
ಒಸ್ಟನ್: ಭ್ರಷ್ಟಾಚಾರ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಭಾರತೀಯ ಮೂಲದ ಅಮೆರಿಕನ್ ಕೌಂಟಿ ನ್ಯಾಯಾಧೀಶರನ್ನು ಬಂಧಿಸಲಾಗಿದೆ. ಪೋರ್ಟ್ ಬೆಂಡ್ ಕೌಂಟಿ ಜಡ್ಜ್ ಕೆಪಿ ಜಾರ್ಜ್ ಬಂಧಿತ ನ್ಯಾಯಾಧೀಶರು. 2018 ರಿಂದ ಕೌಂಟಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವ ಕೆಪಿ ಜಾರ್ಜ್ ಅವರನ್ನು ಶುಕ್ರವಾರ ಮಧ್ಯಾಹ್ನ 3:30 ರ ಸುಮಾರಿಗೆ ಬಂಧಿಸಿ ಕೌಂಟಿ ಜೈಲಿಗೆ ಕಳುಹಿಸಲಾಯ್ತು. ನಂತರ $20,000 ಡಾಲರ್ (ಎಂದರೆ ಭಾರತದ 17,10,627 ಲಕ್ಷ) ಶ್ಯೂರಿಟಿ ಪಡೆದು ಜಾಮೀನು ನೀಡಿ ಬಿಡುಗಡೆ ಮಾಡಲಾಯ್ತು.
ಪ್ರಮುಖ ಚುನಾಯಿತ ಅಧಿಕಾರಿಯೂ ಆಗಿದ್ದ ಕೆ ಪಿ ಜಾರ್ಜ್ ಅವರನ್ನು ಅಕ್ರಮ ಹಣ ವರ್ಗಾವಣೆ ಹಾಗೂ ವೈರ್ ವಂಚನೆ, ಪ್ರಚಾರ ಹಣಕಾಸು ವರದಿಯ ಸುಳ್ಳು ಆರೋಪಗಳ ಕಾರಣಕ್ಕೆ ಬಂಧಿಸಲಾಗಿದೆ. (ವೈರ್ ಫ್ರಾಡ್ ಅಥವ್ ವೈರ್ ವಂಚನೆ ಎಂದರೆ ಯಾರನ್ನಾದರೂ ಹಣ ಅಥವಾ ಸೂಕ್ಷ್ಮ ಮಾಹಿತಿಯನ್ನು ಕಳುಹಿಸುವಂತೆ ವಂಚಿಸಲು ಎಲೆಕ್ಟ್ರಾನಿಕ್ ಸಂವಹನಗಳಾದ ಫೋನ್, ಇಮೇಲ್, ಪಠ್ಯ ಅಥವಾ ಸೋಶಿಯಲ್ ಮೀಡಿಯಾದತಹ) ವಸ್ತುಗಳನ್ನು ಬಳಸಿ ಮಾಡುವ ವಂಚನೆಯಾಗಿದೆ.
ಆದರೆ ತಮ್ಮ ವಿರುದ್ಧ ಹೊರಿಸಲಾಗಿರುವ ಎಲ್ಲಾ ಆರೋಪಗಳನ್ನು ಕೆಪಿ. ಜಾರ್ಜ್ ನಿರಾಕರಿಸಿದ್ದಾರೆ. ಈ ಆರೋಪಗಳು ರಾಜಕೀಯ ಪ್ರೇರಿತವಾಗಿವೆ ಎಂದು ಅವರು ಹೇಳಿದ್ದಾರೆ. ನ್ಯಾಯಾಲಯದ ದಾಖಲೆಗಳು ಮತ್ತು ಫೋರ್ಟ್ ಬೆಂಡ್ ಕೌಂಟಿ ಜಿಲ್ಲಾ ಅಟಾರ್ನಿ ಕಚೇರಿಯ ಪ್ರಕಾರ ಜಾರ್ಜ್ ಅವರು $30,000 ರಿಂದ $150,000 ವರೆಗೆ ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪ ಹೊರಿಸಲಾಗಿದೆ.
ಆದರೆ ಈ ಹೊಸ ಆರೋಪಗಳು 2023 ರ ಪ್ರತ್ಯೇಕ ದೋಷಾರೋಪಣೆಗೆ ಸಂಬಂಧಿಸಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ, ಇದರಲ್ಲಿ ಜಾರ್ಜ್ ಮತ್ತು ಮಾಜಿ ಮುಖ್ಯಸ್ಥ ತರಲ್ ಪಟೇಲ್ ಅವರು ಜಾರ್ಜ್ ಅವರ 2022 ರ ಅಭಿಯಾನದ ವಿರುದ್ಧ ವಂಚನೀಯ ಸಾಮಾಜಿಕ ಜಾಲತಾಣ ಖಾತೆಗಳನ್ನು ರಚಿಸುವ ಮೂಲಕ ನಕಲಿ ಜನಾಂಗೀಯ ದಾಳಿಗಳನ್ನು ರೂಪಿಸಿದ್ದಾರೆ ಎಂದು ಆರೋಪಿಸಲಾಗಿದೆ. ನಮ್ಮ ಕಚೇರಿಯು ನಮ್ಮ ಸಾರ್ವಜನಿಕರಿಗೆ ಅರ್ಹವಾದ ಸಮಗ್ರತೆ ಮತ್ತು ಎಲ್ಲಾ ಪ್ರಾಸಿಕ್ಯೂಟರ್‌ಗಳು ಪ್ರಮಾಣವಚನ ಸ್ವೀಕರಿಸುವಂತಹ ನೈತಿಕತೆಗೆ ಬದ್ಧವಾಗಿದೆ ಎಂದು ಡಿಎ ಕಚೇರಿ ಈ ಬಂಧನದ ನಂತರ ಅಧಿಕೃತ ಹೇಳಿಕೆ ನೀಡಿದೆ. ಇತ್ತ ಭ್ರಷ್ಟಾಚಾರದ ಆರೋಪಕ್ಕೊಳಗಾಗಿರುವ ಜಾರ್ಜ್ ಅವರು ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದು. ನ್ಯಾಯಾಂಗ ವ್ಯವಸ್ಥೆಯಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ ಮತ್ತು ನನ್ನ ಮುಗ್ಧತೆಯನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ