ಕೊರೋನಾದಿಂದ ಆರ್ಥಿಕ ಸಂಕಷ್ಟ; ಭಾರತ- ರಷ್ಯಾ ಮಿಸೈಲ್ ಖರೀದಿ ಒಪ್ಪಂದ ಕುರಿತು ರಾಯಭಾರಿ ಸ್ಪಷ್ಟನೆ!

By Suvarna NewsFirst Published Apr 12, 2020, 5:41 PM IST
Highlights

ಕೊರೋನಾ ವೈರಸ್‌ನಿಂದ ಭಾರತದ ಮಾತ್ರವಲ್ಲ ವಿಶ್ವದ ಆರ್ಥಿಕ ಪರಿಸ್ಥಿತಿ ಪಾತಾಳಕ್ಕಿಳಿದಿದೆ. ಭಾರತ ಸಂಪೂರ್ಣ ಲಾಕ್‌ಡೌನ್ ಆಗಿದ್ದು, ಪ್ರತಿ ದಿನ ಕನಿಷ್ಠ 35 ಸಾವಿರ ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿದೆ. ಹೀಗಾಗಿ ರಷ್ಯಾದ ಜೊತೆ ಮಾಡಿಕೊಂಡಿರುವ  ಕೋಟಿ ಕೋಟಿ ರೂಪಾಯಿ ಮಿಸೈಲ್ ಖರೀದಿ ಒಪ್ಪಂದ ಏನಾಗಲಿದೆ ಅನ್ನೋ ಆತಂಕ ಶುರುವಾಗಿದೆ. ಇದಕ್ಕೆ ರಷ್ಯಾದಲ್ಲಿರುವ ಭಾರತದ ರಾಯಭಾರಿ ಸ್ಪಷ್ಟನೆ ನೀಡಿದ್ದಾರೆ.

ರಷ್ಯಾ(ಏ.12): ಕೊರೋನಾ ವೈರಸ್ ಆರ್ಭಟ ಹೆಚ್ಚಾಗುತ್ತಿದ್ದಂತೆ ಭಾರತವನ್ನು 21 ದಿನ ಲಾಕ್‌ಡೌನ್ ಮಾಡಲಾಗಿದೆ. ಇದೀಗ ಲಾಕ್‌ಡೌನ್ ಏಪ್ರಿಲ್ ಅಂತ್ಯದ ವರೆಗೆ ವಿಸ್ತರಣೆಯಾಗಲಿದೆ. ಕೊರೋನಾ ಸೋಂಕು, ಲಾಕ್‌ಡೌನ್‌ಗಳಿಂದ ಈಗಾಗಲೇ ಭಾರತದ ಆರ್ಥಿಕತ ಪರಿಸ್ಥಿತಿ ಪಾತಾಳಕ್ಕೆ ಕುಸಿದಿದೆ. ಹೀಗಾಗಿ ರಷ್ಯಾದಿಂದ S-400 ಮಿಸೈಲ್ ಖರೀದಿ ಒಪ್ಪಂದ ಏನಾಗಲಿದೆ ಅನ್ನೋ ಆತಂಕ ಹುಟ್ಟಿಕೊಂಡಿದೆ. ಆದರೆ ಈ ಕುರಿತು ಯಾವುದೇ ಅನುಮಾನ ಬೇಡ ಎಂದು ರಷ್ಯಾದಲ್ಲಿರುವ ಭಾರತದ ರಾಯಭಾರಿ ಬಾಲಾ ವೆಂಕಟೇಶ್ ವರ್ಮಾ ಹೇಳಿದ್ದಾರೆ.

ಲಾಕ್‌ಡೌನ್ ವಿಸ್ತರಣೆ: ಹೊಸ ಮಾರ್ಗ ಸೂಚಿ ಸಿದ್ಧ..!...

ಕೊರೋನಾ ವೈರಸ್ ಭಾರತ ಮಾತ್ರವಲ್ಲ ಇತರ ದೇಶಗಳನ್ನೂ ಸಂಕಷ್ಟಕ್ಕೆ ಸಿಲುಕಿಸಿದೆ ನಿಜ. ಆದರೆ ಕೊರೋನಾ ವೈರಸ್ ಕಾರಣ ಭಾರತ ಹಾಗೂ ರಷ್ಯಾದ ನಡುವಿನ ಮಿಲಿಟರಿ ಶಸ್ತ್ರಾಸ್ತ್ರ ಖರೀದಿ ಒಪ್ಪಂದಕ್ಕೆ ಯಾವುದೇ ಅಡ್ಡಿಯಾಗಲ್ಲ ಎಂದು ವೆಂಕಟೇಶ್ ವರ್ಮಾ ಹೇಳಿದ್ದಾರೆ. ಕೊರೋನಾ ವೈರಸ್ ಕಾರಣ ಹಡಗು ಸೇರಿದಂತೆ ಯಾವುದೇ ಸಾರಿಗೆ ವ್ಯವಸ್ಥೆ ಇರುವುದಿಲ್ಲ. ಹೀಗಾಗಿ ಡೆಲಿವರಿ ದಿನಾಂಕ ವ್ಯತ್ಯಾಸವಾಗಬಹುದು. ಇತರ ಯಾವುದೇ ಅಡ್ಡಿ ಆತಂಕವಿಲ್ಲ ಎಂದಿದ್ದಾರೆ.

S-400 ಮಿಸೈಲ್ ಹಾಗೂ ಒಪ್ಪಂದ ಕುರಿತ ಸಂಪೂರ್ಣ ವಿವರಕ್ಕಾಗಿ ಈ ವಿಡಿಯೋ ನೋಡಿ

"

ಕೊರೋನಾ ವಿಷವರ್ತುಲಕ್ಕೆ ಕರ್ನಾಟಕದ ಹೊಸ ಜಿಲ್ಲೆ, 18 ಅಲ್ಲ ಈಗ 19!

2018ರ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರ, ರಷ್ಯಾದ ಜೊತೆ  S-400 ಮಿಸೈಲ್ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. 2021ರ ಅಂತ್ಯದಲ್ಲಿ ಮೊದಲ ಹಂತದ   S-400 ಮಿಸೈಲ್ ಭಾರತ ತಲುಪಲಿದೆ ಎಂದು ರಷ್ಯಾ ಹೇಳಿತ್ತು. ಇದೀಗ ಕೊರೋನಾ ವೈರಸ್ ಕಾರಣ ಕೊಂಚ ವಿಳಂಬವಾಗುವ ಸಾಧ್ಯತೆ ಇದೆ. ಇದಕ್ಕಾಗಿ ಭಾರತ ಈಗಾಗಲೇ ಒಪ್ಪಂದ ಮಾಡಿಕೊಂಡಾಗಿದೆ. ಹೀಗಾಗಿ ಸರ್ಕಾರದ ಪೂರ್ವನಿಯೋಜಿತ ಕಾರ್ಯಕ್ರಮಗಳು, ಯೋಜನೆಗಳಿಗೆ ಯಾವುದೇ ಸಮಸ್ಯೆಯಾಗಲ್ಲ ಎಂದು ಬಾಲಾ ವೆಂಕಟೇಶ್ ವರ್ಮಾ ಹೇಳಿದ್ದಾರೆ.

click me!