೊಳ್ಳುವುದು, ಮುತ್ತು ಕೊಡುವುದು ಸಾಮಾನ್ಯ. ಇನ್ನು ಕೆಲವರು ಇದರ ಮಿತಿಯನ್ನು ಮೀರಿ ಅತಿರೇಕದ ವರ್ತನೆಯನ್ನು ತೋರುತ್ತಾರೆ. ಲಂಡನ್ ಮೆಟ್ರೋ ರೈಲು ಮತ್ತು ನಿಲ್ದಾಣದಲ್ಲಿಯ ಎಲ್ಲಾ ಪ್ರಯಾಣಿಕರ ಮೇಲೆ ಹದ್ದಿನಗಣ್ಣು ಇರಿಸಲಾಗಿರುತ್ತದೆ. ಅನುಚಿತ ವರ್ತನೆ ಮತ್ತು ನಿಯಮಗಳ ಉಲ್ಲಂಘನೆ ಕಂಡು ಬಂದ ತಕ್ಷಣನವೇ ಅನೌನ್ಸ್‌ಮೆಂಟ್ ಮೂಲಕ ಎಚ್ಚರಿಕೆ ನೀಡಲಾಗುತ್ತದೆ. ನಿಯಮಗಳ ಉಲ್ಲಂಘನೆಗೆ ಆ ಆಕ್ಷಣದಲ್ಲಿಯೇ ದಂಡವನ್ನು ವಿಧಿಸಲಾಗುತ್ತದೆ.
ನೋ ಹಗ್ಗಿಂಗ್, ನೋ ಕಿಸ್ಸಿಂಗ್
ವೈರಲ್ ಆಗುತ್ತಿರುವ ವಿಡಿಯೋವನ್ನು Its Just Real ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋಗೆ 1.84 ಲಕ್ಷಕ್ಕೂ ಅಧಿಕ ವ್ಯೂವ್ ಬಂದಿವೆ. ವಿಡಿಯೋ ನೋಡಿದ ನೆಟ್ಟಿಗರು, ಇಲ್ಲಿ ಮೂರನೇ ಕಣ್ಣು ಇದೆ ಎಂಬುದನ್ನು ಮರೆಯಬೇಡಿ ಎಂದು ಕಮೆಂಟ್ ಮಾಡಿದ್ದಾರೆ. ಪ್ಲೀಸ್ ರೂಮ್‌ಗೆ ಹೋಗಿ ಕಿಸ್ಸಿಂಗ್, ಹಗ್ಗಿಂಗ್ ಆಂಡ್ ಹೆಟ್ರೋ ಮಾಡ್ಕೊಳ್ಳಿ ಎಂದಿದ್ದಾರೆ. ಈ ವಿಡಿಯೋಗೆ ಕಮೆಂಟ್ ಮಾಡಿರುವ ದಿನ್‌ಶಾನ್ ಎಂಬ ವ್ಯಕ್ತಿ, ಆ ಅನೌನ್ಸ್‌ಮೆಂಟ್ ಮಾಡಿದ್ದು ನಾನೇ ಎಂದು ಹೇಳಿಕೊಂಡಿದ್ದಾರೆ. ಲಂಡನ್ ಮೆಟ್ರೋ ಪ್ರಯಾಣಿಕರು ಕಡ್ಡಾಯವಾಗಿ ಅಲ್ಲಿನ ನಿಯಮಗಳನ್ನು ಪಾಲನೆ ಮಾಡುವಂತೆ ಸೂಚನೆ ನೀಡಲಾಗುತ್ತದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಯುವ ಜೋಡಿಯೊಂದು ನಿಲ್ದಾಣದ ಪ್ಲಾಟ್‌ಫಾರಂನಲ್ಲಿ ಗೋಡೆಗೆ ಒರಗಿಕೊಂಡು ಕಿಸ್ ಮಾಡುತ್ತಿರುತ್ತಾರೆ. ಇದನ್ನು ಗಮನಿಸಿದ ಸಿಬ್ಬಂದಿ, ಇದು ನಿಮ್ಮ ರೂಮ್ ಅಲ್ಲ, ಮೆಟ್ರೋ ನಿಲ್ದಾಣ. ಕಿಸ್ಸಿಂಗ್, ಹಗ್ಗಿಂಗ್ ಮತ್ತು ಖಾಸಗಿ ಕೆಲಸಗಳನ್ನ ಮಾಡಿಕೊಳ್ಳಲು ನಿಮ್ಮ ಮನೆಗೆ ಹೋಗಿ ಎಂದು ಖಡಕ್ ಆಗಿ ಮೈಕ್‌ನಲ್ಲಿ ಹೇಳಿದ್ದಾರೆ. ಇದೇ ವಿಡಿಯೋದಲ್ಲಿ ರೈಲಿನೊಳಗೆಯೇ ದಂಪತಿ ಕಿಸ್ ಮಾಡಲು ಮುಂದಾಗುತ್ತಿದ್ದಂತೆ ಅನೌನ್ಸ್‌ಮೆಂಟ್ ಬರುತ್ತದೆ. ಕೂಡಲೇ ದಂಪತಿ ಕ್ಯಾಮೆರಾ ನೋಡಿ ನಕ್ಕು ಸುಮ್ಮನಾಗುತ್ತದೆ. ಹಾಗಯೇ ರೈಲಿನೊಳಗೆ ಆಹಾರ ಸೇವಿಸಬಾರದು ಎಂಬ ಎಚ್ಚರಿಕೆಯನ್ನು ನೀಡಲಾಗಿದೆ.
ಇದನ್ನೂ ಓದಿ: ಮೆಟ್ರೋದಲ್ಲಿ ಮದ್ಯ ಸೇವಿಸಿ, ಪೊಲೀಸರ ಅತಿಥಿಯಾದ ಪೋಲಿ!
ತಮಾಷೆಯ ಅನೌನ್ಸ್‌ಮೆಂಟ್‌ಗಳು
ಎಚ್ಚರಿಕೆಯ ಅನೌನ್ಸ್‌ಮೆಂಟ್ ಜೊತೆಯಲ್ಲಿ ಮೆಟ್ರೋ ಸಿಬ್ಬಂದಿ ಪ್ರಯಾಣಿಕರೊಂದಿಗೆ ತಮಾಷೆಯನ್ನು ಸಹ ಮಾಡಿದ್ದಾರೆ. ಒಂದೇ ರೀತಿಯ ಡ್ರೆಸ್ ಧರಿಸಿ ಬಂದಿದ್ದಕ್ಕೆ ತಮಾಷೆ ಮಾಡಲಾಗಿದೆ. ಬಾಲಕನೋರ್ವ ಆಟಿಕೆಯೊಂದಿಗೆ ಆಟವಾಡುತ್ತಿರುತ್ತಾನೆ. ಈ ವೇಳೆ ಮೆಟ್ರೋದಲ್ಲಿ ಆಟವಾಡುವಂತಿಲ್ಲ ಎಂದು ತಮಾಷೆ ಮಾಡುತ್ತಾರೆ. ಈ ಅನೌನ್ಸ್‌ಮೆಂಟ್ ಕೇಳುತ್ತಿದ್ದಂತೆ ಪ್ರಯಾಣಿಕರೆಲ್ಲರೂ ಜೋರಾಗಿ ನಗುತ್ತಾರೆ.
ಮನರಂಜನೆ ಕೇಂದ್ರವಾಗಿರೋ ದೆಹಲಿ ಮೆಟ್ರೋ
ದೆಹಲಿ ಮೆಟ್ರೋ ಒಂದು ರೀತಿಯಲ್ಲಿ ಮನರಂಜನೆಯ ಕೇಂದ್ರವಾಗಿ ಬದಲಾಗಿದೆ. ಮೆಟ್ರೋ ಪ್ರಯಾಣದ ವೇಳೆ ನಿಮಗೆ ಇಲ್ಲಿ ಹಾಡು ಹೇಳುವವರು, ಡ್ಯಾನ್ಸ್ ಮಾಡುವವರು ಕಾಣಿಸುತ್ತಾರೆ. ಯುವ ಸಮುದಾಯದವರು ರೀಲ್ಸ್ ಮಾಡುವಲ್ಲಿ ಬ್ಯುಸಿಯಾಗುತ್ತಿರುತ್ತಾರೆ. ಇದರ ಜೊತೆಯಲ್ಲಿ ಆಸನಕ್ಕಾಗಿ ಜಗಳವಾಡುವ ಮಹಿಳೆಯರ ಕಿತ್ತಾಟದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ.
ಇದನ್ನೂ ಓದಿ: Bengaluru: ಮೆಟ್ರೋ ನಿಲ್ದಾಣದಲ್ಲೇ ಯುವ ಜೋಡಿಯ ರೋಮ್ಯಾನ್ಸ್, ಇದೆಂಥಾ ಅಸಹ್ಯ ಎಂದ ನೆಟ್ಟಿಗರು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ