ರಷ್ಯಾ(ಮಾ.04): ಉಕ್ರೇನ್ ಮೇಲೆ ಯುದ್ಧ(Russia Ukraine War) ಸಾರಿ 9 ದಿನಗಳು ಸಂದಿದೆ. ಬಹುತೇಕ ಉಕ್ರೇನ್ ಪ್ರದೇಶಗಳನ್ನು ಧ್ವಂಸ ಮಾಡಿರುವ ರಷ್ಯಾ ರಣಕೇಕೆ ಹಾಕುತ್ತಿದೆ. ನಗರ, ವಿಮಾನ ನಿಲ್ದಾಣ, ಸರ್ಕಾರಿ ಕಚೇರಿಗಳ ಪ್ರದೇಶ ಸೇರಿದಂತೆ ಹಲವು ಪ್ರದೇಶಗಳನ್ನು ರಷ್ಯಾ ಕೈವಶ ಮಾಡಿಕೊಂಡಿದೆ. ಅಮೆರಿಕ, ಜರ್ಮನಿ, ಯುಕೆ, ಯೂರೋಪಿಯನ್ ರಾಷ್ಟ್ರಗಳು ರಷ್ಯಾ ಮೇಲೆ ಆರ್ಥಿಕ ದಿಗ್ಬಂಧನದ ಎಚ್ಚರಿಕೆ ನೀಡಿದೆ. ಆದರೆ ರಷ್ಯಾ ಮಾತ್ರ ಅದ್ಯಾವುದನ್ನು ತಲೆಗೆ ಹಾಕಿಕೊಂಡಿಲ್ಲ. ಯುದ್ಧದಲ್ಲಿ ರಷ್ಯಾ ಯಶಸ್ಸು ಸಾಧಿಸಿದೆ ನಿಜ. ಆದರೆ ರಷ್ಯಾ ಭವಿಷ್ಯಕ್ಕೆ ಕಾರ್ಪೋರೇಟ್(Corporate Company) ಕಂಪನಿಗಳು ಬಹುದೊಡ್ಡ ಹೊಡೆತ ನೀಡಿದೆ.
ರಷ್ಯಾ ಯುದ್ಧ ನಿಲ್ಲಿಸದ ಕಾರಣ ಹಲವು ಕಾರ್ಪೋರೇಟ್ ಕಂಪನಿಗಳು ರಷ್ಯಾದಿಂದ ಕಾಲ್ಕೀಳಲು ಮುಂದಾಗಿದೆ. ರಷ್ಯಾದಲ್ಲಿನ ನಡೆಯುತ್ತಿದ್ದ ಉತ್ಪಾದನೆ ಸ್ಥಗಿತಗೊಳಿಸಿದೆ. ರಷ್ಯಾ ಸರ್ಕಾರವನ್ನು ಆರ್ಥಿಕ ಸಂಕಷ್ಟ, ಉತ್ಪಾದನೆ ಸಂಕಷ್ಟ, ರಫ್ತು ಸಂಕಷ್ಟಕ್ಕೆ ಸಿಲುಕಿಸಲು ಕಾರ್ಪೋರೇಟ್ ಕಂಪನಿಗಳು ಮುಂದಾಗಿದೆ. ಇತ್ತ ಯುದ್ಧ ಘೋಷಣೆಯಾದ ಬಳಿಕ ಸ್ಟಾಕ್ ಮಾರ್ಕೆಟ್, ಡಿರವೇಟೀವ್ ಮಾರ್ಕೆಟ್ ತೆರೆದಿಲ್ಲ. ಹೀಗಾಗಿ ಹೂಡಿಕೆದಾರರಿಕೆ ಕೋಟಿ ಕೋಟಿ ರೂಪಾಯಿ ನಷ್ಟವಾಗಿದೆ. ಹೀಗಾಗಿ ಹಲವು ಬಹುರಾಷ್ಟ್ರೀಯ ಕಂಪನಿಗಳು ಈಗಾಗಲೇ ರಷ್ಯಾ ತೊರೆದಿದೆ. ಇನ್ನು ಕೆಲ ಕಂಪನಿಗಳು ಶೀಘ್ರದಲ್ಲೇ ರಷ್ಯಾ ತೊರೆಯಲು ನಿರ್ಧರಿಸಿದೆ.
undefined
ಆರ್ಥಿಕ ದಿಗ್ಬಂಧನಕ್ಕೆ ರಷ್ಯಾ ಡೋಂಟ್ ಕೇರ್, ಸೀಕೆಟ್ ಬಹಿರಂಗ!
ಸಬ್ರೆ:
ರಷ್ಯಾ ಸರ್ಕಾರದ ಜೊತೆ ಬಹುದೊಡ್ಡ ಪಾಲುದಾರಿಕೆ ಹೊಂದಿರುವ ಸಬ್ರೆ ಕಂಪನಿ ಈಗಾಗಲೇ ಒಪ್ಪಂದ ಕಡಿತಗೊಳಿಸಿದೆ. ಏರ್‌ಲೈನ್ಸ್, ಫ್ಲೈಟ್ ಮ್ಯಾನೇಜ್ಮೆಂಟ್, ಪೂರೈಕೆ ಸೇರಿದಂತೆ ವಿಮಾನಯಾನದಲ್ಲಿ ರಷ್ಯಾದ ಏರೋಫ್ಲೋಟ್ ಜೊತೆ ಪಾಲುದಾರಿಕೆ ಹೊಂದಿತ್ತು. ಇದೀಗ ಈ ಒಪ್ಪಂದ ಕಡಿತಗೊಂಡಿದೆ.
ಎನರ್ಜಿ ಸಂಸ್ಥೆ:
ರಷ್ಯಾದಲ್ಲಿನ ಅತೀ ದೊಡ್ಡ ಎನರ್ಜಿ ಫರ್ಮ್ಸ್ ರಷ್ಯಾ ತೊರೆದಿದೆ.ರಷ್ಯಾದಲ್ಲಿ ಅತೀ ಹೆಚ್ಚು ಹೂಡಿಕೆ ಮಾಡಿರುವ ಬಿಪಿ ಕಂಪನಿ ಶೇಕಡಾ 20 ರಷ್ಟು ಪಾಲು ಹೊಂದಿದೆ. ಆದರೆ ಬಿಪಿ ರಷ್ಯಾ ತೊರೆಯಲು ನಿರ್ಧಿರಿಸಿದೆ. ಇನ್ನೂ ನಾರ್ವೆ ಮೂಲದ ಇಕ್ವೀನಾರ್ ಕಂಪನಿ ರಷ್ಯಾ ತೊರದಿದೆ.
Ukraine Crisis ಉಕ್ರೇನ್‌ನಿಂದ ಭಾರತೀಯರ ರಕ್ಷಣೆ ಮಾಡುತ್ತಿರುವ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಶಹಹಬ್ಬಾಸ್!
ಆಟೋಮೊಬೈಲ್ ಕ್ಷೇತ್ರ
ಜನರಲ್ ಮೋಟಾರ್, ಡೈಲ್ಮರ್, ವೋಕ್ಸ್‌ವ್ಯಾಗನ್, ವೋಲ್ವೋ ಸೇರಿದಂತೆ ಹಲವು ಆಟೋ ಕಂಪನಿಗಳು ರಷ್ಯಾಗೆ ವಾಹನ ಪೂರೈಕೆ ನಿಲ್ಲಿಸಿದೆ.
ಟೆಕ್ ಕಂಪನಿ:
ಮೈಕ್ರೋಸಾಫ್ಟ್ ತನ್ನ ವಿಂಡೋಸ್ ಆ್ಯಪ್ ಸ್ಟೋರ್‌ನಿಂದ ರಷ್ಯಾದ ಆರ್‌ಟಿ ಮೊಬೈಲ್ ಆ್ಯಪ್ಲಿಕೇಶನ್ ಹೊರಗಿಟ್ಟಿದೆ. ರಷ್ಯಾ ಸರ್ಕಾರ ಜಾಹೀರಾತುಗಳನ್ನು ನಿಂತ್ರಿಸಲಾಗಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ರಷ್ಯಾದ ಜಾಹೀರಾತು ಸೇರಿದಂತೆ ಇತರ ಆ್ಯಪ್ಲಿಕೇಶನ್ ನಿರ್ಬಂಧ ವಿಧಿಸಿದೆ.
ಪರಿಣಿತರು ಹೇಳುವುದೇನು:
ರಷ್ಯಾ ಕಚ್ಚಾ ತೈಲ, ಕೃಷಿ, ತಂತ್ರಜ್ಞಾನ, ಮಿಲಿಟರಿ ರಫ್ತು ಸೇರಿದಂತ ಹಲವು ಮೂಲಗಳಿಂದ ಆದಾಯ ಪಡೆಯುತ್ತಿದೆ. ಇದರಲ್ಲಿ ಕಾರ್ಪೋರೇಟ್ ಕಂಪನಿಗಳು, ಅವುಗಳ ಉತ್ಪಾದನೆಯಿಂದಲೂ ಬಹುಪಾಲು ಪಡೆಯುತ್ತಿದೆ. ಇದೀಗ ಬಹುರಾಷ್ಟ್ರೀಯ ಕಂಪನಿಗಳು ರಷ್ಯಾ ತೊರೆಯಲು ಮುಂದಾಗಿದೆ. ಇದರಿಂದ ರಷ್ಯಾದಲ್ಲಿ ಮುಂದಿನ ದಿನಗಳಲ್ಲಿ ಅಸಮತೋಲ ಸೃಷ್ಟಿಯಾಗಲಿದೆ. ಕೆಲ ಕ್ಷೇತ್ರಗಳಲ್ಲಿ ಉದ್ಯೋಗ ಸಮಸ್ಯೆ ಅನುಭವಿಸಲಿದೆ.
ರಷ್ಯಾ ದಾಳಿ:
ಉಕ್ರೇನ್‌ನ ಮಹಾನಗರಗಳನ್ನು ವಶಪಡಿಸಿಕೊಳ್ಳುವ ರಷ್ಯಾದ ಹರಸಾಹಸ ಯುದ್ಧದ 8ನೇ ದಿನವಾದ ಗುರುವಾರ ಕೂಡಾ ಮುಂದುವರೆದಿದ್ದು, ಇದೀಗ ಪ್ರಮುಖ ಕರಾವಳಿ ನಗರುಗಳಿಗೆ ರಷ್ಯಾ ಸೇನೆ ಲಗ್ಗೆ ಇಟ್ಟಿದೆ. ಈ ದಿಸೆಯಲ್ಲಿ ಗುರುವಾರ ಮೊದಲ ಗೆಲುವು ಸಾಧಿಸಿರುವ ರಷ್ಯಾ ಪಡೆಗಳು ಕಡಲ ನಗರಿ ಖಾರ್ಸನ್ ವಶಪಡಿಸಿಕೊಂಡಿವೆ. ಜೊತೆಗೆ ಇನ್ನೊಂದು ಕರಾವಳಿ ನಗರಿ ಮರಿಯುಪೋಲ್ ಅನ್ನು ಸುತ್ತುವರೆದಿದ್ದು, ಒಡೆಸ್ಸಾ ನಗರದ ವಶಕ್ಕೆ ಯುದ್ಧ ನೌಕೆ ಮತ್ತು ರಾಕೆಟ್ ಬೋಟ್‌ಗಳೊಂದಿಗೆ ದಾಂಗುಡಿ ಇಟ್ಟಿದೆ ಎಂದು ವರದಿಗಳು ತಿಳಿಸಿವೆ. ಉಳಿದಂತೆ ರಾಜಧಾನಿ ಕೀವ್, ಖಾರ್ಕಿವ್ ಸೇರಿದಂತೆ ಇತರೆ ನಗರಗಳ ಮೇಲೂ ದಾಳಿ ಮುಂದುವರೆದಿದೆಯಾದರೂ ಉಕ್ರೇನ್‌ನ ಸೇನಾ ಪಡೆಗಳು ತೀವ್ರ ಪ್ರತಿರೋಧ ಒಡ್ಡುತ್ತಿರುವ ಕಾರಣ ಭಾರೀ ಬೀದಿ ಕಾಳಗ ಮುಂದುವರೆದಿದೆ.