Covid19 Case ಏಷ್ಯಾದಲ್ಲಿ 10 ಕೋಟಿ ದಾಟಿದ ಕೋವಿಡ್‌ ಕೇಸ್, ಕೆಲ ಭಾಗದಲ್ಲಿ ಲಾಕ್‌ಡೌನ್!

By Kannadaprabha News  |  First Published Mar 31, 2022, 2:04 AM IST
  • ವೇಗವಾಗಿ ಹರಡುತ್ತಿದೆ ಒಮಿಕ್ರೋನ್‌ ಕೊರೋನಾ ರೂಪಾಂತರಿ
  • ಏಷ್ಯಾದಲ್ಲಿ ಪ್ರತಿ 2 ದಿನಕ್ಕೆ ಸರಾಸರಿ 10 ಲಕ್ಷ ಕೊರೋನಾ ಪ್ರಕರಣ
  • ಕೆಲ ಭಾಗಗಳಲ್ಲಿ ಲಾಕ್‌ಡೌನ್‌ ಜಾರಿ, ಭಾರತದಲ್ಲಿ ಕೇಸ್ ಇಳಿಮುಖ

ನವದೆಹಲಿ(ಮಾ.31): ಬಿಎ.2 ಒಮಿಕ್ರೋನ್‌ ಕೊರೋನಾ(Coronavirus) ರೂಪಾಂತರಿ ವೇಗವಾಗಿ ಹರಡುತ್ತಿರುವ ಪರಿಣಾಮ ಬುಧವಾರ ಏಷ್ಯಾದಲ್ಲಿ(Asia) ಕೊರೋನಾ ಸೋಂಕಿನ ಪ್ರಕರಣಗಳು 10 ಕೋಟಿ ಗಡಿ ದಾಟಿದೆ. ಏಷ್ಯಾದಲ್ಲಿ ಪ್ರತಿ 2 ದಿನಕ್ಕೆ ಸರಾಸರಿ 10 ಲಕ್ಷ ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿದ್ದು, ಜಗತ್ತಿನ ಒಟ್ಟು ಸೋಂಕಿತರ ಪೈಕಿ ಶೇ.21ರಷ್ಟುಮಂದಿ ಏಷ್ಯಾದವರಾಗಿದ್ದಾರೆ. ಈ ಪೈಕಿ ಭಾರತ(India) ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ದಕ್ಷಿಣ ಕೊರಿಯಾ, ಜಪಾನ್‌ ಮತ್ತು ವಿಯೆಟ್ನಾಂ ಇವೆ. ಇನ್ನು ಚೀನಾದ ಕೆಲ ಭಾಗಗಳಲ್ಲಿ ಇತ್ತೀಚೆಗೆ ಮತ್ತೆ ಕೊರೋನಾ ಸೋಂಕು ಏರಿಕೆಯಾಗುತ್ತಿದ್ದು, ಕೆಲ ಭಾಗಗಳಲ್ಲಿ ಲಾಕ್‌ಡೌನ್‌(Lockdown ಜಾರಿ ಮಾಡಿದೆ. ಇನ್ನು ಭಾರತದಲ್ಲಿ ಸೋಂಕು ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದೆ. ಏಷ್ಯಾದಲ್ಲಿ ಈವರೆಗೆ 10 ಲಕ್ಷ ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

ರಾಜ್ಯದಲ್ಲಿ ಬರೀ 35 ಕೇಸ್‌, 1 ಸಾವು: ಈವರೆಗಿನ ಕನಿಷ್ಠ
ರಾಜ್ಯದಲ್ಲಿ ಬುಧವಾರ ಕೇವಲ 35 ಜನರಲ್ಲಿ ಕೋವಿಡ್‌ ಕೇಸು ಪತ್ತೆಯಾಗಿದ್ದು, ಓರ್ವ ಸೋಂಕಿತ ಸಾವನ್ನಪ್ಪಿದ್ದಾರೆ. ಕೋವಿಡ್‌ ಸೋಂಕಿನ ಪ್ರಮಾಣವು ಸಾರ್ವಕಾಲಿಕ ಕನಿಷ್ಠವಾಗಿದೆ. ರಾಜ್ಯದಲ್ಲಿ ಕೋವಿಡ್‌ ಅಬ್ಬರದ ಆರಂಭದಲ್ಲಿ ಅಂದರೆ 2020ರ ಮೇ 14ಕ್ಕೆ 28 ಪ್ರಕರಣ ವರದಿಯಾದ ಬಳಿಕದ ಅತ್ಯಂತ ಕಡಿಮೆ ಪ್ರಕರಣ ಪತ್ತೆಯಾಗಿದೆ. ಕಳೆದ ಆರು ದಿನಗಳಿಂದ ರಾಜ್ಯದ ದೈನಂದಿನ ಕೋವಿಡ್‌ ಪ್ರಕರಣ ಎರಡಂಕಿ ದಾಟಿಲ್ಲ. 27,577 ಕೋವಿಡ್‌ ಪರೀಕ್ಷೆ ನಡೆದಿದ್ದು ಪಾಸಿಟಿವಿಟಿ ದರ ಶೇ.0.12ಕ್ಕೆ ಕುಸಿದಿದೆ. ಇದು ಸಾರ್ವಕಾಲಿನ ಕನಿಷ್ಠ ಪಾಸಿಟಿವಿಟಿ ದರ.

Tap to resize

Latest Videos

undefined

ಚೀನಾದಲ್ಲಿ ಮತ್ತೆ ಕೊರೋನಾರ್ಭಟ: ಕರ್ನಾಟಕದಲ್ಲೂ ಮುಂಜಾಗ್ರತಾ ಕ್ರಮ

ಬೆಂಗಳೂರು ನಗರದಲ್ಲಿ 25, ರಾಮನಗರ, ಕೋಲಾರ ತಲಾ 2, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಕ್ಷಿಣ ಕನ್ನಡ, ಕಲಬುರಗಿ ಮತ್ತು ಉಡುಪಿಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.

ಬೆಂಗಳೂರು ಗ್ರಾಮಾಂತರದಲ್ಲಿ ರಾಜ್ಯದ ಏಕೈಕ ಸಾವು ದಾಖಲಾಗಿದೆ. ಕಳೆದ ಐದು ದಿನದಿಂದ ರಾಜ್ಯದಲ್ಲಿ ಪ್ರತಿದಿನ ಒಂದು ಸಾವು ಮಾತ್ರ ವರದಿ ಆಗುತ್ತಿದೆ. 105 ಮಂದಿ ಚೇತರಿಸಿಕೊಂಡಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ 1,585 ಇದೆ. ಬೀದರ್‌, ದಾವಣಗೆರೆ, ಧಾರವಾಡ, ಗದಗ, ಹಾಸನ, ಹಾವೇರಿ, ಕೊಪ್ಪಳ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳಿಲ್ಲ. ರಾಜ್ಯದಲ್ಲಿ ಈವರೆಗೆ 39.45 ಲಕ್ಷ ಮಂದಿಯಲ್ಲಿ ಕೋವಿಡ್‌ ಪತ್ತೆಯಾಗಿದ್ದು 39.03 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 40,053 ಮಂದಿ ಮರಣವನ್ನಪ್ಪಿದ್ದಾರೆ.

Covid Crisis: ಶಾಂಘೈ ಲಾಕ್‌ಡೌನ್‌: ನಾಯಿ ಜತೆಗೂ ಹೊರಬರುವಂತಿಲ್ಲ..!

ಉಡುಪಿ: 1 ಕೋವಿಡ್‌ ಪ್ರಕರಣ ಪತ್ತೆ 
ಜಿಲ್ಲೆಯಲ್ಲಿ ಬುಧವಾರ 229 ಮಂದಿಗೆ ಕೋವಿಡ್‌ ಪರೀಕ್ಷೆ ಮಾಡಲಾಗಿದ್ದು, ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲೀಗ 4 ಸಕ್ರಿಯ ಸೋಂಕಿತರಿದ್ದು, ಒಬ್ಬರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದಿನ 2 ಮಂದಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 539 ಸೋಂಕಿತರು ಮೃತಪಟ್ಟಿದ್ದಾರೆ. 53 ಮಂದಿ ಸೋಂಕಿತರಲ್ಲಿ ಬ್ಲಾಕ್‌ ಫಂಗಸ್‌ ಪತ್ತೆಯಾಗಿದ್ದು, ಅವರಲ್ಲಿ 7 ಮಂದಿ ಮೃತಪಟ್ಟಿದ್ದಾರೆ.

ಒಂದು ಕಡೆ ಚೀನಾ ಹಾಗೂ ಪಾಶ್ಚಾತ್ಯ ದೇಶಗಳಲ್ಲಿ ಒಮಿಕ್ರೋನ್‌ ಬಿಎ.2 ರೂಪಾಂತರಿ ಹಾವಳಿ ಹೆಚ್ಚಿದ್ದರೂ, ವಿಶ್ವದಾದ್ಯಂತ ಒಟ್ಟಾರೆ ಕೊರೋನಾ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದೆ. ಕಳೆದ ವಾರ ಶೇ.23ರಷ್ಟುಕಡಿಮೆ ಪ್ರಕರಣಗಳು ವರದಿ ಆಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ತಿಳಿಸಿದೆ.ಕಳೆದ ವಾರ ಜಗತ್ತಿನಾದ್ಯಂತ 1 ಕೋಟಿ ಕೊರೋನಾ ಸೋಂಕು ಪ್ರಕರಣಗಳು ದೃಢಪಟ್ಟರೆ, 45,000 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದು ಅದರ ಹಿಂದಿನ ವಾರಕ್ಕಿಂತತ ಶೇ.23ರಷ್ಟುಕಡಿಮೆ ಪ್ರಕರಣ ಎಂದು ಅದು ಹೇಳಿದೆ.

click me!