ಕೊರೋನಾ ಜನಕ ವುಹಾನ್ ನಗರದಲ್ಲಿ ಶಾಲೆಗಳ ಪುನರ್ ಆರಂಭ!

By Suvarna NewsFirst Published Aug 29, 2020, 5:37 PM IST
Highlights

ಕೊರೋನಾ ವೈರಸ್ ವಕ್ಕರಿಸಿದ ಬಳಿ ಶಾಲಾ ಕಾಲೇಜುಗಳು ಮುಚ್ಚಲಾಗಿದೆ. ಇತ್ತ ಕೊರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಶಾಲೆಗಳ ಆರಂಭಕ್ಕೆ ಮತ್ತಷ್ಟು ವಿಘ್ನ ಎದುರಾಗಿತ್ತಿದೆ. ಆದರೆ ಕೊರೋನಾ ಹುಟ್ಟಿದ ಚೀನಾದ ವುಹಾನ್ ನಗರದಲ್ಲಿ ಶಾಲೆ ಮತ್ತೆ ಆರಂಭಗೊಳ್ಳುತ್ತಿದೆ.
 

ವುಹಾನ್(ಆ.29): ಕೊರೋನಾ ವೈರಸ್ ಸೃಷ್ಟಿಸಿದ ಅವಾಂತರ ಅಷ್ಟಿಷ್ಟಲ್ಲ. ಕಚೇರಿಗಳು ಮುಚ್ಚಿವೆ. ಶಾಲೆಗಳು ತೆರಯಲು ಸಾಧ್ಯವಾಗುತ್ತಿಲ್ಲ. ನಷ್ಟ ತಾಳಲಾರದೆ ಹಲವು ಕಂಪನಿಗಳು ಬಾಗಿಲು ತೆರೆಯುತ್ತಿಲ್ಲ. ಆದರೆ ಕೊರೋನಾ ಹುಟ್ಟಿದ ಚೀನಾದ ವುಹಾನ್‌ನಲ್ಲೀಗ ಎಲ್ಲವೂ ಸಹಜ ಸ್ಥಿತಿಗೆ ಮರಳಿದೆ. ಇದರ ಬೆನ್ನಲ್ಲೇ ಶಾಲೆ ಪುನರ್ ಆರಂಭಗೊಳ್ಳುತ್ತಿದೆ. 

ಅಮೆರಿಕಕ್ಕೆ ನ್ಯೂಯಾರ್ಕ್, ಚೀನಾಗೆ ವುಹಾನ್, ಭಾರತಕ್ಕೆ ಮುಂಬೈ ಮಾರಿ..!.

Latest Videos

ಸೆಪ್ಟೆಂಬರ್ 1 ರಿಂದ ವುಹಾನ್ ನಗರದಲ್ಲಿ ಶಾಲೆಗಳು, ಕಿಂಡರ್‌ಗಾರ್ಡನ್ ಪುನರ್ ಆರಂಭಗೊಳ್ಳುತ್ತಿದೆ. ವುಹಾನ್ ನಗರದಲ್ಲಿ ಒಟ್ಟು 2,842 ಶಾಲೆಗಳಿವೆ. 1.4 ಮಿಲಿಯನ್ ವಿದ್ಯಾರ್ಥಿಗಳಿದ್ದಾರೆ. ಕೆಲ ಮಾರ್ಗಸೂಚಿಗಳೊಂದಿಗೆ ವುಹಾನ್ ನಗರದಲ್ಲಿ ಶಾಲೆಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ.

ಕೊರೋನಾ ಬ್ಲಂಡರ್‌: ತನಗೆ ತಾನೇ ಕ್ಲೀನ್‌ಚಿಟ್‌ ಕೊಟ್ಟುಕೊಂಡ ಚೀನಾ!.

ಮಾಸ್ಕ್, ಸಾಮಾಜಿಕ ಅಂತರ ಕಡ್ಡಯವಾಗಿದೆ. ಇನ್ನು ಶಾಲಾ ಮಕ್ಕಳು, ವಿದ್ಯಾರ್ಥಿಗಳು ಸಾರ್ವಜನಿಕ ಸಾರಿಗೆ ಬಳಕೆ ಮಾಡದಂತೆ ಸೂಚಿಸಲಾಗಿದೆ. ಸದ್ಯ ಆನ್‌ಲೈನ್ ಮೂಲಕ ಶಾಲೆಗಳು ನಡೆಯುತ್ತಿದೆ. ಆದರೆ ಶಾಲಾ ಮಕ್ಕಳ ಕಲಿಕಗೆ ಆನ್ ಲೈನ್ ತರಗತಿಗಳು ಹೆಚ್ಚು ಉಪಯುಕ್ತವಲ್ಲ. ಅನಿವಾರ್ಯವಾಗಿ ಈ ಮಾರ್ಗವನ್ನು ಅನುಸರಿಸಲಾಗಿದೆ. ಆದರೆ ವುಹಾನ್ ನಗರ ಸಂಪೂರ್ಣ ಕೊರೋನಾ ಮುಕ್ತಗೊಂಡಿರುವ ಕಾರಣ ಶಾಲೆಗಳು ಮತ್ತೆ ಆರಂಭಗೊಳ್ಳುತ್ತಿದೆ  ಎಂದಿದೆ.

ಹಲವು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವ ಮೂಲಕ ಶಾಲೆಗಳನ್ನು ತೆರಯಲಾಗುತ್ತಿದೆ ಎಂದು ವುಹಾನ್ ನಗರ ಆಡಳಿತ ಮಂಡಳಿ ಹೇಳಿದೆ. 

click me!