ಝೂಮ್‌ ಮೀಟಿಂಗ್‌ ವೇಳೆ ಕಾರ್ಯದರ್ಶಿಯೊಂದಿಗೆ ಸರ್ಕಾರಿ ಅಧಿಕಾರಿ ರಾಸಲೀಲೆ!

By Suvarna News  |  First Published Aug 29, 2020, 10:49 AM IST

ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ| ಕ್ಯಾಮೆರಾ ಆಫ್‌ ಮಾಡಲು ಮರೆತು ಎಡವಟ್ಟು| ಝೂಮ್‌ ಮೀಟಿಂಗ್‌ ವೇಳೆ ಸರ್ಕಾರಿ ಅಧಿಕಾರಿ ರಾಸಲೀಲೆ!


ಮನಿಲಾ(ಆ.29): ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಲು ಝೂಮ್‌ ಆ್ಯಪ್‌ ಹೆಚ್ಚಾಗಿ ಬಳಕೆ ಆಗುತ್ತಿದೆ. ಆದರೆ, ಕೆಲವರು ಸಭೆಯ ಬಳಿಕ ಕ್ಯಾಮೆರಾ ಆಫ್‌ ಮಾಡಲು ಮರೆತು ಎಡವಟ್ಟು ಮಾಡಿಕೊಳ್ಳುತ್ತಾರೆ.

ಆನ್‌ಲೈನ್ ಮೀಟಿಂಗ್ ಮಧ್ಯೆಯೇ ಜೋಡಿಯ ಲೈವ್ ಸೆಕ್ಸ್, ಆಡಿಯೋ ಮ್ಯೂಟ್ ಮಾಡಿದ್ರು!

Tap to resize

Latest Videos

undefined

ಅದೇ ರೀತಿ ಸರ್ಕಾರಿ ಸಭೆಯೊಂದಕ್ಕೆ ಝೂಮ್‌ ಆ್ಯಪ್‌ ಮೂಲಕ ಭಾಗಿಯಾದ ಫಿಲಿಪ್ಪೀನ್ಸ್‌ನ ಸರ್ಕಾರಿ ಅಧಿಕಾರಿಯೊಬ್ಬ ತನ್ನ ಕಾರ್ಯದರ್ಶಿಯ ಜೊತೆ ರಾಸಲೀಲೆ ನಡೆಸಿದ್ದು ಕೂಡ ಸಭೆಯ ವೇಳೆ ನೇರ ಪ್ರಸಾರಗೊಂಡಿದೆ. ಕ್ಯಾಪ್ಟನ್‌ ಜೀಸಸ್‌ ಎಸ್ಟಿಲ್‌ ಎಂಬಾತ ಲ್ಯಾಪ್‌ಟಾಪ್‌ನ ಕ್ಯಾಮೆರಾ ಆನ್‌ ಇದ್ದಿದ್ದು ಗೊತ್ತಾಗದೇ ಕಾರ್ಯದರ್ಶಿಯ ಜೊತೆ ಚಕ್ಕಂದದಲ್ಲಿ ತೊಡಗಿದ್ದ.

ಆದರೆ, ಸಭೆ ಇನ್ನೂ ಮುಗಿದಿರಲಿಲ್ಲ. ಹೀಗಾಗಿ ಸಭೆಯಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿ ಪುಕ್ಕಟೆ ಮನರಂಜನೆ ಪಡೆದುಕೊಂಡಿದ್ದಾರೆ!

ಕ್ಯಾಮೆರಾ ಮುಂದೆ ಬೆತ್ತಲೆಯಾಗಿ ಓಡಿದ ಪತ್ನಿ: ವರ್ಕ್‌ ಫ್ರಂ ಹೋಂನ ಫಜೀತಿ!

ಕೆಲ ದಿನಗಳ ಹಿಂದೆ ಬ್ರೆಜಿಲ್‌ನಲ್ಲೂ ಇಂತಹುದೇ ಘಟನೆ ನಡೆದಿತ್ತು. ಮೀಟಿಂಗ್ ನಡೆಯುತ್ತಿದ್ದ ವೇಳೆಯೇ ಜೋಡಿಯೊಂದು ಸೆಕ್ಸ್ ನಲ್ಲಿ ತೊಡಗಿದ್ದು ಕ್ಯಾಮರಾ ಆಫ್ ಮಾಡಲು ಮರೆತುಹೋಗಿದೆ ಬ್ರೆಜಿಲ್ ನ  ರಿಯೋ ಡಿ ಜನೈರೊ  ನಗರದ ಕೌನ್ಸಿಲ್ ಮೀಟಿಂಗ್ ನಲ್ಲಿ! ಲೈವ್ ಸ್ಟ್ರೀಮ್ ನಲ್ಲಿ ಮೀಟಿಂಗ್ ಪ್ರದರ್ಶನ ಸಹ ಆಗುತ್ತಿತ್ತು. ಶಾಲಾ ಮಕ್ಕಳಿಗೆ ಸೌಲಭ್ಯ  ನೀಡುವ ಸಂಬಂಧ ಸಭೆ ನಡೆಯುತ್ತಿತ್ತು. ಜೋಡಿ ಸೆಕ್ಸ್ ನಲ್ಲಿ ತೊಡಗಿದ್ದರೂ ಉಳಿದ ಸದಸ್ಯರು ಸಭೆಯನ್ನು ಮೊಟಕು ಮಾಡಲಿಲ್ಲ. ಯಾವ ಕ್ಯಾಮರಾದಲ್ಲಿ ಸೆಕ್ಸ್ ದೃಶ್ಯ ಬಿತ್ತಾರವಾಗುತ್ತಿತ್ತೋ ಅದರ ಆಡಿಯೋ ಬಂದ್ ಮಾಡಲು ತಿಳಿಸಿಲಾಗಿತ್ತೆಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

 

click me!