ವಿಶ್ವದ ಕೊರೋನಾ ಸಾವು 20 ಲಕ್ಷಕ್ಕೇರಿಕೆ, ಮೆಕ್ಕಾ, ವಿಯೆನ್ನಾ, ಬ್ರಸೆಲ್ಸ್‌ ಜನಸಂಖ್ಯೆಗೆ ಇದು ಸಮ!

By Suvarna NewsFirst Published Jan 17, 2021, 10:01 AM IST
Highlights

ಕಳೆದೊಂದು ವರ್ಷದಿಂದ ವಿಶ್ವವನ್ನು ಹೈರಾಣಾಗಿಸಿರುವ ಕೊರೋನಾ ವೈರಸ್| ವಿಶ್ವದ ಕೊರೋನಾ ಸಾವು 20 ಲಕ್ಷಕ್ಕೇರಿಕೆ| ಮೆಕ್ಕಾ, ವಿಯೆನ್ನಾ, ಬ್ರಸೆಲ್ಸ್‌ ಜನಸಂಖ್ಯೆಗೆ ಇದು ಸಮ!

ನ್ಯೂಯಾರ್ಕ್(ಜ.17): ಕಳೆದೊಂದು ವರ್ಷದಿಂದ ವಿಶ್ವವನ್ನು ಹೈರಾಣಾಗಿಸಿರುವ ಕೊರೋನಾ ವೈರಸ್‌ಗೆ ಈವರೆಗೆ ಬಲಿಯಾದವರ ಸಂಖ್ಯೆ 20 ಲಕ್ಷದ ಗಡಿಯನ್ನು ತಲುಪಿದೆ. ಬ್ರಸ್ಸೆಲ್ಸ್‌, ಮೆಕ್ಕಾ, ಮಿನ್ಸ್‌$್ಕ ಅಥವಾ ವಿಯೆನ್ನಾ ದೇಶಗಳು ಎಷ್ಟುಜನಸಂಖ್ಯೆ ಹೊಂದಿವೆಯೋ ಅಷ್ಟೇ ಜನರು ಮಾರಕ ವೈರಾಣುವಿನಿಂದ ಪ್ರಾಣ ಕಳೆದುಕೊಂಡಿದ್ದಾರೆ.

2020ರ ಜನವರಿಯಲ್ಲಿ ಚೀನಾದಲ್ಲಿ ಮೊದಲ ಸಾವು ಕಂಡುಬಂದಿತ್ತು. ಅದಾಗಿ ಒಂದೇ ವರ್ಷದಲ್ಲಿ ಸಾವಿನ ಸಂಖ್ಯೆ 20 ಲಕ್ಷಕ್ಕೇರಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಇದು 10 ಲಕ್ಷದ ಗಡಿಯನ್ನು ದಾಟಿತ್ತು. ಕೊರೋನಾ ಪ್ರಕರಣಗಳು 191 ದೇಶಗಳಲ್ಲಿ ಕಂಡುಬಂದಿದ್ದು, 9.4 ಕೋಟಿ ಮಂದಿ ಸೋಂಕಿತರಾಗಿದ್ದಾರೆ.

ಕೊರೋನಾ ವಿರುದ್ಧ ಜಾಗತಿಕ ಸಮನ್ವಯದ ಪ್ರಯತ್ನಗಳು ನಡೆಯುತ್ತಿಲ್ಲ. ಹೀಗಾಗಿ ಆ ವೈರಾಣುವಿನ ಪರಿಣಾಮ ಅಪಾಯಕಾರಿಯಾಗಿದೆ. ಎಲ್ಲ ದೇಶಗಳು ತಮ್ಮ ದೇಶಗಳಿಗೆ ಲಸಿಕೆ ಪಡೆಯಲು ಮುಂದಾಗಿರುವುದರಿಂದ ಜಾಗತಿಕ ಚೇತರಿಕೆಗೆ ಸೋಲಾಗುತ್ತಿದೆ ಎಂದು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೋನಿಯಂ ಗುಟೆರ್ರಸ್‌ ಬೇಸರ ವ್ಯಕ್ತಪಡಿಸಿದ್ದಾರೆ.

click me!